• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಎಸ್ ಧೋನಿಗೆ ರೆಹಮಾನ್ ಅರ್ಪಣೆ ಮಾಡಿದ ಸಾಂಗ್ಸ್ ಇದು!

|

ಮುಂಬೈ, ಏಪ್ರಿಲ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೇರೆ ಬೇರೆ ಕ್ಷೇತ್ರದ ದಿಗ್ಗಜರನ್ನು ಸೆಳೆದಿರುವುದರಲ್ಲಿ ಅಚ್ಚರಿಯೇನಿಲ್ಲ.

ಈ ಹಿಂದೆಯಲ್ಲ ಐಪಿಎಲ್ ಉದ್ಘಾಟನೆ ಸಂದರ್ಭದಲ್ಲಿ ಭರ್ಜರಿ ಹಾಡು, ಕುಣಿತ ಎಲ್ಲವೂ ಇರುತ್ತಿತ್ತು, ಸಿನಿಮಾ, ಸಂಗೀತ ಜಗತ್ತಿನ ಸೆಲೆಬ್ರಿಟಿಗಳು ಒಂದೊಂದು ತಂಡಕ್ಕೆ ರಾಯಭಾರಿಗಳಾಗಿ ಮಿಂಚಿದ್ದರು.

ಆದರೆ, ಕೊರೊನಾ ಕಾಲದಲ್ಲಿ ಸೆಲೆಬ್ರಿಟಿಗಳು ಕೊಂಚ ದೂರ ಉಳಿದಿದ್ದಾರೆ. ಆದರೆ, ಸ್ಟಾರ್ ಸ್ಫೋರ್ಟ್ಸ್ ಕ್ರಿಕೆಟ್ ಲೈವ್ ಕಾರ್ಯಕ್ರಮದಲ್ಲಿ ಆಸ್ಕರ್ ವಿಜೇತ ಸಂಗೀತ ದಿಗ್ಗಜ ಎ. ಆರ್ ರೆಹಮಾನ್ ಕಾಣಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಿಗೆ ಯಾವ ಯಾವ ಸಾಂಗ್ಸ್ ಅರ್ಪಣೆ ಮಾಡುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ರೆಹಮಾನ್, ನಾಯಕ ಎಂಎಸ್ ಧೋನಿಗೆ ಲಗಾನ್ ಚಿತ್ರದ ಸ್ಪೂರ್ತಿ ಗೀತೆ ''ಛಲೆ ಛಲೋ'' ಅರ್ಪಿಸುತ್ತೇನೆ, ತಂಡವನ್ನು ಮುನ್ನೆಡೆಸಲು ಈ ಹಾಡು ಸೂಕ್ತವಾಗಿದೆ ಎಂದರು.

ಪ್ರಮುಖ ಆಟಗಾರ ಸುರೇಶ್ ರೈನಾ ಅವರಿಗೆ ರಂಗೀಲಾ ಚಿತ್ರ ''ಮಾಂಗ್ತಾ ಹೈ ಕ್ಯಾ'' ಹಾಡು ಸೂಕ್ತ ಎಂದರು. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ತೆರೆಗೆ ಬರುತ್ತಿರುವ 99 ಸಾಂಗ್ಸ್ ಹೆಸರಿನ ಚಿತ್ರದ ಹಾಡುಗಳ ಬಿಡುಗಡೆಗೂ ಮುನ್ನ ಮಾಜಿ ಕ್ರಿಕೆಟರ್ ಬ್ರೆಟ್ ಲೀ ಅವರು ರೆಹಮಾನ್ ಅವರನ್ನು ಚುಟುಕಾಗಿ ಸಂದರ್ಶಿಸಿದರು. ಇಬ್ಬರು ಮುಕ್ಕಾಲಾ ಮುಖಾಬಲಾ.. ಹಾಡು ಹಾಡಿದರು.. ನಂತರ ಚೆನ್ನೈ ಆಟಗಾರರಿಗೆ ಹಾಡುಗಳ ಅರ್ಪಣೆ ಮಾಡಿದರು.

English summary
IPL 2021: Oscar Winner AR Rahman has dedicated with 'Chale Chalo' from the movie Lagaan to Chennai Super Kings(CSK) skipper MS Dhoni as it motivates to play together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X