ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್

|
Google Oneindia Kannada News

ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ಎರಡು ದಿನಗಳ ನಂತರ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲು ಲೀಸೆಸ್ಟರ್‌ಶೈರ್‌ನಲ್ಲಿ ತಂಡವನ್ನು ಸೇರಿಕೊಂಡರು. ರೋಹಿತ್ ಶರ್ಮಾ ನೇತೃತ್ವದ ತಂಡ ಜುಲೈ 1 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ.

ಕಳೆದ ವರ್ಷ ಕೋವಿಡ್ ಕಾರಣದದಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊನೆಯ ಪಂದ್ಯವನ್ನು ರದ್ದುಪಡಿಸಲಾಗಿತ್ತು. ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಒಂದು ಪಂದ್ಯಡ್ರಾನಲ್ಲಿ ಅಂತ್ಯಗೊಂಡಿದೆ. ಈಗ ಸರಣಿಯ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಇಲ್ಲ ಗೆಲವು ಸಾಧಿಸಿದರೆ ಭಾರತ ಐತಿಹಾಸಿಕ ಸರಣಿ ಜಯ ಸಾಧಿಸಲಿದೆ. 2007ರ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'

ದ್ರಾವಿಡ್ ಆಗಮನದ ಚಿತ್ರಗಳನ್ನು ಬಿಸಿಸಿಐ ಹಂಚಿಕೊಂಡಿದ್ದು, "ಇಲ್ಲಿ ಯಾರಿದ್ದಾರೆ ನೋಡಿ! ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಲೀಸೆಸ್ಟರ್‌ನಲ್ಲಿ ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ."

ಪಂತ್, ಶ್ರೇಯಸ್ ಜೊತೆ ಇಂಗ್ಲೆಂಡ್‌ಗೆ ಪ್ರಯಾಣ

ಜೂನ್ 16 ರಂದು ಇಂಗ್ಲೆಂಡ್‌ಗೆ ತೆರಳಿದ್ದ ಟೆಸ್ಟ್ ತಂಡ ಕಳೆದ ವಾರದಿಂದ ತಯಾರಿ ಆರಂಭಿಸಿದೆ. ಜೂನ್ 19ರ ಭಾನುವಾರ ಕೊನೆಗೊಂಡ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ಕಾರಣ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಜೊತೆ ದ್ರಾವಿಡ್ ತಡವಾಗಿ ಇಂಗ್ಲೆಂಡ್‌ಗೆ ತೆರಳಿದರು.

ದ್ರಾವಿಡ್ ಮತ್ತು ಟೆಸ್ಟ್ ತಂಡವು ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧದ ಪಂದ್ಯದ ಮೇಲೆ ಗಮನವಿರಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟಿ20 ತಂಡ ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನಾಡಲಿದೆ. ದ್ರಾವಿಡ್ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕ ವಿವಿಎಸ್ ಲಕ್ಷ್ಮಣ್ ತಂಡದ ಹಂಗಾಮಿ ಕೋಚ್ ಆಗಿರುತ್ತಾರೆ.

ಸರಣಿ ಗೆಲ್ಲುವ ವಿಶ್ವಾಸ

ಸರಣಿ ಗೆಲ್ಲುವ ವಿಶ್ವಾಸ

ಇಂಗ್ಲೆಂಡ್‌ಗೆ ತೆರಳುವ ಮೊದಲ ಮಾಧ್ಯಮದವರ ಜೊತೆ ಮಾತನಾಡಿರುವ ರಾಹುಲ್ ದ್ರಾವಿಡ್, ವಿಶ್ವ ಟೆಸ್ಟ್ ಚಾಂಪಿಯನ್ಸ್ ಅಂಗಳ ದೃಷ್ಟಿಯಿಂದ ಈ ಪಂದ್ಯ ಮುಖ್ಯವಾಗಿದ್ದು, ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

"ಟೆಸ್ಟ್ ಪಂದ್ಯದ ವಿಷಯದಲ್ಲಿ, ನಿಸ್ಸಂಶಯವಾಗಿ ರೋಮಾಂಚನಕಾರಿಯಾಗಿದೆ. ನಮಗೆ ಇದು ಆದರೆ ಇದು ವಿಶ್ವ ಟೆಸ್ಟ್ ಚಾಂಪಿಯನ್ಸ್ ಅಂಕಗಳ ದೃಷ್ಟಿಯಿಂದ ಒಂದು ಉತ್ತಮ ಟೆಸ್ಟ್ ಪಂದ್ಯವಾಗಿದೆ. ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಸರಣಿಯನ್ನು ಗೆಲ್ಲಲು ಮತ್ತು ಉತ್ತಮ ಪ್ರದರ್ಶನ ನೀಡಲು ಆಟಗಾರರು ತುಂಬಾ ಉತ್ಸುಕರಾಗಿದ್ದಾರೆ. ಆದ್ದರಿಂದ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.

ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್‌: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್‌: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್

ಎರಡೂ ತಂಡಗಳಲ್ಲಿ ಬದಲಾವಣೆ

ಎರಡೂ ತಂಡಗಳಲ್ಲಿ ಬದಲಾವಣೆ

ಕಳೆದ ವರ್ಷದ ಸರಣಿಗೆ ಹೋಲಿಸಿದರೆ, ಎರಡೂ ತಂಡಗಳಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ. ಟೀಂ ಇಂಡಿಯಾದ ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮ ವಹಿಸಿಕೊಂಡಿದ್ದರೆ, ಇಂಗ್ಲೆಂಡ್ ತಂಡ ಜೋ ರೂಟ್ ಬದಲು ಬೆನ್ ಸ್ಟೋಕ್ಸ್ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ಜೂನ್ 24 ರಿಂದ ಗ್ರೇಸ್ ರೋಡ್‌ನಲ್ಲಿ ಭಾರತ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಆಡಲಿದೆ.

ಗೆಲುವಿನ ವಿಶ್ವಾಸದಲ್ಲಿ ಆತಿಥೇಯ ತಂಡ

ಗೆಲುವಿನ ವಿಶ್ವಾಸದಲ್ಲಿ ಆತಿಥೇಯ ತಂಡ

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯಲ್ಲಿ ಜಯ ಸಾಧಿಸಿ ಭರ್ಜರಿ ಉತ್ಸಾಹದಲ್ಲಿದೆ. ಅದರಲ್ಲೂ ತಂಡದ ಪ್ರಮುಖ ಆಟಗಾರರು ಉತ್ತಮ ಲಯದಲ್ಲಿರುವುದು ಇಂಗ್ಲೆಂಡ್ ತಂಡಕ್ಕೆ ವರದಾನವಾಗಿದೆ.

ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ತಂಡದ ಹೊಸ ನಾಯಕ ರೋಹಿತ್ ಶರ್ಮಾ ಗೆಲುವಿಗಾಗಿ ಯಾವ ರಣತಂತ್ರ ರೂಪಿಸುತ್ತಾರೆ ಕಾದು ನೋಡಬೇಕಿದೆ.

English summary
The Indian cricket team's head coach Rahul Dravid joined up with the Test squad in Leicestershire ahead of the series against England. Dravid stated that he was excited for the game as the series is on the line and they have World Test Champions points to play for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X