ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ ಕುಸ್ತಿಪಟು ದಿವ್ಯಾ

|
Google Oneindia Kannada News

ನವದೆಹಲಿ, ಆಗಸ್ಟ್ 11: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕುಸ್ತಿಪಟು ದಿವ್ಯಾ ಕಾಕ್ರನ್ ಕಂಚಿನ ಪದಕ ಗೆದ್ದ ಸಂಭ್ರಮದ ಬೆನ್ನಲ್ಲೇ ನೋವು ತೋಡಿಕೊಂಡಿದ್ದಾರೆ. ಮತ್ತೊಮ್ಮೆ ಎಎಪಿ ಸರ್ಕಾರ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಕಳೆದ 20 ವರ್ಷಗಳಿಂದ ನಾನು ದೆಹಲಿಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಕುಸ್ತಿಯನ್ನು ಅಭ್ಯಾಸ ಮಾಡಿದ್ದೇನೆ ಆದರೆ ಇಲ್ಲಿಯವರೆಗೆ ನನಗೆ ಯಾವುದೇ ಹಣವನ್ನು ನೀಡಿಲ್ಲ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದು ದಿವ್ಯಾ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದರು.

ದೆಹಲಿ ಸರ್ಕಾರ ನನಗೆ ಸಹಾಯ ಮಾಡಲಿಲ್ಲ: ಕಾಮನ್‌ವೆಲ್ತ್‌ ಗೇಮ್‌ನಲ್ಲಿ ಕಂಚು ಗೆದ್ದ ದಿವ್ಯಾ ಕಕ್ರಾನ್ ಬೇಸರದೆಹಲಿ ಸರ್ಕಾರ ನನಗೆ ಸಹಾಯ ಮಾಡಲಿಲ್ಲ: ಕಾಮನ್‌ವೆಲ್ತ್‌ ಗೇಮ್‌ನಲ್ಲಿ ಕಂಚು ಗೆದ್ದ ದಿವ್ಯಾ ಕಕ್ರಾನ್ ಬೇಸರ

ದಿವ್ಯಾ ಕಾಕ್ರನ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್, "ಇಡೀ ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಸಹೋದರಿ. ಆದರೆ ನೀವು ದೆಹಲಿಯ ಪರ ಆಡಿದ್ದು ನನಗೆ ನೆನಪಿಲ್ಲ. ನೀವು ಯಾವಾಗಲೂ ಉತ್ತರ ಪ್ರದೇಶಕ್ಕಾಗಿ ಆಡಿದ್ದೀರಿ. ಆದರೆ ಒಬ್ಬ ಆಟಗಾರ ದೇಶಕ್ಕೆ ಸೇರಿದವನು. ಯೋಗಿ ಆದಿತ್ಯನಾಥ್ ಅವರಿಂದ ನೀವು ಯಾವುದೇ ಪ್ರಶಸ್ತಿ ನಿರೀಕ್ಷಿಸುವುದಿಲ್ಲ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ನಿಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು" ಹೇಳಿದ್ದರು.

Indian wrestler Divya Kakran slams Delhi CM Arvind Kejriwal

"ನಾನು 2017 ರಲ್ಲಿ ಏಷ್ಯಾದಲ್ಲಿ ಪದಕ ಗೆದ್ದ ನಂತರ ಸಿಎಂ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ, ನಾನು ಅವರಿಗೆ ಲಿಖಿತ ಪತ್ರವನ್ನು ನೀಡಿದರೆ, ನನಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ನಾನು ಪತ್ರ ನೀಡಿದೆ, ಆದರೆ ಅವರು ನನಗೆ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ, ಜೊತೆಗೆ ಪೌಷ್ಠಿಕಾಂಶ, ಪ್ರಯಾಣ, ಇತರ ಯಾವುದೇ ವೆಚ್ಚಗಳು ಕೈ ಸೇರಲಿಲ್ಲ, '' ಎಂದು ದಿವ್ಯಾ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಇದೇ ವೇಳೆ ಯುಪಿ ಸರ್ಕಾರವು ಬೆಂಬಲ ನೀಡಿದ್ದಕ್ಕಾಗಿ ಶ್ಲಾಘಿಸಿದರು. 2019ರಲ್ಲಿ ಯುಪಿ ಸರ್ಕಾರವು ರಾಣಿ ಲಕ್ಷ್ಮಿ ಬಾಯಿ ಪ್ರಶಸ್ತಿಯನ್ನು ನೀಡುವ ಮೂಲಕ ತನ್ನ ಸಾಧನೆಗಳನ್ನು ಹೇಗೆ ಗುರುತಿಸಿದೆ ಎಂದರು. "2020 ರಲ್ಲಿ ಅವರು ನನಗೆ ಜೀವಿತಾವಧಿಯ ಪಿಂಚಣಿ ನೀಡಿದರು. ನಿನ್ನೆ, ಅವರು 50 ಲಕ್ಷ ರೂ ಮತ್ತು ಗೆಜೆಟೆಡ್ ಅಧಿಕಾರಿ ಶ್ರೇಣಿಯ ಹುದ್ದೆಯನ್ನು ಘೋಷಿಸಿದರು. ಯುಪಿ ಸರ್ಕಾರ ನನಗೆ ಸಹಾಯ ಮಾಡಿದೆ, ಹರಿಯಾಣ ಸರ್ಕಾರವೂ ಮಾಡಿದೆ. ಆದರೆ ದೆಹಲಿ ಎಂದಿಗೂ ಸಹಾಯಕ್ಕೆ ಬರಲಿಲ್ಲ" ಎಂದು ದಿವ್ಯಾ ಹೇಳಿದರು.

