ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕೆಟ್ ಮನಿಗಾಗಿ ಪರಿತಪಿಸುತ್ತಿದ್ದ ಎಲ್ದೋಸ್‌ ಪಾಲ್‌ ಈಗ ಚಿನ್ನದ ಸಾಧಕ

|
Google Oneindia Kannada News

ನವದೆಹಲಿ, ಆಗಸ್ಟ್‌ 08: ತಮ್ಮ ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಕಷ್ಟಪಡುತ್ತಿದ್ದ ಎಲ್ದೋಸ್ ಪಾಲ್ ಈಗ ಚಿನ್ನದ ಒಡೆಯ.

ಚಿಕ್ಕ ಮಗುವಾಗಿದ್ದಾಗ ತಾಯಿಯ ಮರಣದ ನಂತರ ತನ್ನ ಅಜ್ಜಿ ಮತ್ತು ಕಾರ್ಮಿಕರಾಗಿದ್ದ ತಂದೆ ಬಳಿ ಬೆಳೆದ ಎಲ್ದೋಸ್ ಪಾಲ್, ತಮ್ಮ ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗಾಗಿ ಕಷ್ಟಪಡುತ್ತಿದ್ದರು.

CWG 2022: ಬ್ಯಾಡ್ಮಿಂಟನ್‌ಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದ ಲಕ್ಷ್ಯಸೇನ್‌

ಆದರೆ ಈಗ ಅವರು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಟ್ರಿಪಲ್ ಜಂಪ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಎರ್ನಾಕುಲಂ ನಗರದಿಂದ 26 ಕಿ. ಮೀ. ದೂರದಲ್ಲಿರುವ ಗ್ರಾಮಾಂತರ ಪ್ರದೇಶವಾದ ಕೋಲೆಂಚೇರಿಯಿಂದ ಬಂದ ಎಲ್ದೋಸ್‌ ಪಾಲ್ ಅವರು 5 ವರ್ಷದವರಿದ್ದಾಗಲೇ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡರು.

ಆಗ ಅವರದ್ದು ತುಂಬಾ ಬಡ ಕುಟುಂಬವಾಗಿತ್ತು. ಅವರ ಅಜ್ಜಿ ಅವರನ್ನು ಬೆಳೆಸಿದರು. ಅವರ ತಂದೆ ಕೂಲಿ ಕಾರ್ಮಿಕರಾಗಿದ್ದರು. ಕುಟುಂಬದಲ್ಲಿ ಬಹಳಷ್ಟು ಆರ್ಥಿಕ ಸಮಸ್ಯೆಗಳೂ ಇದ್ದವು. ಆದರೆ ಅದಾವುದರಿಂದಲೂ ಜರ್ಜರಿತರಾಗದೆ ಪೌಲ್‌ ಬೆಳೆದರು. ಅವರು ಗುರಿ ಅಚಲವಾಗಿತ್ತು.

ಕಾಮನ್‌ವೆಲ್ತ್‌ ಗೇಮ್ಸ್ 2022: ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪಿ.ವಿ ಸಿಂಧು

ಎಲ್ದೋಸ್‌ ಪೌಲ್‌ ಬಗ್ಗೆ ಅವರ ಬಾಲ್ಯದ ತರಬೇತುದಾರ ಟಿ. ಪಿ. ಔಸೆಫ್ ಮಾತನಾಡಿ, "ತನ್ನ 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಈಗ 25 ವರ್ಷ ವಯಸ್ಸಿನ ಪಾಲ್ ಕೋತಮಂಗಲಂನಲ್ಲಿರುವ ಮಾರ್ ಅಥನಾಸಿಯಸ್ ಕಾಲೇಜಿನ ಕ್ರೀಡಾ ಹಾಸ್ಟೆಲ್‌ಗೆ ಪ್ರವೇಶ ಪಡೆಯಲು ಬಯಸಿದ್ದನು" ಎಂದರು.

