ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯಂತ ನಿರೀಕ್ಷೆ ಗೇಮಿಂಗ್ ಚಾಂಪಿಯನ್‍ಶಿಪ್ ಟಿಇಜಿಸಿ ಸದ್ಯದಲ್ಲೇ ಪ್ರಾರಂಭ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 02: ಕೋವಿಡ್-19 ವ್ಯವಸ್ಥೆಯನ್ನೇ ದುರ್ಬಲಗೊಳಿಸಿದೆ ಮತ್ತು ಜನರಿಗೆ ಮನೆಗಳಲ್ಲಿಯೇ ಉಳಿದು ಸ್ವಾರಸ್ಯವಿಲ್ಲದ ಜೀವನ ನಡೆಸುವಂತೆ ಮಾಡಿದೆ. ಗೇಮಿಂಗ್ ಜಗತ್ತು ನೂರಾರು ಮತ್ತು ಸಾವಿರಾರು ಇ ಸ್ಪೋರ್ಟ್ಸ್ ಉತ್ಸಾಹಿಗಳು ಹಾಗೂ ಹೊರಹೋಗಲು ಬಯಸುವ ಹವ್ಯಾಸಿಗಳಿಗೆ ಹೊಸ ಸಾಹಸಗಳ ಬಾಗಿಲುಗಳನ್ನು ತೆರೆದಿದೆ. ಈ ಉತ್ಸಾಹವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ತೈವಾನ್ ಎಕ್ಸೆಲೆನ್ಸ್(ಟಿ.ಇ) ಅವರ ವಾರ್ಷಿಕ ಮತ್ತು ಭಾರತದ ಅತ್ಯಂತ ದೀರ್ಘವಾದ ಗೇಮಿಂಗ್ ಚಾಂಪಿಯನ್‍ಶಿಪ್-ತೈವಾನ್ ಎಕ್ಸೆಲೆನ್ಸ್ ಗೇಮಿಂಗ್ ಕಪ್(ಟಿ.ಇ.ಜಿ.ಸಿ) 2021 ಪ್ರಾರಂಭಿಸಲು ಸಜ್ಜಾಗಿದೆ.

ವರ್ಚುಯಲ್ ಮಾದರಿಗೆ ಮೀಸಲಾಗಿಯೂ ಸ್ಪರ್ಧೆಯ ಉತ್ಸಾಹ ಉಳಿಸಿಕೊಳ್ಳುವಲ್ಲಿ ಟಿ.ಇ.ಜಿ.ಸಿ. ಅತ್ಯುತ್ತಮ ಭಾರತದ ಗೇಮರ್‍ಗಳು ಮತ್ತು ತಂಡಗಳನ್ನು ಆವಿಷ್ಕರಿಸಿ, ಉತ್ತೇಜಿಸಿ ಸಂಭ್ರಮಿಸಲಿದೆ. ಈ ತಂಡಗಳು ವೆಲೊರೆಂಟ್, ರೈನ್‍ಬೋ 6 ಸೀಜ್ ಮತ್ತು ಕಾಲ್ ಆಫ್ ಡ್ಯೂಟಿ ಮೊಬೈಲ್‍ನಂತಹ ಟಾಪ್ ಇಸ್ಪೋರ್ಟ್ಸ್ ಕ್ರೀಡೆಗಳಲ್ಲಿ ಚಾಂಪಿಯನ್‍ಶಿಪ್‍ಗೆ ಹೋರಾಟ ನಡೆಸಲಿದ್ದಾರೆ.

ಗೇಮಿಂಗ್ ವ್ಯಸನಕ್ಕೆ ಚೀನಾ ಹಾಕುತ್ತಿದೆ ಕಡಿವಾಣ!

