ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ-ಉಕ್ರೇನ್ ಯುದ್ಧ; ರಷ್ಯಾ ಕ್ರೀಡಾಪಟುಗಳಿಗೆ ನಿಷೇಧ, ಆಕ್ರೋಶ

|
Google Oneindia Kannada News

ಮಾಸ್ಕೊ, ಜೂನ್ 10: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ ಇನ್ನೂ ನಿಲ್ಲುವ ಸಾಧ್ಯತೆಯಿಲ್ಲದ ಕಾರಣ ಅಂತಾರಾಷ್ಟ್ರೀಯ ಕ್ರೀಡಾಕೂಟ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ರಷ್ಯಾದ ಎಲ್ಲಾ ಕ್ರೀಡಾಪಟುಗಳನ್ನು ಒರೆಗಾನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಿಂದ ನಿಷೇಧಿಸುವ ಕುರಿತು ಚರ್ಚೆ ಮಾಡುತ್ತಿವೆ. ಎರಡು ಕ್ರೀಡಾ ಒಕ್ಕೂಟಗಳ ನಾಯಕರ ಈ ನಿರ್ಧಾರವನ್ನು ಹೈಜಂಪ್ ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಮಾರಿಯಾ ಲಸಿಟ್ಸ್‌ಕೆನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಲಸಿಟ್ಸ್‌ಕೆನ್ ಕಳೆದ 2 ಆವೃತ್ತಿಗಳಲ್ಲೂ ವಿಶ್ವಚಾಂಪಿಯನ್ ಆಗಿದ್ದಾರೆ. ಆದರೆ ಪ್ರಸ್ತುತ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಅವರನ್ನು 3ನೇ ಪ್ರಶಸ್ತಿಯನ್ನು ಗೆಲ್ಲುವುದರಿಂದ ತಡೆಯುವ ಸಾಧ್ಯತೆಯಿದೆ. ಏಕೆಂದರೆ ವಿಶ್ವ ಅಥ್ಲೆಟಿಕ್ಸ್‌ ರಷ್ಯಾದ ಎಲ್ಲಾ ಕ್ರೀಡಾಪಟುಗಳನ್ನು ನಿಷೇಧಿಸಲು ನಿರ್ಧಾರ ಮಾಡಿದೆ.

ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್ ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್

ದೀರ್ಘಕಾಲದ ಡೂಪಿಂಗ್‌ ಹಗರಣದಿಂದಾಗಿ ರಷ್ಯಾ ಅಥ್ಲೆಟಿಕ್ಸ್‌ ಒಕ್ಕೂಟ ನಿಷೇಧಕ್ಕೆ ಒಳಗಾಗಿದ್ದರು, ಕೆಲವು ಕ್ರೀಡಾಪಟುಗಳು ವಿಶ್ವಮಟ್ಟದ ಟೂರ್ನಿಯಲ್ಲಿ ದೇಶದ ಧ್ವಜವನ್ನು ಪ್ರದರ್ಶಿಸದೇ ಆಡುವುದಕ್ಕೆ ಕೆಲವೇ ಕೆಲವರಿಗೆ ವಿಶ್ವ ಒಕ್ಕೂಟ ಅವಕಾಶ ನೀಡುತ್ತಿದೆ.

High Jump World Champion Spark against World Athletics for banning Russians

ಅದರಲ್ಲಿ 29 ವರ್ಷದ ಹೈಜಂಪರ್‌ ಒಬ್ಬರಾಗಿದ್ದಾರೆ. ಲಸಿಟ್ಸ್‌ಕೆನ್ ಇತ್ತೀಚಿನ ಕೆಲವು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಸೋಲೇ ಕಂಡಿಲ್ಲ, ಆದರೆ ಈ ಬಾರಿ ತನ್ನದಲ್ಲದ ತಪ್ಪಿಗೆ ಪ್ರತಿಷ್ಠಿತ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪುತ್ತಿರುವುದಕ್ಕೆ ಅಸಮಧಾನ ಹೊರ ಹಾಕಿದ್ದಾರೆ.