ಈ ಕಾಲೇಜು ಕೇರಳದಲ್ಲಿ ಅಥ್ಲೀಟ್‌ಗಳನ್ನು ತಯಾರು ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಆದರೆ ಪೌಲ್‌ನ ಕುಳ್ಳನಾಗಿದ್ದರಿಂದ ಅವರನ್ನು ಆರಂಭದಲ್ಲಿ ಮುಖ್ಯ ತರಬೇತುದಾರ ಔಸೆಫ್ ತಿರಸ್ಕರಿಸಿದರು. 2013 ರ ಸುಮಾರಿಗೆ ಮಾರ್ ಅಥನಾಸಿಯಸ್ ಕಾಲೇಜಿನಲ್ಲಿನ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಪ್ರವೇಶಕ್ಕಾಗಿ ನನ್ನ ಪರಿಚಯಸ್ಥರೊಬ್ಬರು ಪಾಲ್ ಅವರನ್ನು ಕರೆತಂದರು. ನಾನು ಮುಖ್ಯ ತರಬೇತುದಾರನಾಗಿದ್ದೆ. ಆದರೆ ಈ ಹುಡುಗ ತುಂಬಾ ಕುಳ್ಳಗಿದ್ದಾನೆ ಮತ್ತು ಅವನು ಟ್ರಿಪಲ್ ಜಂಪ್‌ಗೆ ಹೇಗೆ ಸೂಕ್ತ ಎಂದು ನಾನು ಹೇಳಿದೆ ಎಂದು ಔಸೆಫ್ ಹೇಳಿದರು.

ಟ್ರಿಪಲ್ ಜಂಪರ್‌ಗೆ ಅವನ ಎತ್ತರವು ಕಡಿಮೆ ಇತ್ತು. ಈಗಲೂ, ಅವನು ಸುಮಾರು 5 ಅಡಿ 8 ಇಂಚು ಎತ್ತರ ಇದ್ದಾನೆ. ಆದರೆ ಪ್ರಯೋಗದ ನಂತರ, ಪಾಲ್ ಉತ್ತಮ ವೇಗ, ಸ್ಥಿತಿಸ್ಥಾಪಕ ದೇಹವನ್ನು ಹೊಂದಿದ್ದಾನೆ ಎಂದು ನಾನು ಕಂಡುಕೊಂಡೆ. ಮೊದಲ ವರ್ಷದಲ್ಲಿ ಪಾಲ್ ಪ್ರಭಾವಶಾಲಿ ಕ್ರೀಡಾಸಕ್ತನಾಗಿರಲಿಲ್ಲ. ಆದರೆ ಒಂದೆರಡು ವರ್ಷಗಳ ನಂತರ ಚುರುಕಾಗಿ ಆಯ್ಕೆಯಾದನು.

ವರ್ಷದಿಂದ ವರ್ಷಕ್ಕೆ ಜಿಗಿಯುವ ಅಂತರ ಜಾಸ್ತಿಯಾಯಿತು

ವರ್ಷದಿಂದ ವರ್ಷಕ್ಕೆ ಜಿಗಿಯುವ ಅಂತರ ಜಾಸ್ತಿಯಾಯಿತು

ಅವನನ್ನು ನನ್ನ ಬಳಿಗೆ ಕರೆತಂದಾಗ ಸುಮಾರು 13 ಮೀಟರ್ ಜಿಗಿತವನ್ನು ಮಾತ್ರ ಮಾಡುತ್ತಿದ್ದನು. ಮುಂದಿನ ವರ್ಷ ಅವನು 14 ಮೀ. ಗೆ ಏರಿಕೆ ಕಂಡನು. ಮೂರನೇ ವರ್ಷಕ್ಕೆ ಅವನು 16 ಮೀಟರ್ ಹತ್ತಿರ ಜಿಗಿಯುತ್ತಿದ್ದನು. ಆಗ ಈ ಹುಡುಗ ಭಾರತಕ್ಕೆ ಒಂದು ದಿನ ಪದಕಗಳನ್ನು ಗೆಲ್ಲುತ್ತಾನೆ ಎಂದು ನನಗೆ ತಿಳಿಯಿತು. ಪೌಲ್ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದರಿಂದ ನಾನು ಪೌಲ್‌ಗೆ ಅನೇಕ ಸಂದರ್ಭಗಳಲ್ಲಿ ಸಹಾಯ ಮಾಡಿದರು ಎಂದು ಔಸೆಫ್ ಹೇಳಿದರು.

