ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CWG 2022: ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾ ಜೊತೆ ಸೆಣೆಸಲಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ

|
Google Oneindia Kannada News

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಪದಕ ಗೆಲ್ಲುವುದು ಖಚಿತವಾಗಿದೆ. ಸೆಮಿಫೈನಲ್‌ನಲ್ಲಿ ಅಜೇಯ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಭಾರತದ ವನಿತೆಯರು ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಮಹಿಳಾ ತಂಡ ಗೆದ್ದರೆ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬರಲಿದೆ, ಸೋತರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ತಂಡ, ನಂತರ ಪಾಕಿಸ್ತಾನ ಮತ್ತು ಬಾರ್ಬಡೋಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಮೂರು ಪಂದ್ಯಗಳ ಲೀಗ್ ಹಂತದಲ್ಲಿ ಭಾರತ ತಂಡ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು.

CWG 2022: ಟೈಲರಿಂಗ್ ಅಂಗಡಿಯಿಂದ ಕಂಚಿನ ಪದಕದವರೆಗೆ ಲವ್‌ಪ್ರೀತ್ ಸಿಂಗ್ ಸಾಧನೆಯ ಹಾದಿCWG 2022: ಟೈಲರಿಂಗ್ ಅಂಗಡಿಯಿಂದ ಕಂಚಿನ ಪದಕದವರೆಗೆ ಲವ್‌ಪ್ರೀತ್ ಸಿಂಗ್ ಸಾಧನೆಯ ಹಾದಿ

ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಇಂಗ್ಲೆಂಡ್‌ ತಂಡದ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವೇ ಗೆಲ್ಲುವ ಫೇವರಿಟ್ ಆಗಿತ್ತು, ಆದರೆ ಭಾರತದ ಮಹಿಳೆಯರ ಅಮೋಘ ಆಟದ ನೆರವಿನಿಂದ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ, ಇಂಗ್ಲೆಂಡ್ ತಂಡವನ್ನು ಸೋಲಿಸಿತು.

 ಸ್ಮೃತಿ ಮಂದಾನ ಭರ್ಜರಿ ಬ್ಯಾಟಿಂಗ್

ಸ್ಮೃತಿ ಮಂದಾನ ಭರ್ಜರಿ ಬ್ಯಾಟಿಂಗ್

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ತಂಡ ಇಂಗ್ಲೆಂಡ್ ಬೌಲಿಂಗ್‌ ಅನ್ನು ಸಮರ್ಥವಾಗಿಯೇ ಎದುರಿಸಿದರು. ಆರಂಟಿಕ ಬ್ಯಾಟರ್ ಸ್ಮೃತಿ ಮಂದಾನ ಸ್ಫೋಟಕ ಆಟವಾಡಿದರು. ಎದುರಿಸಿದ 32 ಎಸೆತಗಳಲ್ಲಿ 8 ಬೌಂಡರಿ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ 61 ರನ್‌ ಗಳಿಸಿದರು. ಭಾರತದ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಸ್ಮೃತಿ ಮಂದಾನ ದೊಡ್ಡ ಕೊಡುಗೆ ನೀಡಿದರು.

ಜೆಮಿಯಾ ರೋಡ್ರಿಗಸ್ 31 ಎಸೆತಗಳಲ್ಲಿ 44 ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್, ದೀಪ್ತಿ ಶರ್ಮಾ 22 ರನ್ ಗಳಿಸುವ ಮೂಲಕ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಕಲೆ ಹಾಕಿತು.

 ಅಂತಿಮ ಓವರ್ ನಲ್ಲಿ ಗೆದ್ದು ಬೀಗಿದ ಭಾರತ

ಅಂತಿಮ ಓವರ್ ನಲ್ಲಿ ಗೆದ್ದು ಬೀಗಿದ ಭಾರತ

165 ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭಿಕ ಆಟಗಾರರು ಸ್ಫೋಟಕ ಆಟಕ್ಕೆ ಮುಂದಾದರು, ಮೊದಲ ಓವರ್ ನಲ್ಲೇ ಎರಡು ಬೌಂಡರಿ ಸಹಿತ 12 ರನ್ ಗಳಿಸಿದರು, ಆದರೆ ಮೂರನೇ ಓವರ್ ನಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್ ಬ್ಯಾಟರ್ ಡಂಕ್ಲಿ ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು.

