ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮನ್‌ವೆಲ್ತ್‌: ಚಿನ್ನ ಗೆದ್ದ ಮೀರಾಬಾಯಿ ಚಾನು, 4 ಪದಕ ಗೆದ್ದ ಭಾರತ

|
Google Oneindia Kannada News

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಭಾರತ ಕಾಮನ್‌ವೆಲ್ತ್‌ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಮೊದಲ ಚಿನ್ನದ ಪದಕ ಇದಾಗಿದೆ. ಭಾರತ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2018 ರಲ್ಲಿ ಚಾನು ಚಿನ್ನದ ಪದಕವನ್ನು ಗೆದ್ದಿದ್ದರು. ಈ ಬಾರಿಯೂ ಅವರು ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು. ಒಟ್ಟು 201 ಕೆ.ಜಿ. ಎತ್ತುವ ಮೂಲಕ ದಾಖಲೆಯನ್ನು ಮುರಿದು ಮೊದಲ ಸ್ಥಾನ ಪಡೆದುಕೊಂಡರು.

ಪುರುಷರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್‌ಪುರುಷರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗರ್‌

ಮಾರಿಷಸ್‌ನ ಮೇರಿ ಹನಿತ್ರಾ ರೊಯ್ಲ್ಯಾ ರಾನೈವೊಸೊವಾ (172 ಕೆಜಿ) ಬೆಳ್ಳಿ ಮತ್ತು ಕೆನಡಾದ ಹನ್ನಾ ಕಾಮಿನ್ಸ್ಕಿ (171 ಕೆಜಿ) ಕಂಚಿನ ಪದಕ ಪಡೆದರು.

ಇದು 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಭಾರತಕ್ಕೆ ಮೂರನೇ ಪದಕವಾಗಿದ್ದು, ಪುರುಷರ 55 ಕೆಜಿ ವಿಭಾಗದಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕವನ್ನು ಪಡೆದರು ಮತ್ತು ಪಿ. ಗುರುರಾಜ ಅವರು ಪುರುಷರ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು.

 ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ

ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ

ಬಿಂದ್ಯಾರಾಣಿ ದೇವಿ ಅವರು ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಬಿಂದ್ಯಾರಾಣಿ ದೇವಿ ಸ್ನ್ಯಾಚ್ ರೌಂಡ್ ಅನ್ನು 81 ಕೆಜಿ ಎತ್ತುವ ಮೂಲಕ ಸ್ಪರ್ಧೆ ಪ್ರಾರಂಭಿಸಿದರು, ಎರಡನೇ ಪ್ರಯತ್ನದಲ್ಲಿ 84 ಕೆ.ಜಿ. ಮತ್ತು ಮೂರನೇ ಪ್ರಯತ್ನದಲ್ಲಿ 86 ಕೆ.ಜಿ. ಎತ್ತಿದರು.

ನಂತರ ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲಿ 110 ಕೆಜಿ ಎತ್ತಿದರು. ಎರಡನೇ ಪ್ರಯತ್ನದಲ್ಲಿ 114 ಕೆ.ಜಿ. ಎತ್ತುವಲ್ಲಿ ವಿಫಲಾರದ ಬಿಂದ್ಯಾರಾಣಿ, ಮೂರನೇ ಪ್ರಯತ್ನದಲ್ಲಿ 116 ಕೆ.ಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು.

ಭಾರತದ ಎದುರು ಸೋತ ಪಾಕಿಸ್ತಾನದ ಬಾಕ್ಸರ್ ಮತ್ತು ಬ್ಯಾಡ್ಮಿಂಟನ್ ಟೀಮ್ಭಾರತದ ಎದುರು ಸೋತ ಪಾಕಿಸ್ತಾನದ ಬಾಕ್ಸರ್ ಮತ್ತು ಬ್ಯಾಡ್ಮಿಂಟನ್ ಟೀಮ್

 1 ಕೆ.ಜಿ ಅಂತರದಲ್ಲಿ ಕೈ ತಪ್ಪಿದ ಚಿನ್ನದ ಪದಕ

1 ಕೆ.ಜಿ ಅಂತರದಲ್ಲಿ ಕೈ ತಪ್ಪಿದ ಚಿನ್ನದ ಪದಕ

ವೇಟ್ ಲಿಫ್ಟಿಂಗ್‌ನ 55 ಕೆ.ಜಿ ಪುರುಷರ ವಿಭಾಗದಲ್ಲಿ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಗೆದ್ದರು. ಕೇವಲ 1 ಕೆ.ಜಿ ಅಂತರದಲ್ಲಿ ಸಂಕೇತ್ ಸರ್ಗರ್ ಚಿನ್ನದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.

