India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನಕ್ಕಾಗಿ ಸಾಲು ನಿಂತವರಿಗೆ ಟೀ ಮತ್ತು ಬನ್ ವಿತರಿಸಿದ ಶ್ರೀಲಂಕಾ ಮಾಜಿ ಕ್ರಿಕೆಟಿಗ

|
Google Oneindia Kannada News

ಕೊಲಂಬೊ, ಜೂನ್ 20; ಸ್ವಾತಂತ್ರ್ಯದ ನಂತರ ಅತ್ಯಂತ ಘೋರ ಆರ್ಥಿಕ ಬಿಕ್ಕಟ್ಟಿಗೆ ದ್ವೀಪ ರಾಷ್ಟ್ರ ಶ್ರೀಲಂಕಾದ ಸಿಲುಕಿದೆ. ತೈಲ, ಆಹಾರ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಮಾಜಿ ಕ್ರಿಕೆಟಿಗ ರೋಷನ್ ಮಹಾನಮ ತಮ್ಮ ದೇಶದ ಪ್ರಜೆಗಳ ಕಷ್ಟದ ಸಮಯದಲ್ಲಿ ಪರಸ್ಪರ ನೆರವಾಗುವಂತೆ ಒತ್ತಾಯಿಸಿದ್ದಾರೆ.

ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ವಿವಿಧೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಪಡೆಯಲು ಮಾರುದ್ದ ಸರತಿ ಸಾಲು ಕಂಡು ಬರುತ್ತಿದೆ. ಕೆಲವು ಕಡೆ ಪೆಟ್ರೋಲ್‌ ಪಡೆಯುವ ವೇಳೆ ಗಲಾಟೆಗಳು ನಡೆದಿದ್ದು, ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ ಘಟನೆಗಳು ಕೂಡ ನಡೆದಿವೆ. ಹಾಗಾಗಿ ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಕಾವಲಿಗೆ ಪೊಲೀಸರು ಹಾಗೂ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.

2 ವಾರ ವರ್ಕ್‌ ಫ್ರಮ್‌ ಹೋಂಗೆ ಸೂಚಿಸಿದ ಶ್ರೀಲಂಕಾ, ಏಕೆ? 2 ವಾರ ವರ್ಕ್‌ ಫ್ರಮ್‌ ಹೋಂಗೆ ಸೂಚಿಸಿದ ಶ್ರೀಲಂಕಾ, ಏಕೆ?

ಶ್ರೀಲಂಕಾ ದೇಶ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿ ನಲುಗುತ್ತಿರುವ ಸಂದರ್ಭದಲ್ಲಿ ದೇಶದ ಜನತೆ ಒಬ್ಬರಿಗೊಬ್ಬರು ಸಹಾಯ ಮಾಡಬೇಕೆಂದು ಮಾಜಿ ಕ್ರಿಕೆಟಿಗ ರೋಷನ್ ಮಹಾನಮ ಒತ್ತಾಯಿಸಿದ್ದಾರೆ. ಮಹಾನಾಮ ಸ್ವತಃ ವಿಜಿರಾಮ ಮಾವತ ಪ್ರಾಂತ್ಯದಲ್ಲಿ ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ನೂರಾರು ಜನರಿಗೆ ಟೀ ಮತ್ತು ಬನ್‌ಗಳನ್ನು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರೋಷನ್, "ನಾವು ವಾರ್ಡ್ ಪ್ಲೇಸ್ ಮತ್ತು ವಿಜೆರಾಮ ಮಾವತಾ ಸುತ್ತಲಿನ ಪೆಟ್ರೋಲ್ ಬಂಕ್‌ಗಳಲ್ಲಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಕಮ್ಯುನಿಟಿ ಮೀಲ್ಸ್‌ ತಂಡದೊಂದಿಗೆ ಟೀ ಮತ್ತು ಬನ್‌ಗಳನ್ನು ವಿತರಿಸಿದೆವು. ಇಲ್ಲಿ ದಿನದಿಂದ ದಿನಕ್ಕೆ ಸರತಿ ಸಾಲುಗಳು ಉದ್ದವಾಗುತ್ತಿದ್ದು, ಸಾಕಷ್ಟು ಸಮಯ ಸಾಲಿನಲ್ಲಿ ನಿಲ್ಲುವ ಜನರ ಆರೋಗ್ಯದ ಮೇಲೆ ಸಾಕಷ್ಟು ಅಪಾಯಗಳು ಎದುರಾಗಲಿವೆ. ದಯವಿಟ್ಟು, ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವವರು ಪರಸ್ಪರ ನೆರವಾಗಿ. ಸಾಕಷ್ಟು ಕುಡಿಯಲು ನೀರು ಮತ್ತು ಆಹಾರವನ್ನು ತೆಗೆದುಕೊಂಡು ಬನ್ನಿ. ನಿಮಗೆ ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೆ ದಯವಿಟ್ಟು ನಿಮ್ಮ ಪಕ್ಕದಲ್ಲಿರುವ ಹತ್ತಿರದ ವ್ಯಕ್ತಿಯನ್ನು ಸಂಪರ್ಕಿಸಿ ಹಾಗು ಅವರ ಬೆಂಬಲವನ್ನು ಕೇಳಿ ಅಥವಾ 1990 ಗೆ ಕರೆ ಮಾಡಿ. ಈ ಕಷ್ಟದ ಸಮಯದಲ್ಲಿ ನಾವುಗಳು ಒಬ್ಬರಿಗೊಬ್ಬರು ನೋಡಿಕೊಳ್ಳಬೇಕು" ಎಂದು ಬರೆದುಕೊಂಡಿದ್ದಾರೆ.

