ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

AIFF ರದ್ದುಗೊಳಿಸಿದ FIFA, ಫುಟ್ಬಾಲ್ ವಿಶ್ವಕಪ್ ಆಯೋಜನೆಗೆ ಪೆಟ್ಟು

|
Google Oneindia Kannada News

ಜ್ಯೂರಿಚ್, ಆಗಸ್ಟ್ 16: ಫೀಫಾ ಅಂಡರ್ 17 ವಿಶ್ವಕಪ್ ಆಯೋಜನೆ ಮಾಡುವ ಮೂಲಕ ಫುಟ್‌ಬಾಲ್ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದ ಭಾರತಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಭಾರತೀಯ ಫುಟ್‌ಬಾಲ್ ಫೆಡರೇಷನ್(AIFF) ರದ್ದುಗೊಳಿಸಿದ ಭಾರತೀಯ ಫುಟ್ಬಾಲ್ ಫೆಡರೇಷನ್ ರದ್ದುಗೊಳಿಸಿದ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಶನ್ ಫುಟ್‌ಬಾಲ್(FIFA) ಆದೇಶ ಹೊರಡಿಸಿದೆ.

"ಮೂರನೇ ವ್ಯಕ್ತಿಗಳ(ರಾಜಕೀಯ ಹಸ್ತಕ್ಷೇಪ) ಅನುಚಿತ ಪ್ರಭಾವದಿಂದಾಗಿ' AIFF ನಿಯಮ ಮೀರಿ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಫೀಫಾ ಗಂಭೀರ ಆರೋಪ ಹೊರೆಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ AIFF ತನ್ನ ಎಲ್ಲಾ ಪಂದ್ಯಗಳ ಆಯೋಜನೆ, ಚಟುವಟಿಕೆಗಳನ್ನು ನಿಲ್ಲಿಸುವಂತೆ ಸೂಚಿಸಿದೆ.

ಈ ಮೂಲಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯೋಜನೆಗೊಂಡಿದ್ದ ಫೀಫಾ ಅಂಡರ್ 17 ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಸಿದ್ಧತೆಯೂ ಸ್ಥಗಿತಗೊಳ್ಳಲಿದೆ. ಅಕ್ಟೋಬರ್ 11 ರಿಂದ 30, 2022ರ ತನಕ ಭಾರತದಲ್ಲಿ ಈ ಪ್ರಮುಖ ಪಂದ್ಯಾವಳಿ ನಿಗದಿಯಾಗಿದೆ.

ಆದರೆ, ಈ ಗೊಂದಲ ಶೀಘ್ರವೇ ಬಗೆಹರಿಯಲಿದೆ ಎಂಬ ನಂಬಿಕೆಯನ್ನು AIFF ಹೊಂದಿದೆ. ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿಯು ಫೀಫಾ ವಿಶ್ವಕಪ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದಿದೆ. ''ಭಾರತದ ಕ್ರೀಡಾ ಹಾಗೂ ಯುವ ವ್ಯವಹಾರ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಸಕಾರಾತ್ಮಕ ಫಲಿತಾಂಶವನ್ನು ಸಾಧಿಸಬಹುದು'' ಎಂದು ಫೀಫಾ ಅಧಿಕಾರಿಗಳು ತಿಳಿಸಿದ್ದಾರೆ.

FIFA suspends All India Football Federation

ಏಕೆ ಈ ಕ್ರಮ?
ಮೇ ತಿಂಗಳಲ್ಲಿ AIFF ಅನ್ನು ರದ್ದುಗೊಳಿಸುವಂತೆ ಭಾರತದ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಕ್ರೀಡೆಗೆ ಸಂಬಂಧಿಸಿದ ವ್ಯವಹಾರಗಳನ್ನು ನಿಯಂತ್ರಿಸಲು, 18 ತಿಂಗಳುಗಳಿಂದ ಬಾಕಿ ಉಳಿದಿರುವ ಚುನಾವಣೆಗಳನ್ನು ನಡೆಸಲು ಮೂರು ಸದಸ್ಯರ ಸಮಿತಿಯನ್ನು ನೇಮಿಸಲಾಯಿತು, ಜೊತೆಗೆ AIFFನ ನೀತಿ, ನಿಯಮ, ಕಟ್ಟಳೆಗಳನ್ನು ರದ್ದುಗೊಳಿಸಲಾಗಿತ್ತು.

