ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಕಾಲದ ಅಂತಾರಾಷ್ಟ್ರೀಯ ಅಂಪೈರ್ ಈಗ ಬಟ್ಟೆ, ಶೂ ಅಂಗಡಿ ಓನರ್

|
Google Oneindia Kannada News

2000 ರಿಂದ 2013ರ ಅವಧಿಯಲ್ಲಿ ನೂರಾ ಎಪ್ಪತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದ ಆತ ಇಂದು ಪಾಕಿಸ್ತಾನದ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಚಪ್ಪಲಿ, ಬಟ್ಟೆ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಅಂಪೈರ್ ಆಗಿದ್ದವರು ಇಂದು ಹೊಟ್ಟೆಪಾಡಿಗಾಗಿ ಅಂಗಡಿ ಯಾಕೆ ನಡೆಸುತ್ತಿದ್ದಾರೆ, ಅವರು ಯಾರು ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ ಉತ್ತರ ಈ ವರದಿಯಲ್ಲಿದೆ.

ಅಸಾದ್‌ ರೌಫ್ ಐಸಿಸಿ ಎಲೈಟ್‌ ಅಂಪೈರ್ ಗಳಲ್ಲಿ ಒಬ್ಬರು, ಇದು 49 ಟೆಸ್ಟ್, 98 ಏಕದಿನ ಮತ್ತು 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ

ಐಪಿಎಲ್‌ನಲ್ಲೂ ಅಂಪೈರಿಂಗ್ ಮಾಡಿರುವ ರೌಫ್‌ ವಿರುದ್ಧ ಬುಕ್ಕಿಗಳಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪ ಎದುರಾಗಿತ್ತು. ಐಪಿಎಲ್ 2013ರ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ರೌಫ್ ಅವರನ್ನು ಭ್ರಷ್ಟ ಚಟುವಟಿಕೆ ಮತ್ತು ಆಟಕ್ಕೆ ಅಪಖ್ಯಾತಿ ತಂದಿದ್ದಕ್ಕಾಗಿ ಶಿಸ್ತು ಸಮಿತಿ 2016 ರಲ್ಲಿ ಅಸಾದ್‌ ರೌಫ್ ಮೇಲೆ ಐದು ವರ್ಷಗಳ ಕಾಲ ಬಿಸಿಸಿಐನಿಂದ ನಿಷೇಧ ಹೇರಿತ್ತು. ನಂತರ ಅಸಾದ್ ರೌಫ್ ಜೀವನವೇ ಬದಲಾಗಿ ಹೋಗಿದೆ.

Former ICC Elite Panel Umpire Asad Rauf Currently Runs Shoe And Clothes Shops In Lahore

ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುವ ರೌಫ್

ಪಾಕಿಸ್ತಾನದ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ರೌಫ್, ನಾನು ಐಪಿಎಲ್‌ನಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇನೆ, ನನ್ನ ಮೇಲಿ ಬಂದ ಫಿಕ್ಸಿಂಗ್ ಆರೋಪ ಸುಳ್ಳು ಎಂದು ಹೇಳಿದ್ದಾರೆ.

ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್

ವಿಷಯಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ಬಿಸಿಸಿಐ ನನ್ನ ವಿರುದ್ಧ ಆರೋಪ ಮಾಡಿತು ನಂತರ ನನ್ನನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ.

Former ICC Elite Panel Umpire Asad Rauf Currently Runs Shoe And Clothes Shops In Lahore

ಈ ಮೊದಲು ಮುಂಬೈ ಮೂಲದ ಮಾಡೆಲ್‍ಗೆ ಲೈಗಿಂಕ ಕಿರುಕುಳ ನೀಡಿ ಮದುವೆ ಆಗುವುದಾಗಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೂಡ ರೌಫ್ ಮೇಲೆ ಕೇಳಿಬಂದಿತ್ತು. ಆದರೆ ರೌಫ್‌ ಈ ಆರೋಪ ಸುಳ್ಳು ಎಂದು ಅಲ್ಲಗಳೆದಿದ್ದರು. ಈಗಲೂ ತಮ್ಮ ಮಾತನ್ನೂ ಪುನರುಚ್ಛರಿಸಿದ್ದಾರೆ.

ಲಾಹೋರ್‌ನಲ್ಲಿರುವ ಲಾಂಡಾ ಬಜಾರ್ ಅಗ್ಗದ ಮತ್ತು ಕೈಗೆಟುಕುವ ಬಟ್ಟೆ, ಬೂಟುಗಳು ಮತ್ತು ಇತರ ಸರಕುಗಳನ್ನು ಒದಗಿಸಲು ಪ್ರಸಿದ್ಧವಾಗಿದೆ. ಇಲ್ಲಿಯೇ ರೌಫ್ ತಮ್ಮ ಅಂಗಡಿಯನ್ನು ತೆರೆದಿದ್ದಾರೆ.

ಬಟ್ಟೆ ಮತ್ತು ಬೂಟುಗಳೊಂದಿಗೆ ತನ್ನ ಸ್ವಂತ ಅಂಗಡಿಯನ್ನು ಹೊಂದಿರುವ ರೌಫ್, ತಾನು ತನ್ನ ಸ್ವಂತ ಅಗತ್ಯಗಳನ್ನು ಪೂರೈಸಲು ಕೆಲಸ ಮಾಡುತ್ತಿಲ್ಲ, ಇದು ನನ್ನ ಸಿಬ್ಬಂದಿಯ ದೈನಂದಿನ ವೇತನ, ನಾನು ಅವರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

English summary
Rauf was banned by the BCCI in 2016 for five years after he was accused of having accepted expensive gifts from bookies and for his involvement in a match-fixing controversy during IPL 2013. Rauf, Now has his own shop racked up to the top with clothing and shoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X