ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಣಕಾಲು ಚಿಕಿತ್ಸೆಗೆ ಕೇವಲ 40 ರು. ಖರ್ಚು ಮಾಡಿದ ಧೋನಿ

|
Google Oneindia Kannada News

ರಾಂಚಿ, ಜು.2: ಸ್ಟಾರ್‌ ನಟರು, ಅಗ್ರಗಣ್ಯ ಕ್ರಿಕೆಟ್‌ ಆಟಗಾರರು ದೇಶದ ಪ್ರತಿಷ್ಠಿತ ಆಸ್ಪತ್ರೆಗಳು ವೈದ್ಯರು ಸೇರಿದಂತೆ ಅನೇಕ ವಿಶೇಷ ಚಿಕ್ಸಿತಾ ಮಾರ್ಗಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ದೇಶದ ಖ್ಯಾತ ಕ್ರಿಕೆಟ್‌ ಆಟಗಾರ ಎಂ.ಎಸ್‌. ಧೋನಿ ತಮ್ಮ ದೀರ್ಘಕಾಲದ ಮೊಣಕಾಲು ಸಮಸ್ಯೆಗೆ ಕೇವಲ 40 ರುಪಾಯಿಗೆ ಚಿಕಿತ್ಸೆ ಪಡೆದುಕೊಂಡು ಸುದ್ದಿಯಾಗಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೊಣಕಾಲು ಸಮಸ್ಯೆಗೆ ಆಯುರ್ವೇದ ವೈದ್ಯರ ಚಿಕಿತ್ಸೆ ಪಡೆದು 40 ರುಪಾಯಿ ಕೊಟ್ಟು ತಮ್ಮ ಮೊಣಕಾಲು ಸಮಸ್ಯೆ ಬಗೆರಹರಿಸಿ ಕೊಂಡಿದ್ದಾರೆ. ಚಿಕಿತ್ಸೆಗೆ ಬಂದ ಎಂ.ಎಸ್‌. ದೋನಿಗೆ ಆಯುರ್ವೇದ ವೈದ್ಯರು ಪೂರ್ಣ ಚಿಕಿತ್ಸೆ ನೀಡಿ ಒಟ್ಟು 40 ರುಪಾಯಿ ಶುಲ್ಕ ವಿಧಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್‌ಮನ್ ತಿಂಗಳುಗಟ್ಟಲೆ ಮೊಣಕಾಲಿನ ನೋವಿನೊಂದಿಗೆ ಹೋರಾಡುತ್ತಿದ್ದು, ಅದರ ನಿವಾರಣೆಗೆ ವಿವಿಧೆಡೆಗಳಲ್ಲಿ ಚಿಕಿತ್ಸೆಗಾಗಿ ಓಡಾಡುತ್ತಿದ್ದರು.

ಫಾರ್ಮ್ ಹೌಸ್‌ಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡ ಧೋನಿಫಾರ್ಮ್ ಹೌಸ್‌ಗೆ ಹೊಸ ಅತಿಥಿಗಳನ್ನು ಬರಮಾಡಿಕೊಂಡ ಧೋನಿ

ಕ್ರಿಕೆಟಿಗ ಧೋನಿ ತನ್ನ ಪೋಷಕರ ಚಿಕಿತ್ಸೆಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೋಡಿದ ನಂತರ ರಾಂಚಿಯ ಆಶ್ರಮದಲ್ಲಿ ಮೊಣಕಾಲಿನ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ರಾಂಚಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಲಪುಂಗ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆಯುರ್ವೇದ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರು ಕ್ರಿಕೆಟಿಗ ಎಂ.ಎಸ್‌. ದೋನಿಯ ಚೇತರಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

Ex India captain Mahendra Singh Dhoni takes treatment for 40 rs

ವೈದ್ಯ ವಂದನ್ ಸಿಂಗ್ ಖೇರ್ವಾರ್ ಪ್ರಕಾರ, "ಮಹೇಂದ್ರ ಸಿಂಗ್ ಧೋನಿ ಅವರು ಕ್ಯಾಲ್ಸಿಯಂ ಕೊರತೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ನಾನು ಅವರಿಗೆ ಸಮಾಲೋಚನೆ ಶುಲ್ಕವಾಗಿ 20 ರುಪಾಯಿ ವಿಧಿಸುತ್ತೇನೆ ಹಾಗೂ ಅವರಿಗೆ 20 ರುಪಾಯಿ ಮೌಲ್ಯದ ಔಷಧಗಳನ್ನು ಶಿಫಾರಸು ಮಾಡುತ್ತೇನೆ," ಎಂದು ತಿಳಿಸಿದ್ದಾರೆ.

ಎಂ. ಎಸ್. ಧೋನಿ ಸಾಧನೆ ಸರಿಗಟ್ಟಿದ ದಿನೇಶ್ ಕಾರ್ತಿಕ್ಎಂ. ಎಸ್. ಧೋನಿ ಸಾಧನೆ ಸರಿಗಟ್ಟಿದ ದಿನೇಶ್ ಕಾರ್ತಿಕ್

ಧೋನಿ ನನ್ನನ್ನು ನೋಡಲು ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ಅವರ ಪರಿವಾರದಲ್ಲಿದ್ದವರು ವೈದ್ಯರೇ, ದೋನಿ ನಿಮ್ಮನ್ನು ನೋಡಲು ಬಂದಿದ್ದಾರೆ ಎಂದು ಹೇಳಿದರು. ಆಗ ಧೋನಿಯವರನ್ನು ನೋಡಿ ಖುಷಿಯಾಯಿತು ಎಂದು ವಂದನ್ ಸಿಂಗ್ ಖೇರ್ವಾರ್ ಹೇಳಿದ್ದಾರೆ.

Ex India captain Mahendra Singh Dhoni takes treatment for 40 rs

ಕಳೆದ ಮೂರು ತಿಂಗಳಿಂದ ಧೋನಿ ಅವರ ಪೋಷಕರಿಗೆ ನಾನು ಚಿಕಿತ್ಸೆ ನೀಡಿದ್ದೇನೆ. ಈ ಪ್ರದೇಶದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದು, ಅವರನ್ನು ನೋಡಲು ಜನರ ಸಮೂಹ ಸೇರುತ್ತದೆ. ಆದ್ದರಿಂದ ಸಾಕಷ್ಟು ಜನದಟ್ಟಣೆ ಆಗುವುದನ್ನು ತಪ್ಪಿಸಲು ಮಹೇಂದ್ರ ಸಿಂಗ್ ಧೋನಿ ತಮ್ಮ ಕಾರಿನೊಳಗೆ ಕುಳಿತುಕೊಳ್ಳಲು ಬಯಸುತ್ತಾರೆ. ಅವರು ತನ್ನ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ತನ್ನ ಅಭಿಮಾನಿಗಳು ತಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅವರಿಗೆ ಸೆಲ್ಫಿ ತೆಗೆದುಕೊಟ್ಟು ಹೋಗುತ್ತಾರೆ ಎಂದು ಹೇಳಿದರು.

Recommended Video

Bill Gates ಹಂಚಿಕೊಂಡ ವಿಶೇಷ ಫೋಟೋ ನೋಡಿ ಗಾಬರಿಗೊಂಡ ಜನ | OneIndia Kannada

English summary
The country's famous cricketer M.S. Dhoni is in the news for getting treatment for his chronic knee problem for just 40 rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X