ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FICA ಅಧ್ಯಕ್ಷೆಯಾದ ಭಾರತೀಯ ಮೂಲದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್

|
Google Oneindia Kannada News

ಲಂಡನ್, ಜೂನ್ 21: ಲೆಜೆಂಡರಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್‌ ಲಿಸಾ ಸ್ಥಾಲೇಕರ್ ಫೆಡರೇಷನ್ ಆಫ್ ಇಂಟರ್ ನ್ಯಾಷನಲ್‌ ಕ್ರಿಕೆಟರ್ಸ್‌ ಅಸೋಸಿಯೇಷನ್‌(FICA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ನಿಯಾನ್ ನಡೆದ ಎಫ್‌ಐಸಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ 42 ವರ್ಷದ ಆಸ್ಟ್ರೇಲಿಯಾ ಮಹಿಳಾ ತಂಡದ ಮಾಜಿ ನಾಯಕಿ ಫೆಡರೇಷನ್‌ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಮಾಹಿತಿಯನ್ನು ದೃಢಪಡಿಸಲಾಗಿದೆ.

ಲಿಸಾ ಈ ಹಿಂದೆ ಸ್ಟಾರ್ ಕ್ರಿಕೆಟಿಗರಾದ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಬ್ಯಾರಿ ರಿಚರ್ಡ್ಸ್, ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಜಿಮ್ಮಿ ಆಡಮ್ಸ್ ಮತ್ತು ಇತ್ತೀಚೆಗೆ ಮಾಜಿ ಇಂಗ್ಲೆಂಡ್ ಬ್ಯಾಟರ್ ವಿಕ್ರಮ್ ಸೋಲಂಕಿ ಅಲಂಕರಿಸಿದ್ದ ಸ್ಥಾನವನ್ನು ಮುಂದಿನ ಅವಧಿಯವರೆಗೆ ವಹಿಸಿಕೊಳ್ಳಲಿದ್ದಾರೆ. ಲಿಸಾ ಸ್ಥಾಲೇಕರ್ ಅವರನ್ನು ಎಫ್‌ಐಸಿಎ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಎಫ್‌ಐಸಿಎ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ" ಎಂದು ಎಫ್‌ಐಸಿಎ ಹೇಳಿಕೆಯಲ್ಲಿ ಬಿಡುಗಡೆ ಮಾಡಿದೆ.

ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್

ಎಫ್‌ಐಸಿಎ ಮತ್ತು ವಿಶ್ವ ಆಟಗಾರರ ಸಂಘದ ಆಟಗಾರರ ಅಭಿವೃದ್ಧಿ ಸಮ್ಮೇಳನಗಳನಕ್ಕೂ ಈ ಕಾರ್ಯಾಕಾರಿ ಸಮಿತಿ ನಡೆದಿದೆ. ಇದು ಕೋವಿಡ್‌ -19 ಸಾಂಕ್ರಾಮಿಕ ಬಿಕ್ಕಟ್ಟಿನ ನಂತರ ಇದೇ ಮೊದಲ ಗುಂಪಿನ ಮೊದಲ ವೈಯಕ್ತಿಕ ಸಭೆಯಾಗಿತ್ತು.

 FICAಗೆ ಅಧ್ಯಕ್ಷೆಯಾದ ಮೊದಲ ಮಹಿಳಾ ಕ್ರಿಕೆಟರ್

FICAಗೆ ಅಧ್ಯಕ್ಷೆಯಾದ ಮೊದಲ ಮಹಿಳಾ ಕ್ರಿಕೆಟರ್

"ನಮ್ಮ ಸದಸ್ಯರೊಂದಿಗೆ ಸಮಾಲೋಚಿಸಿದ ನಂತರ, ಲಿಸಾ ಅವರನ್ನು ಎಫ್‌ಐಸಿಎ ಅಧ್ಯಕ್ಷರಾಗಿ ನೇಮಕ ಮಾಡಿದ್ದೇವೆ. ಅವರು ನಮ್ಮ ಮೊದಲ ಮಹಿಳಾ ಅಧ್ಯಕ್ಷರೆಂದು ಘೋಷಿಸಲು ನಾವು ಸಂತೋಷ ಪಡುತ್ತೇವೆ. ಲಿಸಾ ಸ್ಪಷ್ಟವಾಗಿ ಈ ಸ್ಥಾನದ ಅತ್ಯುತ್ತಮ ಅಭ್ಯರ್ಥಿಯಾಗಿದ್ದರು ಮತ್ತು ಮಾಜಿ ಆಟಗಾರ್ತಿ ಮತ್ತು ಪ್ರಸಾರಕರಾಗಿ ಅವರ ಕಾರ್ಯಕ್ಷಮತೆ ಅಸಾಧಾರಣವಾದ್ದು," ಎಂದು ಎಫ್‌ಐಸಿಎ ಕಾರ್ಯನಿರ್ವಾಹಕ ಅಧ್ಯಕ್ಷ ಹೀತ್ ಮಿಲ್ಸ್ ಹೇಳಿದ್ದಾರೆ.