Indian wrestler Divya Kakran slams Delhi CM Arvind Kejriwal

ತನ್ನ ಹೋರಾಟದ ಹಾದಿಯನ್ನು ಸ್ಮರಿಸಿಕೊಂಡ ದಿವ್ಯಾ "ನಾನು ಅತ್ಯಂತ ಬಡತನದಿಂದ ಬಂದಿದ್ದೇನೆ, ಪ್ರಯಾಣಿಸಲು ಹಣವಿರಲಿಲ್ಲ, ರೈಲಿನ ಶೌಚಾಲಯಗಳ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ, ಸ್ಪರ್ಧಿಯಾಗಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದ್ದೆ. ದೆಹಲಿ ಸರ್ಕಾರ ನಮಗೆ ಎಂದಿಗೂ ಸಹಾಯ ಮಾಡಲಿಲ್ಲ. ನಾನು 2018ರಲ್ಲಿ ಯುಪಿಯಿಂದ ಕಣಕ್ಕಿಳಿಯಲು ಪ್ರಾರಂಭಿಸಿದೆ."

ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆದು, ರಾಜ್ಯಕ್ಕೆ 58 ಪದಕಗಳನ್ನು ಗಳಿಸಿದ ನಂತರವೂ ಸರ್ಕಾರದಿಂದ ಯಾವುದೇ ಮಾನ್ಯತೆ ಅಥವಾ ಬೆಂಬಲವನ್ನು ಪಡೆದಿಲ್ಲ ಎಂದರು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದಿಂದ ಯಾವುದೇ ಆರ್ಥಿಕ ಪ್ರಯೋಜನಗಳನ್ನು ನೀಡಿಲ್ಲ ಎಂದು ದೂರಿದ ನಂತರ ಎಎಪಿ ಸಾಮಾಜಿಕ ಮಾಧ್ಯಮ ತಂಡವು ಕಕ್ರಾನ್ ಅವರನ್ನು "ಅವಮಾನಕರವಾಗಿ" ಟ್ರೋಲ್ ಮಾಡಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಪ್ರತಿಕ್ರಿಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂನಾವಾಲಾ ಅವರು ದೆಹಲಿಯನ್ನು ಪ್ರತಿನಿಧಿಸುವ ಬಗ್ಗೆ ಕಾಕ್ರನ್ ಪ್ರಮಾಣಪತ್ರವನ್ನು ನೀಡಿದರೂ ಎಎಪಿ ಪುರಸ್ಕರಿಸಿಲ್ಲ. ಸೈನಿಕರು ಅಥವಾ ಕ್ರೀಡಾಪಟುಗಳು ರಾಷ್ಟ್ರಧ್ವಜದ ಗೌರವವನ್ನು ಹೆಮ್ಮೆಯಿಂದ ಎತ್ತಿ ಹಿಡಿಯುವವರನ್ನು ಅವಮಾನಿಸುವ ಇತಿಹಾಸವನ್ನು ಎಎಪಿ ಹೊಂದಿದೆ ಎಂದು ಆರೋಪಿಸಿದರು.

English summary
Indian freestyle wrestler Divya Kakran, who clinched a bronze medal in CWG '22, slammed Delhi chief minister Arvind Kejriwal for not extending support to the sportsperson even after assuring her of the same on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X