ಫೀಫಾ ವಿಶ್ವಕಪ್ 2026: ಯುಎಸ್ಎ, ಕೆನಡಾ, ಮೆಕ್ಸಿಕೋದ 16 ನಗರಗಳಲ್ಲಿ ಆತಿಥ್ಯಫೀಫಾ ವಿಶ್ವಕಪ್ 2026: ಯುಎಸ್ಎ, ಕೆನಡಾ, ಮೆಕ್ಸಿಕೋದ 16 ನಗರಗಳಲ್ಲಿ ಆತಿಥ್ಯ

ಇದಾದ ಬಳಿಕ FIFA ಮತ್ತು ಏಷ್ಯನ್ ಫುಟ್ಬಾಲ್ ಒಕ್ಕೂಟವು AFC ಪ್ರಧಾನ ಕಾರ್ಯದರ್ಶಿ ವಿಂಡ್ಸರ್ ಜಾನ್ ನೇತೃತ್ವದ ತಂಡವು ಭಾರತಕ್ಕೆ ಭೇಟಿ ನೀಡಿ, AIFF ಅವ್ಯವಹಾರ ಹಾಗೂ ಪಂದ್ಯಾವಳಿ ಆಯೋಜನೆ, ಆಡಳಿತ ನಡೆಸಲು ಸಂಸ್ಥೆ ಸಮರ್ಥವಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿ ತನ್ನ ವರದಿ ತಯಾರಿಸಿತ್ತು. ಜುಲೈ ಅಂತ್ಯದೊಳಗೆ AIFF ತನ್ನ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಸೆಪ್ಟೆಂಬರ್ 15 ರೊಳಗೆ ಚುನಾವಣೆಗಳನ್ನು ಮುಕ್ತಾಯಗೊಳಿಸಲು ಮಾರ್ಗಸೂಚಿಯನ್ನು ನೀಡಲಾಗಿತ್ತು.

FIFA suspends All India Football Federation

"ಎಐಎಫ್‌ಎಫ್ ಆಡಳಿತವು ತನ್ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ತೆಗೆದುಹಾಕಲಾಗುವುದು, ಕೋರ್ಟ್ ಆದೇಶದಂತೆ ಆಡಳಿತ ನಿರ್ವಾಹಕರ ಸಮಿತಿಯನ್ನು ರಚಿಸಿ ಎಐಎಫ್‌ಎಫ್ ಕಾರ್ಯಕಾರಿ ಅಧಿಕಾರವನ್ನು ವಹಿಸಿಕೊಳ್ಳಬೇಕಿದೆ" ಎಂದು ಫೀಫಾ ಹೇಳಿದೆ.

ಫೀಫಾ ಕಾನೂನುಗಳ ಪ್ರಕಾರ, ಸದಸ್ಯ ಒಕ್ಕೂಟಗಳು ತಮ್ಮ ದೇಶಗಳಲ್ಲಿ ಕಾನೂನು ಮತ್ತು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು. ಫೀಫಾ ಈ ಹಿಂದೆ ಇದೇ ರೀತಿಯ ಕಳವಳಗಳ ಮೇಲೆ ಇತರ ರಾಷ್ಟ್ರೀಯ ಸಂಸ್ಥೆಗಳನ್ನು ಅಮಾನತುಗೊಳಿಸಿದ ಉದಾಹರಣೆಗಳಿವೆ(ಪಿಟಿಐ)

English summary
Global football body FIFA announced on Monday that it would be suspending the All India Football Federation (AIFF) with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X