ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಎರಡನೇ ಬಾರಿ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆದು ಭಾರತ ಹೊಸ ಇತಿಹಾಸ

|
Google Oneindia Kannada News

ಕೋಲ್ಕತಾ, ಜೂನ್ 14: ಭಾರತ ಫುಟ್ಬಾಲ್ ತಂಡ ಐದನೇ ಬಾರಿ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಿದೆ. ಕ್ವಾಲಿಫಯರ್ ಟೂರ್ನಿಯಲ್ಲಿ ಭಾರತ ತನ್ನ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಷ್ಯನ್ ಕಪ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಬೇರೆ ಗುಂಪಿನ ಪಂದ್ಯವೊಂದರಲ್ಲಿ ಫಿಲಿಪ್ಪೈನ್ಸ್ ವಿರುದ್ಧ ಪ್ಯಾಲಸ್ತೀನ್ ಗೆಲುವು ಸಾಧಿಸಿದ್ದು ಭಾರತಕ್ಕೆ ಹಾದಿಯನ್ನು ಸುಗಮಗೊಳಿಸಿದೆ. ಇಂದು ಮಂಗಳವಾರ ರಾತ್ರಿ ತನ್ನ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ಹಾಂಕಾಂಗ್ ಅನ್ನು ಎದಿರುಗೊಳ್ಳಲಿದೆ. ಈ ಪಂದ್ಯದಲ್ಲಿ ಒಂದು ವೇಳೆ ಸೋತರೂ ಭಾರತ ಎಎಫ್‌ಸಿ ಪ್ರವೇಶಿಸುವುದು ನಿಶ್ಚಿತ.

ಏಷ್ಯಾದ ಅತಿದೊಡ್ಡ ಫುಟ್ಬಾಲ್ ಟೂರ್ನಿಯಾಗಿರುವ ಎಎಫ್‌ಸಿ ಏಷ್ಯನ್ ಕಪ್‌ಗೆ ಭಾರತ ಆಡಲಿರುವುದು ಇದು ಐದನೇ ಬಾರಿ. 1964, 1984, 2011, 2019ರ ಟೂರ್ನಿಗಳಲ್ಲಿ ಭಾರತ ಆಡಿತ್ತು. 2023ರ ಟೂರ್ನಿಯಲ್ಲಿ ಆಡಿದರೆ, ನಾಲ್ಕು ಆವೃತ್ತಿಗಳಲ್ಲಿ ಭಾರತ ಮೂರು ಬಾರಿ ಆಡಿದಂತಾಗುತ್ತದೆ. ಭಾರತ ತಂಡ ಸತತ ಎರಡು ಏಷ್ಯನ್ ಕಪ್ ಆವೃತ್ತಿಗಳಿಗೆ ಅರ್ಹತೆ ಪಡೆದಿರುವುದು ಇದೇ ಮೊದಲು.

ಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆ

 ಮೂರನೇ ಸುತ್ತಿನ ಕ್ವಾಲಿಫಯರ್

ಮೂರನೇ ಸುತ್ತಿನ ಕ್ವಾಲಿಫಯರ್

ಎಎಫ್‌ಸಿ ಏಷ್ಯನ್ ಕಪ್‌ಗೆ ನಡೆಯುತ್ತಿರುವ ಮೂರನೇ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಡಿ ಗುಂಪಿನಲ್ಲಿರುವ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಅಫ್ಘಾನಿಸ್ತಾನ, ಕಾಂಬೋಡಿಯಾ, ಭಾರತ ಮತ್ತು ಹಾಂಕಾಂಗ್ ತಂಡಗಳು ಈ ಗುಂಪಿನಲ್ಲಿವೆ. ಅಫ್ಘಾನಿಸ್ತಾನ ಮತ್ತು ಕಾಂಬೋಡಿಯಾ ವಿರುದ್ಧ ಭಾರತ ಜಯ ಸಾಧಿಸಿ 6 ಅಂಕ ಗಳಿಸಿದೆ. ಹಾಂಕಾಂಗ್ ಕೂಡ ಸತತ ಎರಡು ಪಂದ್ಯ ಗೆದ್ದು 6 ಅಂಕ ಹೊಂದಿದ್ದರೂ ಹೆಚ್ಚು ಗೋಲು ಅಂತರದಿಂದ ಮೊದಲ ಸ್ಥಾನದಲ್ಲಿದೆ.

ಇಂದು ಸಂಜೆಯ ನಂತರ ಭಾರತ ಮತ್ತು ಹಾಂಕಾಂಗ್ ತಂಡಗಳು ಸೆಣಸಲಿವೆ. ಇದರಲ್ಲಿ ಗೆದ್ದವರು ಟಾಪ್ ಟೀಮ್ ಆಗಿ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯುತ್ತಾರೆ. ಸೋತರೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಎರಡನೇ ಸ್ಥಾನಿಗರಾಗಿ ಟೂರ್ನಿ ಪ್ರವೇಶಿಸುತ್ತಾರೆ.