ಡೇನಿಯಲ್ ವ್ಯಾಟ್ 27 ಎಸೆತಗಳಲ್ಲಿ 25 ರನ್ ಗಳಿಸಿ ನಿರ್ಗಮಿಸಿದರು. ನಾಯಕಿ ನಟಾಲೀ ಸಿವೆರ್ 43 ಎಸೆತಗಳಲ್ಲಿ 41 ರನ್ ಗಳಿಸಿ ರನ್ ಔಟ್‌ಗೆ ಬಲಿಯಾದರು. ಅಂತಿಮ ಓವರ್ ನಲ್ಲಿ ಇಂಗ್ಲೆಂಡ್ ಜಯಕ್ಕೆ 14 ರನ್‌ಗಳ ಅಗತ್ಯವಿತ್ತು ಆದರೆ ಇಂಗ್ಲೆಂಡ್ 9 ರನ್‌ ಮಾತ್ರ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.

 ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ದಂಡ

ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡಕ್ಕೆ ದಂಡ

ಅಂತಿಮ ಓವರ್ ನಲ್ಲಿ ಭಾರತ ತಂಡ ಸರ್ಕಲ್‌ನ ಹೊರಗಡೆ ಒಬ್ಬ ಕಡಿಮೆ ಫೀಲ್ಡರ್ ನೊಂದಿಗೆ ಬೌಲ್ ಮಾಡಬೇಕಾಯಿತು. ಪವರ್ ಪ್ಲೇ ಹೊರತು ಪಡಿಸಿ ಮಿಕ್ಕ ಓವರ್ ಗಳಲ್ಲಿ ಸರ್ಕಲ್‌ನ ಹೊರಗಡೆ ನಾಲ್ಕು ಫೀಲ್ಡರ್ ಗಳು ಇರುತ್ತಾರೆ ಆದರೆ ಭಾರತ ತಂಡದ ತಪ್ಪಿನಿಂದ ಅಂತಿಮ ಓವರ್ ನಲ್ಲಿ ಮೂವರು ಫೀಲ್ಡರ್ ಗಳೊಂದಿಗೆ ಆಡಬೇಕಾಯಿತು. ಅದೃಷ್ಟವಶಾತ್ ಇದು ಪಂದ್ಯದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ನಿಧಾನಗತಿಯ ಓವರ್ ರೇಟ್‌ಗಾಗಿ ಟೀಂ ಇಂಡಿಯಾಗೆ ದಂಡ ವಿಧಿಸಲಾಯಿತು ಮತ್ತು ಹೊಸ ನಿಯಮಗಳ ಪ್ರಕಾರ, ನಿಗದಿತ ಸಮಯದಲ್ಲಿ ಸಂಪೂರ್ಣ ಓವರ್‌ಗಳನ್ನು ಬೌಲಿಂಗ್ ಮಾಡದ ತಂಡಕ್ಕೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ. ನಿಯಮಗಳ ಪ್ರಕಾರ, ತಂಡವು 20 ನೇ ಓವರ್ ಅನ್ನು 85ನೇ ನಿಮಿಷಕ್ಕೆ ಪ್ರಾರಂಭಿಸಬೇಕು. ಭಾರತವು ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡ ಕಾರಣ, ಅಂತಿಮ ಓವರ್ ಅನ್ನು ವೃತ್ತದ ಹೊರಗೆ ಒಬ್ಬ ಕಡಿಮೆ ಫೀಲ್ಡರ್‌ನೊಂದಿಗೆ ಬೌಲ್ ಮಾಡಲಾಯಿತು.

 ಆಸ್ಟ್ರೇಲಿಯಾವನ್ನು ಮಣಿಸಬೇಕಿದೆ ಭಾರತ

ಆಸ್ಟ್ರೇಲಿಯಾವನ್ನು ಮಣಿಸಬೇಕಿದೆ ಭಾರತ

ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮತ್ತೆ ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಭಾರತ -ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಇದುವರೆಗೂ ಸೋಲನ್ನೇ ಕಂಡಿಲ್ಲ.

ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಫೈನಲ್‌ನಲ್ಲೂ ಗೆಲುವು ಸಾಧಿಸುವ ಮೂಲಕ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಭಾರತ ತಂಡ ಕೂಡ ಬಲಿಷ್ಠವಾಗಿದ್ದು, ಭಾನುವಾರ ನಡೆಯಲಿರುವ ಪಂದ್ಯ ರೋಚಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.


English summary
Indian women's cricket team is enusure a medal at the Commonwealth Games. Indian women enter to the final after defeating the England team in the semi-final. Indian women's team will Play against Australia In Final.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X