ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್ ಕನಸು, ವಿರಾಟ್‌ ಕೊಹ್ಲಿ ನೆರವು ಕೇಳಿದ ಟೇಕ್ವಾಂಡೊ ಪ್ಲೇಯರ್

|
Google Oneindia Kannada News

ಶ್ರೀನಗರ, ಜುಲೈ 23: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಯುವ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್, ಆಗಸ್ಟ್‌ನಲ್ಲಿ ಇಸ್ರೇಲ್‌ನ ರಮ್ಲಾದಲ್ಲಿ ನಡೆಯಲಿರುವ ಒಲಿಂಪಿಕ್ ಶ್ರೇಯಾಂಕದ ಈವೆಂಟ್‌ನಲ್ಲಿ (ಜಿ 2) ಭಾಗವಹಿಸಲು ನೆರವಾಗುವಂತೆ ಪ್ರಸಿದ್ಧ ಕ್ರೀಡಾಪಟುಳು, ಎನ್‌ಜಿಒ ಹಾಗೂ ಕ್ರೀಡಾ ಸಚಿವಾಲಯದ ಸಹಾಯ ಹಸ್ತ ಕೋರಿದ್ದಾರೆ.

ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ರಾಮ್ಲಾದಲ್ಲಿ ನಡೆಯಲಿರುವ ಒಲಂಪಿಕ್ ಶ್ರೇಯಾಂಕದ ಸ್ಪರ್ಧೆಯಲ್ಲಿ (G2) ಡ್ಯಾನಿಶ್ ಭಾಗವಹಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಕೂ ವೇದಿಕೆಯಲ್ಲಿನ ವಿವಿಧ ಗಣ್ಯರ ಬಳಿ ಸಹಾಯ ಸ್ಪರ್ಧೆಗೆ ಭಾಗವಹಿಸುವುದಕ್ಕೆ ಅಗತ್ಯವಾಗಿರುವ ಧನ ಸಹಾಯ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಡ್ಯಾನೀಶ್ ಸಹಾಯ ಕೋರಿದವರಲ್ಲಿ ಭಾರತ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿಯೂ ಇದ್ದಾರೆ.

ಟ್ರಿಪಲ್‌ ಜಂಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಎಲ್ಡೋಸ್ ಪಾಲ್, ಜಮೈಕಾದ ಶೆರಿಕಾ ಜಾಕ್ಸನ್‌ಗೆ ಚಿನ್ನಟ್ರಿಪಲ್‌ ಜಂಪ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತದ ಎಲ್ಡೋಸ್ ಪಾಲ್, ಜಮೈಕಾದ ಶೆರಿಕಾ ಜಾಕ್ಸನ್‌ಗೆ ಚಿನ್ನ

"ನಾನು ಜಮ್ಮು ಕಾಶ್ಮೀರದ ಡ್ಯಾನಿಶ್ ಮಂಜೂರ್, ಅಂತರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಅಥ್ಲೀಟ್. ಇಸ್ರೇಲ್ ನ ರಾಮ್ಲಾದಲ್ಲಿ ಆಗಸ್ಟ್‌ 12 ರಿಂದ 15ರವರೆಗೆ ನಡೆಯುವ ಒಲಿಂಪಿಕ್ ಶ್ರೇಯಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ದುರದೃಷ್ಟಾವಶಾತ್ ನನಗೆ ಇನ್ನೂ ಯಾವುದೇ ಪ್ರಾಯೋಜಕತ್ವ ಸಿಕ್ಕಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ

Indian Taekwondo player seeks help from Virat Kohli for competing to Olympic ranking event

ವಿರಾಟ್ ಕೊಹ್ಲಿ, ಕೇಂದ್ರ ಕಾನೂನು ಸಚಿವ ಕಿರನ್ ರಿಜಿಜು, ಅಭಿನವ್ ಬಿಂದ್ರಾ, ಆಸಿಫ್ ಕಮಲ್ ಫೌಂಡೇಶನ್, ಸಂಜನಾ ಫೌಂಡೇಶನ್ ಖಾತೆಗಳನ್ನು ಟ್ಯಾಗ್ ಮಾಡಿ, ದಯಮಾಡಿ ಸಹಾಯ ಮಾಡುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ " ಎಂದು ಡ್ಯಾನಿಶ್ ಮಂಜೂರ್ ಕೂ ನಲ್ಲಿ ಬರೆದುಕೊಂಡಿದ್ದಾರೆ.

58 ಕೆಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವರಿಗೆ ಒಬ್ಬರ ಪ್ರಾಯೋಜಕತ್ವ ದೊರೆತಿದ್ದು, ಅವರು ರೂ.50,000 ನೀಡಲಿದ್ದಾರೆ ಮತ್ತು ಈಗ ಅವರಿಗೆ ತಮ್ಮ ಪ್ರಯಾಣ, ವೀಸಾ, ಹೋಟೆಲ್, ಆಹಾರ, ಮತ್ತು ಪ್ರವೇಶ ಶುಲ್ಕ ಸೇರಿದಂತೆ ರೂ.1,15,000 ಬೇಕಾಗಿದೆ. ಹಾಗಾಗಿ ಮತ್ತೊಬ್ಬ ಪ್ರಾಯೋಜಕರ ಹುಡುಕಾಟದಲ್ಲಿದ್ದಾರೆ.

2021 ರಲ್ಲಿ, ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ, ಪಂಜಾಬ್‌ನ ರೋಪರ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಡ್ಯಾನಿಶ್ ಬೆಳ್ಳಿ ಪದಕವನ್ನು ಗೆದ್ದಿದ್ದರು.

English summary
Danish Manzoor, a young Taekwondo athlete from Jammu and Kashmir seeks help from Indian cricketer Virat Kohli to help complete his dream to compete in the Olympics. He is looking for sponsorship to participate in the Olympic Ranking Event (G2) to be held in Ramla,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X