 2023ರ ಟೂರ್ನಿ ಎಲ್ಲಿ?

2023ರ ಟೂರ್ನಿ ಎಲ್ಲಿ?

2023ರ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿ ಚೀನಾದ ಬೀಜಿಂಗ್‌ನಲ್ಲಿ ನಡೆಯುವುದೆಂದು ನಿರ್ಧರಿಸಲಾಗಿತ್ತು. ಅದರೆ, ಕೋವಿಡ್ ಕಾರಣದಿಂದಾಗಿ ಚೀನಾ ಈ ಟೂರ್ನಿ ಆಯೋಜಿಸಲು ನಿರಾಕರಿಸಿದೆ. ಈಗ ಟೂರ್ನಿ ಆಯೋಜನೆಯ ಜವಾಬ್ದಾರಿ ಯಾವ ದೇಶಕ್ಕೆ ವಹಿಸಲಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.

ದೀಪಾವಳಿ ವೇಳೆಗೆ ಯುಕೆ-ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದದೀಪಾವಳಿ ವೇಳೆಗೆ ಯುಕೆ-ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದ

 ಈವರೆಗೆ ಕ್ವಾಲಿಫೈ ಆದ ತಂಡಗಳು

ಈವರೆಗೆ ಕ್ವಾಲಿಫೈ ಆದ ತಂಡಗಳು

ಒಟ್ಟು 24 ದೇಶಗಳು ಈ ಟೂರ್ನಿಯಲ್ಲಿ ಆಡಲಿವೆ. ಈಗ ಭಾರತವೂ ಒಳಗೊಂಡಂತೆ 20 ತಂಡಗಳು ಕ್ವಾಲಿಫೈ ಆಗಿವೆ. ಜಪಾನ್, ಸಿರಿಯಾ, ಕತಾರ್, ಸೌತ್ ಕೊರಿಯಾ, ಆಸ್ಟ್ರೇಲಿಯಾ, ಇರಾನ್, ಸೌದಿ ಅರೇಬಿಯಾ, ಯುಎಇ, ಚೀನಾ, ಇರಾಕ್, ಓಮನ್, ವಿಯೆಟ್ನಾಮ್, ಲೆಬನಾನ್, ಪ್ಯಾಲಸ್ತೀನ್, ಥಾಯ್ಲೆಂಡ್, ಉಜ್ಬೆಕಿಸ್ತಾನ್, ಹಾಂಕಾಂಗ್, ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ ಈ ಟೂರ್ನಿಯಲ್ಲಿ ಅರ್ಹತೆ ಪಡೆದ ಇತರ ತಂಡಗಳಾಗಿವೆ.

 ಏಷ್ಯನ್ ಕಪ್‌ನಲ್ಲಿ ರನ್ನರ್ ಅಪ್ ಸಾಧನೆ

ಏಷ್ಯನ್ ಕಪ್‌ನಲ್ಲಿ ರನ್ನರ್ ಅಪ್ ಸಾಧನೆ

ಭಾರತ ತೊಂಬತ್ತದ ದಶಕಕ್ಕೆ ಮುಂಚೆ ಫುಟ್ಬಾಲ್‌ನಲ್ಲಿ ಗಮನಾರ್ಹ ಶಕ್ತಿ ಎನಿಸಿತ್ತು. ವಿಶ್ವದ ಪ್ರಮುಖ ತಂಡಗಳಲ್ಲಿ ಒಂದಾಗಿತ್ತು. ಏಷ್ಯಾದ ಫುಟ್ಬಾಲ್ ಪವರ್ ಹೌಸ್ ಎನಿಸಿತ್ತು. ಒಲಿಂಪಿಕ್ಸ್‌ಗೂ ಹಿಂದೆ ಅರ್ಹತೆ ಪಡೆದಿದ್ದಿದೆ. 1964ರ ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಆಗಿತ್ತು. ಆದರೆ, 1984, 2011 ಮತ್ತು 2019ರ ಟೂರ್ನಿಗಳಲ್ಲಿ ಭಾರತ ಮೊದಲ ಸುತ್ತು ದಾಟಿ ಹೋಗಲೂ ಸಾಧ್ಯವಾಗಿರಲಿಲ್ಲ. 2023ರ ಟೂರ್ನಿಯಲ್ಲೂ ಭಾರತ ತಂಡದಿಂದ ಅದನ್ನು ನಿರೀಕ್ಷಿಸುವುದು ಕಷ್ಟ.

(ಒನ್ಇಂಡಿಯಾ ಸುದ್ದಿ)

Recommended Video

Nitish Kumar ಮುಂದಿನ President ಆಗ್ತಾರಾ ? | *Politics | OneIndia Kannada

English summary
Indian Football team has qualified for 2023 AFC Asian Cup with its performance in AFC third round qualifiers at Kolkata. Palestine beating Philippines in another group match paved way for India to Asian Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X