ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಟ್ನೆಸ್ ಬ್ರ್ಯಾಂಡ್ ಎಚ್ಆರ್‌ಎಕ್ಸ್ ಜೊತೆ ಫ್ಲಿಪ್ ಕಾರ್ಟ್ ಪಾಲುದಾರಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 17, 2021: ಭಾರತದ ಮೊದಲ ಫಿಟ್ನೆಸ್ ಬ್ರ್ಯಾಂಡ್ ಆಗಿರುವ ಎಚ್ಆರ್‌ಎಕ್ಸ್ ಮತ್ತು ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮನೆಯಲ್ಲೇ ವರ್ಕೌಟ್ ಮಾಡುವಂತಹ ಕ್ರೀಡಾ ಮತ್ತು ಫಿಟ್ನೆಸ್ ಉಪಕರಣಗಳನ್ನು ಒಟ್ಟಾಗಿ ಬಿಡುಗಡೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ಎಚ್ಆರ್‌ಎಕ್ಸ್ ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಉಪಕರಣಗಳ ಶ್ರೇಣಿಯನ್ನು ಸಕ್ರಿಯ ಫಿಟ್ನೆಸ್ ಉತ್ಸಾಹಿಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಬಾಳಿಕೆ ಮತ್ತು ಸಾಮರ್ಥ್ಯವನ್ನು ಈ ಉತ್ಪನ್ನಗಳ ಶ್ರೇಣಿಯು ಹೊಂದಿದೆ. ಫಿಟ್ ಜೀವನಶೈಲಿಯನ್ನು ಬಯಸುವ ಪ್ರತಿಯೊಬ್ಬ ಗ್ರಾಹಕರಿಗೂ ಹೊಂದಿಕೊಳ್ಳುವಂತಹ ಹೋಂ ವರ್ಕೌಟ್ ಮಾಡಲು ಅಗತ್ಯವಿರುವ ಸಾಧನಗಳನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ:- ಯೋಗ ಮ್ಯಾಟ್. ಇದು ಅತ್ಯುತ್ತಮವಾದ ರೀತಿಯ ಮ್ಯಾಟ್ ಆಗಿದ್ದು, ಆ್ಯಂಟಿ ಸ್ಕಿಡ್ ಗುಣಲಕ್ಷಣವನ್ನು ಹೊಂದಿದ್ದು, ಎಲ್ಲಾ ರೀತಿಯ ಯೋಗ ಮಾಡಲು ಮತ್ತು ವೃತ್ತಿಪರ ಬಳಕೆಯ ವರ್ಕೌಟ್ ಮಾಡಲು ಸೂಕ್ತವಾಗಿದೆ.

ಇವೆಲ್ಲದರ ಜೊತೆಗೆ ಎಚ್ಆರ್ ಎಕ್ಸ್ ಈ ವರ್ಷಾಂತ್ಯದ ವೇಳೆಗೆ ವಿಸ್ತರಣೆ, ರೀಟೇಲಿಂಗ್ ಸ್ಪೋರ್ಟ್ಸ್ ಉಪಕರಣಗಳು ಮತ್ತು ಟ್ರೆಡ್ ಮಿಲ್‌ಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.