 ಐಸಿಸಿಯೊಂದಿಗೆ ಕೆಲಸ ಮಾಡಲು ಉತ್ಸುಕ

ಐಸಿಸಿಯೊಂದಿಗೆ ಕೆಲಸ ಮಾಡಲು ಉತ್ಸುಕ

ಎಫ್‌ಐಸಿಎ ನೂತನ ಆಧ್ಯಕ್ಷೆಯಾಗಿ ಆಯ್ಕೆಯಾದ ಲಿಸಾ ತನ್ನ ಪಾತ್ರದ ಬಗ್ಗೆ ಮಾತನಾಡಿ, "ನಾವು ಪುರುಷ ಮತ್ತು ಮಹಿಳಾ ಆಟಗಾರರ ಹಿಂದೆಂದೂ ಕಾಣದ ಆಟದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ಹೆಚ್ಚಿನ ದೇಶಗಳು ಕ್ರಿಕೆಟ್ ಆಡುತ್ತಿರುವುದರಿಂದ, ಇದು ಜಾಗತಿಕ ಆಟವಾಗುತ್ತಾ ಸಾಗುತ್ತಿದೆ. ನಾನು ನಮ್ಮ ಆಟಗಾರರ ಸಂಘಗಳು ಮತ್ತು ಆಟಗಾರರ ಪರವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ನಮ್ಮ ಆಟವನ್ನು ಇನ್ನಷ್ಟು ಉತ್ತಮಗೊಳಿಸಲು ನಿರ್ವಾಹಕರ ಸಹಭಾಗಿತ್ವದಲ್ಲಿ ಐಸಿಸಿ ಯೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ," ಎಂದು ತಿಳಿಸಿದ್ದಾರೆ.

ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್‌: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್‌: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್

 1000 ರನ್,100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್

1000 ರನ್,100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್

ಸ್ಥಾಲೇಕರ್ ಆಸ್ಟ್ರೇಲಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ 187 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅವರು 2005 ಮತ್ತು 2013ರ ಏಕದಿನ ವಿಶ್ವಕಪ್‌ ಹಾಗೂ 2010 ಮತ್ತು 2012ರಲ್ಲಿ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡದ ಭಾಗವಾಗಿದ್ದರು. 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಮುಂಬೈನಲ್ಲಿ 2013ರ ಏಕದಿನ ವಿಶ್ವಕಪ್‌ ಗೆದ್ದ ನಂತರ ನಿವೃತ್ತಿ ಘೋಷಿಸಿದ್ದರು. ಈ ಮಧ್ಯೆ ಅವರು 125 ಏಕದಿನ ಪಂದ್ಯಗಳಿಂದ 2 ಶತಕ ಮತ್ತು 16 ಅರ್ಧಶತಕಗಳ ಸಹಿತ 2728 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಜೊತೆಗೆ ಪರಿಣಾಮಕಾರಿ ಆಫ್‌ ಸ್ಪಿನ್ನರ್ ಆಗಿದ್ದ ಅವರು ಈಗಲೂ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಟಾಪ್‌ 10 ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಅಲ್ಲದೆ ಮಹಿಳಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 146 ವಿಕೆಟ್ ಪಡೆದಿರುವ ಲಿಸಾ 8 ಟೆಸ್ಟ್ ಮತ್ತು 54 ಟಿ20 ಪಂದ್ಯಗಳನ್ನಾಡಿದ್ದು ಕ್ರಮವಾಗಿ 23 ಮತ್ತು 60 ವಿಕೆಟ್‌ ಪಡೆದುಕೊಂಡಿದ್ದಾರೆ. 2020ರಲ್ಲಿ ಐಸಿಸಿ ಹಾಲ್‌ ಆಫ್‌ ಫೇಮ್‌ ಮತ್ತು 2021ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ಹಾಲ್ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

 ಭಾರತದಲ್ಲಿ ಹುಟ್ಟಿ ಆಸ್ಟ್ರೇಲಿಯಾದಲ್ಲಿ ಬೆಳೆದ ಲಿಸಾ

ಭಾರತದಲ್ಲಿ ಹುಟ್ಟಿ ಆಸ್ಟ್ರೇಲಿಯಾದಲ್ಲಿ ಬೆಳೆದ ಲಿಸಾ

ಲಿಸಾ ಸ್ಥಾಲೇಕರ್ 1979 ಆಗಸ್ಟ್‌ 13ರಂದು ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ದಂಪತಿಗೆ ಜನಿಸಿದ್ದರು. ಇವರು ಮೂರು ವಾರದ ಮಗುವಾಗಿದ್ದಾಗ ಆಸ್ಟ್ರೇಲಿಯಾ-ಭಾರತ ದಂಪತಿಗಳಾದ ಹ್ಯಾರೆನ್‌ ಮತ್ತು ಸ್ಯೂ ಸ್ಥಾಲೇಕರ್ ದತ್ತು ತೆಗೆದುಕೊಂಡಿದ್ದರು. ಕ್ರಿಕೆಟ್ ಪ್ರಿಯರಾಗಿದ್ದ ಅವರ ತಂದೆ ಲಿಸಾರಲ್ಲಿ ಕ್ರಿಕೆಟ್‌ ಆಸೆಯನ್ನು ಬಿತ್ತಿದ್ದರು. ನಂತರ ಸಿಡ್ನಿಯ ಗಾರ್ಡನ್ ಕ್ಲಬ್‌ನಲ್ಲಿ ಕ್ರಿಕೆಟ್‌ ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಲೆಜೆಂಡರಿ ಕ್ರಿಕೆಟಿಗರಾಗಿ ಗುರುತಿಸಿಕೊಂಡರು. ನಿವೃತ್ತಿ ನಂತರ ಟಿವಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Former Australian cricketer Lisa Sthalekar has appointed president of the Federation of International Cricketers' Association. and she was become the first woman cricketer to appoint this post in FICA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X