ಲಸಿಟ್ಸ್‌ಕೆನ್ ಐಒಸಿ ಅಧ್ಯಕ್ಷ ಥಾಮಸ್‌ ಬೇಚ್‌ ಅವರಿಗೆ ಪತ್ರ ಬರೆದು, ಅದರಲ್ಲಿ ರಷ್ಯಾ ಮತ್ತು ಬೆಲಾರಸ್ ಕ್ರೀಡಾಪಟುಗಳನ್ನು ವಿಶ್ವದಾದ್ಯಂತ ವಿವಿದ ಈವೆಂಟ್‌ಗಳಿಂದ ನಿಷೇಧಿಸಲು ಸೂಚಿಸಿರುವ ಕ್ರಮವನ್ನು ಟೀಕಿಸಿದ್ದಾರೆ. ರಷ್ಯಾದ ಕ್ರೀಡಾಪಟುಗಳನ್ನು ಕ್ರೀಡೆಯಿಂದ ಹೊರ ಹಾಕಿದ ಮಾತ್ರಕ್ಕೆ ಯುದ್ದವನ್ನು ನಿಲ್ಲಿಸಲಾಗದು, ಕ್ರೀಡೆಗಳಲ್ಲಿ ಈ ರೀತಿಯ ಕ್ರಮ ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ರಷ್ಯಾದ ಕ್ರೀಡಾಪಟುಗಳ ವಿರುದ್ಧದ ಏರಿರುವ ನಿರ್ಬಂಧಗಳನ್ನು ತೆಗೆದುಹಾಕಲು ನಿಮಗೆ ಧೈರ್ಯ ಮತ್ತು ಘನತೆ ಇಲ್ಲ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ, ಏಕೆಂದರೆ, ಈ ಸನ್ನಿವೇಶದಲ್ಲಿ ನೀವು ಎಲ್ಲಾ IOC ಚಾರ್ಟರ್ ಅನ್ನು ಉಲ್ಲಂಘಿಸಿದ್ದೀರಿ ಎಂದು ಒಪ್ಪಿಕೊಳ್ಳಬೇಕು. ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ನಿಯಮಗಳೆಲ್ಲವೂ ನಿಮ್ಮ ಈ ನಿರ್ಧಾರದ ಈ ಮೂಲಕ ನಿಷ್ಪ್ರಯೋಜಕ ಪತ್ರಿಕೆಗಳಾಗಿ ಪರಿವರ್ತಿಸಲಾಗಿದೆ " ಎಂದು ಲಸಿಟ್ಸ್‌ಕೆನ್ ಕಿಡಿ ಕಾರಿದ್ದಾರೆ.

ಕೋಚ್ ಮೇಲೆ ಕಿರುಕುಳ ಆರೋಪ ಹೊರೆಸಿದ ಮಹಿಳಾ Sailor ಕೋಚ್ ಮೇಲೆ ಕಿರುಕುಳ ಆರೋಪ ಹೊರೆಸಿದ ಮಹಿಳಾ Sailor

ಕ್ರೀಡಾಪಟುಗಳ ಬಗ್ಗೆ ಸಹಾನೂಭೂತಿ; ಕಳೆದ 5 ವರ್ಷಗಳಲ್ಲಿ ಹೈಜಂಪ್‌ನಲ್ಲಿ ಪ್ರಮುಖ ಸ್ಪರ್ಧಿಯಾಗಿರುವ ಲಸಿಟ್ಸ್‌ಕೆನ್, ಉಕ್ರೇನ್‌ ಜಂಪರ್‌ಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ನನಗೆ ಈಗಲೂ ಅವರಿಗೆ ಏನು ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಗೆ ನೋಡುವುದಕ್ಕೂ ನಮಗೆ ಆಗುವುದಿಲ್ಲ. ಆ ದೇಶದ ಕ್ರೀಡಾಪಟುಗಳು ಮತ್ತು ಅವರ ಸ್ನೇಹಿತರು ಹಾಗೂ ಸಂಬಂಧಿಗಳು, ಯಾವುದೇ ಮನುಷ್ಯರು ಎಂದಿಗೂ ಅನುಭವಿಸಬಾರದೆಂಬ ನೋವನ್ನು ಅನುಭವಿಸುತ್ತಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ಅವರೆಲ್ಲರಿಗೂ ಏನೂ ಸಂಭವಿಸಬಾರದೆಂದು ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

English summary
World high jump champion Maria Lasitskene lashed out against IOC and World Athletics for decision to ban all Russian athletes in wake of the country war against Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X