ಕೇವಲ ಫಿಟ್ನೆಸ್ ಉತ್ಸಾಹಿಗಳಿಗೆ ಬೆಂಬಲವಾಗಿರುವುದಿಲ್

ಕೇವಲ ಫಿಟ್ನೆಸ್ ಉತ್ಸಾಹಿಗಳಿಗೆ ಬೆಂಬಲವಾಗಿರುವುದಿಲ್

ಇದು ಕೇವಲ ಫಿಟ್ನೆಸ್ ಉತ್ಸಾಹಿಗಳಿಗೆ ಬೆಂಬಲವಾಗಿರುವುದಿಲ್ಲ. ಇದರ ಜತೆಗೆ ಯೋಗದ ಬೇಸಿಕ್ ಅಂದರೆ ಮೂಲಭೂತವಾದ ಆರಂಭಿಕ ಯೋಗವನ್ನು ಮಾಡುವವರಿಗೆ ಪ್ರೇರಣೆಯಾಗಲಿದೆ. ಈ ಮೂಲಕ ಗ್ರಾಹಕರು ತಮ್ಮ ಮನೆಯಲ್ಲೇ ಇದ್ದುಕೊಂಡು ಆರಾಮವಾಗಿ ಯೋಗಾಭ್ಯಾಸ ಮಾಡಬಹುದಾಗಿದೆ. ಈ ಎಲ್ಲಾ ಉತ್ಪನ್ನಗಳನ್ನು ಎನ್ಎಬಿಎಲ್‌ನ ಮಾನ್ಯತೆ ಹೊಂದಿದ ಫಿಟ್ನೆಸ್ ಪರಿಣತರು ಪರೀಕ್ಷೆಗೆ ಒಳಪಡಿಸಿರುತ್ತಾರೆ. ಫಿಟ್ನೆಸ್ ಉಪಕರಣಗಳು 349 ರೂಪಾಯಿಯಿಂದ (ಸ್ಕಿಪ್ಪಿಂಗ್ ರೋಪ್ ಮತ್ತು ರೆಸಿಸ್ಟೆನ್ಸ್ ಟ್ಯೂಬ್) ಆರಂಭವಾಗಲಿವೆ. ಎಚ್ಆರ್ ಎಕ್ಸ್ ನ ಉಪಕರಣಗಳು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ನಂತರದಲ್ಲಿ ಮೈಂತ್ರಾ.ಕಾಂನಲ್ಲಿ ಲಭ್ಯವಾಗಲಿವೆ.

Array

Array

ಸ್ಪೋರ್ಟ್ಸ್ & ಫಿಟ್ನೆಸ್ ವಿಭಾಗದಲ್ಲಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಂಭ್ರಮಕ್ಕಾಗಿ ಎಚ್ಆರ್‌ಎಕ್ಸ್ #FlexWithHRX ಎಂಬ ವಾರ ಪೂರ್ತಿ ಚಟುವಟಿಕೆ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ವಾರದ ಕಾರ್ಯಕ್ರಮದಲ್ಲಿ ಮನೆಯಿಂದಲೇ ವರ್ಕೌಟ್ ಗಳನ್ನು ಮಾಡುವುದು ಮತ್ತು ದೇಶದ ಶ್ರೇಷ್ಠ ಫಿಟ್ನೆಸ್ ಬ್ರ್ಯಾಂಡ್ ಆಗಿ ಪರಿವರ್ತನೆಗೊಳ್ಳಲಿದೆ. ಇದಲ್ಲದೇ, ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಶನ್ ಅವರನ್ನು ಭೇಟಿ (ವರ್ಚುವಲ್ ಆಗಿ) ಮಾಡುವ ಅವಕಾಶವೂ ಲಭಿಸುತ್ತದೆ. #FlexWithHRX ಅಭಿಯಾನವು ಆಗಸ್ಟ್ 20, 2021 ರಿಂದ ಫ್ಲಿಪ್ ಕಾರ್ಟ್.ಕಾಂನಲ್ಲಿ ನೇರಪ್ರಸಾರಗೊಳ್ಳಲಿದೆ.

ಸಿಇಒ ಅಫ್ಸರ್ ಜೈದಿ

ಸಿಇಒ ಅಫ್ಸರ್ ಜೈದಿ

ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಎಚ್ಆರ್‌ಎಕ್ಸ್ ಸಹ-ಸಂಸ್ಥಾಪಕ ಮತ್ತು ಸಿಇಒ ಅಫ್ಸರ್ ಜೈದಿ ಅವರು, ''ಜಿಮ್‌ಗಳು ಸ್ಥಗಿತಗೊಂಡಿವೆ ಮತ್ತು ಲಾಕ್‌ಡೌನ್‌ಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೇ ವರ್ಕೌಟ್‌ಗಳು ಹೆಚ್ಚಾಗಿರುವುದನ್ನು ನೋಡುತ್ತಿದ್ದೇವೆ. ಇದರ ಪರಿಣಾಮವಾಗಿ ಮನೆಯಲ್ಲಿ ವರ್ಕೌಟ್ ಮಾಡುವ ಸಾಧನಗಳಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ತಂಡವು ನಮ್ಮ ಗ್ರಾಹಕರ ಫಿಟ್ನೆಸ್ ಪ್ರಯಾಣವನ್ನು ಹೇಗೆ ಉತ್ತಮವಾಗಿ ಬೆಂಬಲಿಸಬಹುದು ಮತ್ತು ಸ್ಪೋರ್ಟ್ಸ್ & ಫಿಟ್ನೆಸ್ ಉಪಕರಣಗಳ ಕಲ್ಪನೆಯನ್ನು ಚಲನೆಯಲ್ಲಿ ಇರಿಸಬಹುದು ಎಂಬುದರ ಬಗ್ಗೆ ಯೋಚನೆ ಮಾಡಿದೆ. ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾದಲ್ಲಿ ಈ ಇ-ಕಾಮರ್ಸ್ ಆರಂಭದೊಂದಿಗೆ, ಉತ್ತಮ ಹೋಂ ವರ್ಕೌಟ್ ಅನುಭವವನ್ನು ಹೊಂದಿರುವ ಹೆಚ್ಚಿನ ಪ್ರೇಕ್ಷಕರಿಗೆ ಸಹಾಯ ಮಾಡಲು ನಾವು ಹೊಸ ವರ್ಗವನ್ನು ಟ್ಯಾಪ್ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