ದ್ವೀಪರಾಷ್ಟ್ರ ಆಹಾರ ಸಾಮಾಗ್ರಿಗಳು, ತೈಲ ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳಲು ಡಾಲರ್ ರೂಪದಲ್ಲಿ ಹಣವನ್ನು ಸಂದಾಯ ಮಾಡಲಾಗದೆ ತೀವ್ರ ಒತ್ತಡಕ್ಕೆ ಸಿಲಿಕಿದೆ. ಇದು ದೇಶದ ಆರ್ಥಿಕತೆಯ ಹಲವಾರು ಕ್ಷೇತ್ರಗಳಿಗೂ ಹಿನ್ನಡೆ ಉಂಟುಮಾಡಿದೆ. ದೇಶದಲ್ಲಿರುವ ಅಸ್ತಿತ್ವದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ ಎಂದು ನೀರಿಕ್ಷಿಸಲಾಗಿದೆ. ಹಾಗಾಗಿ ದೇಶದ ಜನರು ಇಂಧನ ಮತ್ತು ಅಡುಗೆ ಅನಿಲವನ್ನು ಖರೀದಿಸಲು ಅಂಗಡಿಗಳ ಹೊರಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಪೆಟ್ರೋಲ್, ಡೀಸೆಲ್ ಕೊರತೆ: ಶ್ರೀಲಂಕಾ ಮಿಲಿಟರಿ ಗುಂಡಿನ ದಾಳಿ ಪೆಟ್ರೋಲ್, ಡೀಸೆಲ್ ಕೊರತೆ: ಶ್ರೀಲಂಕಾ ಮಿಲಿಟರಿ ಗುಂಡಿನ ದಾಳಿ

   ಅವಕಾಶಗಳನ್ನ ಕಳೆದುಕೊಂಡ ರಿಷಬ್ ಪಂತ್ !! | *Cricket | OneIndia Kannada

   ಶ್ರೀಲಂಕಾ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಭಾರತ ತನ್ನ ನೆರೆ ರಾಷ್ಟ್ರಕ್ಕೆ ಆಹಾರ ಮತ್ತು ವೈದ್ಯಕೀಯ ಸರಬರಾಜುಗಳ ಹೊರತಾಗಿಯೂ ಸಾವಿರಾರು ಟನ್‌ಗಳಷ್ಟು ಡೀಸೆಲ್ ಮತ್ತು ಪೆಟ್ರೋಲ್‌ ಸಹಾಯ ಮಾಡಿದೆ. ಆದರೂ ಬಿಕ್ಕಟ್ಟು ಮುಂದುವರಿದಿದ್ದು, ಮುಂದಿನ ವಾರದಿಂದ ದೇಶದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ವಲಯ ಕಚೇರಿಗಳನ್ನು ಸ್ಥಗಿತಮಾಡುವುದಾಗಿ ಸರಕಾರ ಘೋಷಿಸಿದೆ. ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲ ಸರಕಾರಿ ಹಾಗೂ ಅನುಮೋದಿತ ಖಾಸಗಿ ಶಾಲೆಗಳನ್ನು ಸ್ಥಗಿತಗೊಳಿಸಿ, ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ.

   English summary
   Amid fuel crisis in the country, former Sri Lankan cricketer Roshan Mahanama was providing tea and buns to people waiting in lines outside the Gas station to buy fuel and cooking gas.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X