ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಗೆದ್ದ ಶ್ರೀಲಂಕಾ

|
Google Oneindia Kannada News

ಕೊಲಂಬೊ, ಜೂನ್ 22: ಶ್ರೀಲಂಕಾ ಆರ್ಥಿಕ ಭಿಕ್ಕಟ್ಟಿನಲ್ಲಿ ಸಿಲುಕಿ ನರಳಾಡುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಹೋರಾಟಗಳ, ಗೊಂದಲಗಳು, ನೂರೆಂಟು ಸಮಸ್ಯೆಗಳ ಆಗರದಲ್ಲಿ ಮುಳುಗಿದೆ. ಈ ಮಧ್ಯೆಯೂ ತವರಿನಲ್ಲಿ ಆಯೋಜನೆಗೊಂಡಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡ 3-1ರಲ್ಲಿ ಗೆಲ್ಲುವ ಮೂಲಕ ದೇಶದ ಕ್ರಿಕೆಟ್‌ ಪ್ರೇಮಿಗಳ ಮನಸ್ಸನ್ನು ಸ್ವಲ್ಪ ಮಟ್ಟಿಗೆ ರಂಜಿಸಿದೆ.

ಬುಧವಾರ ನಡೆದ 5 ಪಂದ್ಯಗಳ ಏಕದಿನ ಸರಣಿಯ 4ನೇ ಪಂದ್ಯವನ್ನು 4 ರನ್‌ಗಳಿಂದ ಗೆಲ್ಲುವ ಮೂಲಕ 3-1ರಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಟಿ20 ಸರಣಿಯನ್ನು 2-1ರಲ್ಲಿ ಸೋಲು ಕಂಡಿದ್ದರಿಂದ ಏಕದಿನ ಸರಣಿಯೂ ಕೂಡ ಇದೇ ರೀತಿಯಾಗಬಹುದೆಂದು ಭಾವಿಸಲಾಗಿತ್ತು. ಆದರೆ ಅತಿಥೇಯ ತಂಡದ ಆಟಗಾರರು ಟಿ20ಯಲ್ಲಿ ತೋರಿದ್ದ ಪ್ರದರ್ಶನಕ್ಕೆ ತದ್ವಿರುದ್ಧ ಪ್ರದರ್ಶನ ತೋರಿ ಬರೋಬ್ಬರಿ 30 ವರ್ಷಗಳ ಬಳಿಕ ಕಾಂಗರೂ ಪಡೆಗೆ ಜಯ ತಂದುಕೊಟ್ಟಿದ್ದಾರೆ.

ಮಾಲ್ಡೀವ್ಸ್‌ ನಿಂದ ಬಂದ ಕೊಹ್ಲಿಗೆ ಕೋವಿಡ್, ಸರಣಿ ಗತಿಯೇನು?ಮಾಲ್ಡೀವ್ಸ್‌ ನಿಂದ ಬಂದ ಕೊಹ್ಲಿಗೆ ಕೋವಿಡ್, ಸರಣಿ ಗತಿಯೇನು?

ದ್ವೀಪರಾಷ್ಟ್ರ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ತಂಡದ ಯಶಸ್ವಿಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಕೇನ್ ರಿಚರ್ಡ್ಸನ್‌ ಸೇವೆಯನ್ನು ಕಳೆದುಕೊಂಡಿತ್ತು. ಈ ಏಕದಿನ ಸರಣಿಗೂ ಮುನ್ನ ಆಲ್‌ರೌಂಡರ್‌ಗಳಾದ ಆಶ್ಟನ್‌ ಅಗರ್‌ ಸೇವೆಯನ್ನು ಕಳೆದುಕೊಂಡಿತ್ತು. ಆದರೂ ಮೊದಲ ಪಂದ್ಯವನ್ನು ಗೆದ್ದು1-0ಯಲ್ಲಿ ಮುನ್ನಡೆ ಸಾಧಿಸಿದ್ದ ಫಿಂಚ್ ಪಡೆ ನಂತರ ಸತತ 3 ಪಂದ್ಯಗಳಲ್ಲಿ ಸೋಲು ಕಂಡು ಸರಣಿಯನ್ನು ಕಳೆದುಕೊಂಡಿದೆ.

Former Sri Lankan cricketers congratulate to country team for beating Australia after 30 years

ಶ್ರೀಲಂಕಾ 1992ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಜಯಿಸಿತ್ತು. ಇದೀಗ ಬರೋಬ್ಬರಿ 30 ವರ್ಷಗಳ ನಂತರ ಮೊದಲ ಬಾರಿಗೆ ಸರಣಿ ಗೆಲುವಿನ ಸವಿ ಸವಿದಿದೆ.

 Breaking; ಮಲ್ಯ ಜೊತೆ Universe Boss, ಪೋಟೋ ವೈರಲ್ Breaking; ಮಲ್ಯ ಜೊತೆ Universe Boss, ಪೋಟೋ ವೈರಲ್

ಈ ಜಯದ ನಂತರ ಮಾಜಿ ಕ್ರಿಕೆಟಿಗರು ಯುವ ತಂಡದ ಸಾಧನೆಯನ್ನು ಮನಸಾರೆ ಮೆಚ್ಚಿ ಹಾರೈಸಿದ್ದಾರೆ. ಲಂಕಾ ತಂಡದಲ್ಲಿ 2 ದಶಕಗಳ ಕಾಲ ಆಡಿರುವ ಸನತ್‌ ಜಯಸೂರ್ಯ, " ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 30 ವರ್ಷಗಳಲ್ಲಿ ಅದ್ಭುತ ಜಯ ಸಾಧಿಸಿದ ಶ್ರೀಲಂಕಾ ತಂಡಕ್ಕೆ ಅಭಿನಂದನೆಗಳು. ಇದು ಸಂಪೂರ್ಣ ತಂಡದ ಪರಿಶ್ರಮವಾಗಿದೆ, ತುಂಬಾ ಚೆನ್ನಾಗಿ ಆಡಿದ್ದೀರಾ , ಇದು ನಮಗೆ ತುಂಬಾ ಭಾವನಾತ್ಮಕ ವಿಷಯವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ನಾಯಕ ಆಂಜೆಲೋ ಮ್ಯಾಥ್ಯೂಸ್ , ನಾವೆಲ್ಲರೂ ಹೆಮ್ಮೆಪಡಬೇಕಾದ ಒಂದು ದೊಡ್ಡ ಕ್ಷಣ, ತುಂಬಾ ಚೆನ್ನಾಗಿ ಆಡಿದ್ದೀರಾ , ಇದು ಶ್ರೀಲಂಕಾ ತಂಡಕ್ಕೆ ಉತ್ತಮ ವಿಷಯ, ಹಸರಂಗ, ಧನಂಜಯ ಮತ್ತಯ ಅಸಲಂಕ ಹಾಗೂ ಎಲ್ಲಾ ಬೌಲರ್‌ಗಳು ಸರಣಿಯುದ್ದಕ್ಕೂ ಒಳ್ಳೆಯ ಸ್ಥಿರ ಪ್ರದರ್ಶನ ತೋರಿದ್ದಾರೆ, ಈ ಗೆಲುವನ್ನು ಆನಂದಿಸಿ ಬಾಯ್ಸ್ ಎಂದು ಬರೆದುಕೊಂಡಿದ್ದಾರೆ.

English summary
wednesday Sri Lanka created history after beat Australia after 30 long years in home. some former Lankan players congratulate with the country team for fantastic victory
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X