ಈ ಸಾಂಕ್ರಾಮಿಕದ ನಡುವೆಯೂ ಗೇಮಿಂಗ್ ಉದ್ಯಮವು ಮುಂಚೂಣಿಯಲ್ಲಿದೆ. ಇವೈ ವರದಿಯ ಪ್ರಕಾರ ಭಾರತದ ಇಸ್ಪೋರ್ಟ್ಸ್ ಉದ್ಯಮವು ಮುಂದಿನ ನಾಲ್ಕು ವರ್ಷಗಳಲ್ಲಿ ಹೂಡಿಕೆಗಳು, ಇನ್-ಆ್ಯಪ್ ಖರೀದಿಗಳು, ನೇರ ಉದ್ಯಮದ ಆದಾಯಗಳು ಮತ್ತು ಹೆಚ್ಚುವರಿ ಆದಾಯಗಳ ರೂಪದಲ್ಲಿ 100 ಬಿಲಿಯನ್ ರೂ.ಗಳ ಆರ್ಥಿಕ ಪರಿಣಾಮ ಉಂಟು ಮಾಡಲಿದೆ. ಇಸ್ಪೋರ್ಟ್ಸ್ ಟೂರ್ನಮೆಂಟ್‍ಗಳಿಂದ ಜನಪ್ರಿಯವಾದ ಗೇಮ್ಸ್ ಇನ್-ಆ್ಯಪ್ ಖರೀದಿಗಳಿಂದ 14 ಬಿಲಿಯನ್ ರೂ. ಆದಾಯ ಉತ್ಪಾದಿಸಲಿದೆ. ಉದ್ಯಮವು 2025ರ ವೇಳೆಗೆ 300 ಮಿಲಿಯನ್ ರೂ.ಗಳನ್ನು ಮೀರಿ ಪೂರಕ ಆದಾಯ ಸೃಷ್ಟಿಸುವ ನಿರೀಕ್ಷೆ ಇದೆ.

India’s most awaited gaming championship TEGC to begin soon

ತಂಡಗಳು ನಾಲ್ಕು ಅರ್ಹತಾ ಸುತ್ತುಗಳಲ್ಲಿ ಪ್ರತ್ಯೇಕವಾಗಿ ಭಾಗವಹಿಸುತ್ತವೆ; ಪ್ರತಿ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ತಂಡಗಳು ಡಿಸೆಂಬರ್ 4 ಮತ್ತು 5ರಂದು ನಡೆಯುವ ವೈಟ್-ನಕಲ್ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿವೆ. ನೋಂದಣಿಗಳು ಆಗಸ್ಟ್ 17ರಿಂದ ಪ್ರಾರಂಭವಾಗುತ್ತವೆ ಮತ್ತು ಅರ್ಹತಾ ಸುತ್ತುಗಳು ಸೆಪ್ಟೆಂಬರ್ 16ರಿಂದ ಪ್ರಾರಂಭಗೊಂಡು ನವೆಂಬರ್ 21ರವರೆಗೆ ನಡೆಯಲಿವೆ. ವೇಲೊರೆಂಟ್ ಮತ್ತು ಸಿಒಡಿಎಂನ ಅಂತಿ ಸುತ್ತು ಅಧಿಕೃತ ತೈವಾನ್ ಎಕ್ಸೆಲೆನ್ಸ್ ಇಂಡಿಯಾ ಚಾನೆಲ್‍ಗಳಲ್ಲಿ ಪ್ರಸಾರವಾಗಲಿವೆ ಮತ್ತು ವಿಜೇತರಿಗೆ ರೂ.10,00,000/- ಮೌಲ್ಯದ ಬೃಹತ್ ಬಹುಮಾನದ ನಿಧಿಯನ್ನು ವಿತರಿಸಲಾಗುತ್ತದೆ.

ಈ ವರ್ಷ ಟಿಇಜಿಸಿಯನ್ನು ತೈವಾನಿನ ಪ್ರಮುಖ ಬ್ರಾಂಡ್‍ಗಳಾದ ಏಸರ್, ಎಡಿಎಟಿಎ, ಏಸಸ್, ಏವರ್‌ಮೀಡಿಯಾ, ಬೆನ್‍ಕ್ಯೂ, ಡಿ-ಲಿಂಕ್, ಗಿಗಾಬೈಟ್, ಇನ್‍ವಿನ್, ಎಂಎಸ್‍ಐ, ಟೀಮ್‍ಗ್ರೂಪ್, ಥರ್ಮಾಲ್ಟೇಕ್, ಸಿಲಿಕಾನ್ ಪವರ್, ಟ್ರಾನ್ಸೆಂಡ್, ಝಡಕ್ ಮತ್ತು ಝೈಕ್ಸೆಲ್ ಬೆಂಬಲಿಸಿದ್ದವು.

English summary
Taiwan Excellence (TE) is all set to roll out the eighth edition of their annual and India’s longest-running gaming championship — Taiwan Excellence Gaming Cup (TEGC) 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X