ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್ ವಿರುದ್ಧ ಸೋಲು, WTC ಅಂಕಪಟ್ಟಿಯಲ್ಲಿ ಭಾರತ ಸ್ಥಾನವೆಷ್ಟು?

|
Google Oneindia Kannada News

ಬರ್ಮಿಂಗ್‌ಹ್ಯಾಮ್, ಜುಲೈ 5: ಇಂಗ್ಲೆಂಡ್‌ ವಿರುದ್ಧ ಮರುನಿಗದಿಯಾಗಿದ್ದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಹೊರತಾಗಿಯೂ ಇಂಗ್ಲೆಂಡ್ ತಂಡ ಭರ್ಜರಿ ಕಮ್‌ಬ್ಯಾಕ್ ಮಾಡಿ 7 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟೆಸ್ಟ್‌ ಪಂದ್ಯದ 5ನೇ ದಿನವಾದ ಮಂಗಳವಾರ ಭಾರತ ನೀಡಿದ್ದ 379 ರನ್‌ಗಳ ದಾಖಲೆಯ ಗುರಿಯನ್ನು ಬೈರ್‌ಸ್ಟೋವ್‌ ಮತ್ತು ಮಾಜಿ ನಾಯಕ ಜೋ ರೂಟ್‌ರ ಅಜೇಯ ಶತಕಗಳ ನೆರವಿನಿಂದ ಕೇವಲ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ರೂಟ್‌ 173 ಎಸೆತಗಳಲ್ಲಿ 19 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 142 ಹಾಗೂ ಜಾನಿ ಬೈರ್‌ಸ್ಟೋವ್‌ 145 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 114 ರನ್‌ಗಳಿಸಿ ಗೆಲುವಿನ ರೂವಾರಿಗಳಾದರು.

ಆಸ್ಟ್ರೇಲಿಯಾದ ಭಾರತ ಪ್ರವಾಸ; ಯಾರಾಗಲಿದ್ದಾರೆ ಟೆಸ್ಟ್ ಚಾಂಪಿಯನ್ಸ್‌? ಯಾರು?ಆಸ್ಟ್ರೇಲಿಯಾದ ಭಾರತ ಪ್ರವಾಸ; ಯಾರಾಗಲಿದ್ದಾರೆ ಟೆಸ್ಟ್ ಚಾಂಪಿಯನ್ಸ್‌? ಯಾರು?

ಇವರಿಗೂ ಮೊದಲು ಆರಂಭಿಕರಾಗಿ ಕಣಕ್ಕಿಳಿದಿದ್ದ ಅಲೆಕ್ಸ್ ಲೀಸ್ ಮತ್ತು ಜಾಕ್ ಕ್ರಾಲೆ ಮೊದಲ ವಿಕೆಟ್‌ 107 ರನ್‌ಗಳ ಜೊತೆಯಾಟ ನೀಡಿ ಭದ್ರ ಬುನಾದಿ ಹಾಕಿದ್ದರು. ರೂಟ್ ಹಾಗೂ ಬೈರ್‌ಸ್ಟೋವ್‌ 269 ರನ್‌ಗಳ ಮುರಿಯದ ಜೊತೆಯಾಟ ನಡೆಸಿ ಸರಣಿ 2-2ರಲ್ಲಿ ಡ್ರಾ ಆಗುವಂತೆ ಮಾಡಿದರು.

India slips below Pakistan in WTC point Table after over-rate penalty in Edgbaston Test

ಇನ್ನು ಈ ಪಂದ್ಯದ ಸೋಲಿನ ಬಳಿಕ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇನ್ನು ಸೋಲಿನ ಜೊತೆಗೆ ನಿಧಾನಗತಿ ಓವರ್‌ ದರಕ್ಕಾಗಿ ಐಸಿಸಿ ಭಾರತದ ಖಾತೆಯಿಂದ 2 ಅಂಕವನ್ನು ಕಡಿತಗೊಳಿಸಿದೆ. ಜೊತೆಗೆ ಪಂದ್ಯದ ಶುಲ್ಕದಲ್ಲಿ ಶೇ 40ರಷ್ಟನ್ನು ದಂಡವಾಗಿ ವಿಧಿಸಿದೆ.

2022-23ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ ಟೀಮ್ ಇಂಡಿಯಾ 6 ಗೆಲುವು, 4 ಸೋಲು ಹಾಗೂ 2 ಡ್ರಾ ಸಾಧಿಸಿ 75 ಅಂಕ ಪಡೆದುಕೊಂಡಿದೆ. ಇನ್ನು ಪೆನಾಲ್ಟಿಯಾಗಿ 2 ಅಂಕ ಕಳೆದುಕೊಂಡಿದ್ದರಿಂದ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳಸ್ಥಾನಕ್ಕೆ ಕುಸಿದಿದೆ.

9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಶೇಕಡಾವಾರು 77.78 ಅಂಕ ಹೊಂದಿದ್ದು ಅಗ್ರಸ್ಥಾನ ಪಡೆದುಕೊಂಡಿದೆ. 71 .43 ಶೇಕಡವಾಡು ಅಂಕ ಹೊಂದಿರುವ ದಕ್ಷಿಣ ಆಫ್ರಿಕಾ 2ನೇ ಸ್ಥಾನ ಹಾಗೂ 52.38 ಅಂಕ ಹೊಂದಿರುವ ಪಾಕಿಸ್ತಾನ 3ನೇ ಸ್ಥಾನ ಹಾಗೂ 52.08 ಗೆಲುವಿನ ಸರಾಸರಿ ಹೊಂದಿರುವ ಭಾರತ 4ನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದ ಇಂಗ್ಲೆಂಡ್ 33.33 ಗೆಲುವಿನ ಸರಾಸರಿಯೊಂದಿಗೆ 7ನೇ ಸ್ಥಾನ ಪಡೆದುಕೊಂಡಿದೆ.

English summary
India slips below Pakistan in World test Championship point Table after over-rate penalty in Edgbaston Test, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X