ಸ್ನ್ಯಾಚ್‌ನಲ್ಲಿ 113 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 135 ಕೆ.ಜಿ. ಒಟ್ಟು 248 ಕೆ.ಜಿ ಎತ್ತಿದ ಸಂಕೇತ್ ಸರ್ಗರ್ ಬೆಳ್ಳಿ ಪದಕ ಗೆದ್ದರೆ ಒಟ್ಟು 249 ಕೆ.ಜಿ. ಎತ್ತಿದ ಮಲೇಷ್ಯಾದ ಅನಿಕ್ ಮೊಹಮದ್ ಚಿನ್ನದ ಪದಕ ಪಡೆದರು.

 ಟೇಬಲ್ ಟೆನಿಸ್‌ನಲ್ಲಿ ಸೋತ ಭಾರತ

ಟೇಬಲ್ ಟೆನಿಸ್‌ನಲ್ಲಿ ಸೋತ ಭಾರತ

ಮಹಿಳಾ ಟೇಬಲ್ ಟೆನಿಸ್‌ನಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಭಾರತ, ಮಲೇಷ್ಯಾ ವಿರುದ್ಧ ಕ್ವಾರ್ಟರ್‌ಫೈನಲ್ ಹಂತದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

ಸ್ಟಾರ್ ಆಟಗಾರ್ತಿ ಮನಿಕಾ ಬಾತ್ರಾ ನೇತೃತ್ವದ ತಂಡವು ಮಲೇಷ್ಯಾ ತಂಡದ ವಿರುದ್ಧ ರೋಚಕ ಹಣಾಹಣಿಯಲ್ಲಿ ಹೋರಾಡಿತು. ಅಂತಿಮ ಪಂದ್ಯದಲ್ಲಿ ಭಾರತ ತಂಡ 2-3 ಅಂತರದಿಂದ ಸೋತಿತು.

 ವೇಲ್ಸ್‌ ವಿರುದ್ಧ ಮಹಿಳಾ ಹಾಕಿ ತಂಡಕ್ಕೆ ಜಯ

ವೇಲ್ಸ್‌ ವಿರುದ್ಧ ಮಹಿಳಾ ಹಾಕಿ ತಂಡಕ್ಕೆ ಜಯ

ಘಾನಾ ವಿರುದ್ಧ 5-0 ಗೋಲುಗಳ ಅಂತರದ ಭರ್ಜರಿ ಜಯದ ಮೂಲಕ ಟೂರ್ನಿ ಆರಂಭಿಸಿದ ಭಾರತ ಮಹಿಳಾ ಹಾಕಿ ತಂಡ, ಎರಡನೇ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಕೂಡ 3-1 ಗೋಲುಗಳ ಅಂತರದ ಜಯ ಸಾಧಿಸುವ ಮೂಲಕ ಗೆಲುವಿನ ಓಟ ಮುಂದುವರೆಸಿದೆ.

ವಂದನಾ ಕಟಾರಿಯಾ ಅವರ ಬ್ರೇಸ್ ಮತ್ತು ಗುರ್ಜಿತ್ ಕೌರ್ ಅವರ ಗೋಲು ಅವರ ಎರಡನೇ ಪಂದ್ಯದಲ್ಲಿ 3-1 ಅಂತರದ ಗೆಲುವು ಸಾಧಿಸಲು ಕಾರಣವಾಯಿತು.

ಬಾಕ್ಸಿಂಗ್‌ ವಿಭಾಗದಲ್ಲಿ ಲೋವ್ಲಿನಾ ಬೊರ್ಗೊಹೈನ್ ನ್ಯೂಜಿಲೆಂಡ್‌ನ ಅರಿಯಾನೆ ನಿಕೋಲ್ಸನ್ ವಿರುದ್ಧ 30-27 ಅಂತರದಲ್ಲಿ ಗೆಲ್ಲುವ ಮೂಲಕ ಲೈಟ್ ಮಿಡಲ್‌ವೇಟ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತದ ಬಾಕ್ಸರ್ ಮೊಹಮ್ಮದ್ ಹಸ್ಸಾಮುದ್ದೀನ್ ಪ್ರೀ ಕ್ವಾರ್ಟರ್ಸ್‌ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಪುರುಷರ ಫೆದರ್‌ವೇಟ್ (54 ಕೆಜಿ-57 ಕೆಜಿ) ವಿಭಾಗದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಅಮ್ಜೋಲೆಲ್ ಡೈಯಿ ಅವರನ್ನು ಸೋಲಿಸಿದರು.

English summary
Mirabai Chanu secured the country's first gold medal in the CWG 2022, Sanket Sargar won the Silver Medal in the Men's 55 KG Weightlifting category. Bindyarani Devi secured for a silver medal in the 55 kg category for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X