ಡೈರೆಕ್ಟರ್ ಪ್ರಿಯಾ ಫೋತೆದಾರ್

ಡೈರೆಕ್ಟರ್ ಪ್ರಿಯಾ ಫೋತೆದಾರ್

ಫ್ಲಿಪ್ ಕಾರ್ಟ್ ಪ್ರೈವೇಟ್ ಲೇಬಲ್ಸ್‌ನ ಸೀನಿಯರ್ ಡೈರೆಕ್ಟರ್ ಪ್ರಿಯಾ ಫೋತೆದಾರ್ ಅವರು ಮಾತನಾಡಿ, ''ಎಲ್ಲಾ ವಯೋಮಾನದ ವರ್ಗಗಳ ಗ್ರಾಹಕರಲ್ಲಿಯೂ ಆರೋಗ್ಯಕರ ಮತ್ತು ಉತ್ತಮ ಫಿಟ್ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಹೆಚ್ಚಾಗುತ್ತಿದೆ. ನಮ್ಮ ಫ್ಲಿಪ್ ಕಾರ್ಟ್ ನಲ್ಲಿ ಕಳೆದ ವರ್ಷದಿಂದೀಚೆಗೆ ಫಿಟ್ನೆಸ್ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಎಚ್ಆರ್ ಎಕ್ಸ್ ನ ಸ್ಪೋರ್ಟ್ಸ್ & ಫಿಟ್ನೆಸ್ ಶ್ರೇಣಿಯನ್ನು ಆರಂಭಿಸುವುದರೊಂದಿಗೆ ಗ್ರಾಹಕರಿಗೆ ಮನೆಯ ಜಿಮ್ ಉಪಕರಣಗಳು ಮತ್ತು ಫಿಟ್ನೆಸ್ ಉತ್ಪನ್ನಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. ಇದರ ಮೂಲಕ ಗ್ರಾಹಕರು ತಮ್ಮ ಮನೆಯಲ್ಲೇ ಇದ್ದುಕೊಂಡು ಫಿಟ್ನೆಸ್ ಅನುಭವವನ್ನು ಹೆಚ್ಚಿಸಿಕೊಳ್ಳಬಹುದು. ಎಚ್ಆರ್ ಎಕ್ಸ್ ಇಂದು ದೇಶದಲ್ಲಿ ಮೀಸಲಾಗಿರುವ ಗ್ರಾಹಕರ ನೆಲೆಯನ್ನು ಹೊಂದಿದೆ ಮತ್ತು ಮಿಲೇನಿಯಲ್ ಹಾಗೂ ಜನರೇಶನ್ ಝಡ್ ವಯೋಮಾನದವರಿಗಾಗಿ ಉತ್ತಮ ರೀತಿಯ ಫಿಟ್ನೆಸ್ ಉಪಕರಣವನ್ನು ಒದಗಿಸುತ್ತಿದೆ. ಈ ಪಾಲುದಾರಿಕೆಯೊಂದಿಗೆ ನಾವು ದೇಶದ ಮೆಟ್ರೋ ನಗರಗಳು, 2 ಮತ್ತು 3 ನೇ ಶ್ರೇಣಿಯ ನಗರಗಳ ಗ್ರಾಹಕರಿಗೆ ಅತ್ಯುತ್ಕೃಷ್ಠ ದರ್ಜೆಯ ಫಿಟ್ನೆಸ್ ಉಪಕರಣಗಳನ್ನು ಪೂರೈಸಲು ಸಾಧ್ಯವಾಗಲಿದೆ'' ಎಂದರು.

English summary
HRX, India’s first home-grown fitness brand, and Flipkart, India’s homegrown e-commerce marketplace, have come together to launch a range of sports and fitness equipment for home workouts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X