ಪಾಕೆಟ್‌ ಮನಿಗಾಗಿ ಕೆಲಸಕ್ಕೆ ಹೋಗುತ್ತಿದ್ದ

ಪಾಕೆಟ್‌ ಮನಿಗಾಗಿ ಕೆಲಸಕ್ಕೆ ಹೋಗುತ್ತಿದ್ದ

ವಾರದಲ್ಲಿ ಒಂದು ಅಥವಾ ಎರಡು ದಿನ ಪೌಲ್‌ ಹಾಸ್ಟೆಲ್ ಬಿಟ್ಟು ಮನೆಗೆ ಹೋಗುತ್ತಿದ್ದನು. ಅದಕ್ಕೆ ನಾನು ಅವನನ್ನು ಏಕೆ ಎಂದು ಕೇಳಿದೆ. ಆಗ ಅವನು ತನ್ನ ಪಾಕೆಟ್ ಮನಿಗಾಗಿ ತನ್ನ ಅಜ್ಜಿಯ ಮಾಲೀಕತ್ವದ ಸಾ ಮಿಲ್‌ನಲ್ಲಿ ಕೆಲಸ ಮಾಡಲು ಹೋಗುವುದಾಗಿ ತಿಳಿಸುತ್ತಿದ್ದನು ಎಂದು ಹೇಳಿದನು. ಅವರು ತುಂಬಾ ವಿನಮ್ರನಾಗಿದ್ದು, ಉತ್ತಮ ನಡತೆಯುಳ್ಳವನಾಗಿದ್ದನು.

ಗುರುತಿಸುವಷ್ಟು ಸಾಧನೆ ಏನೂ ಮಾಡಿರಲಿಲ್ಲ

ಗುರುತಿಸುವಷ್ಟು ಸಾಧನೆ ಏನೂ ಮಾಡಿರಲಿಲ್ಲ

ಪೌಲ್ ನನ್ನ ಬಳಿಗೆ ಬಂದಾಗ ಆತ ಯಾವುದೇ ವ್ಯವಸ್ಥಿತ ತರಬೇತಿಯನ್ನು ಪಡೆದಿರಲಿಲ್ಲ. ಆದರೆ ಕೆಲವು ಜಿಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದನು. ಅಲ್ಲಿ ಗುರುತಿಸುವಷ್ಟು ಸಾಧನೆ ಏನೂ ಇರಲಿಲ್ಲ. ಆದರೆ ನನ್ನ ಬಳಿಗೆ ಬಂದಾಗ ನಾನು ಅವನಿಗೆ ಮೊದಲಿನಿಂದಲೂ ವ್ಯವಸ್ಥಿತ ತರಬೇತಿಯನ್ನು ನೀಡಿದ್ದೇನೆ. ಆರ್ಟ್ಸ್ ಪದವಿ ಓದುತ್ತಿದ್ದ ಪಾಲ್ 2016 ರಲ್ಲಿ ಭಾರತೀಯ ನೌಕಾಪಡೆಯಿಂದ ಆಯ್ಕೆಯಾದ ಕಾರಣ ತನ್ನ ಕೋರ್ಸ್ ಅನ್ನು ಪೂರ್ಣಗೊಳಿಸದೆ ಕಾಲೇಜು ತೊರೆದನು.

ಮೊದಲ ಬಾರಿಗೆ 17 ಮೀ ಹಾರಿದ ಪೌಲ್‌

ಮೊದಲ ಬಾರಿಗೆ 17 ಮೀ ಹಾರಿದ ಪೌಲ್‌

ನಾನು ಅವನಿಗೆ ಕೆಲಸಕ್ಕೆ ಹೋಗಲು ಹೇಳಿದೆ. ಏಕೆಂದರೆ ಅದು ಅವನಿಗೆ ಆರ್ಥಿಕವಾಗಿ ಬಹಳ ಮುಖ್ಯವಾಗಿತ್ತು. ಅವನು 2016ರಲ್ಲಿ ಅವನನ್ನು ಕಳುಹಿಸುವ ಸಂದರ್ಭದಲ್ಲಿ ಅವನು ಸುಮಾರು 15.75 ಮೀ ಜಿಗಿತ ಮಾಡುತ್ತಿದ್ದನು. ನಂತರ ಅವನು ಭಾರತೀಯ ನೌಕಾಪಡೆಯಲ್ಲಿದ್ದಾಗ ಅದನ್ನು 16 ಮೀ ಗಿಂತ ಹೆಚ್ಚು ಎತ್ತರಕ್ಕೆ ಹಾರಲು ಸುಧಾರಿಸಿದ್ದನು. ಆದರೆ ಮೊದಲ ಬಾರಿಗೆ ಇಂದು ಅವನು 17 ಮೀ ಹಾರಿದನು. ಅವನು ಚಿನ್ನದ ಪದಕ ಗೆದ್ದ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಗಿದೆ. ಅವರ ಕುಟುಂಬದವರೊಬ್ಬರು ಈ ಬಗ್ಗೆ ಮಾಹಿತಿ ನೀಡಲು ಇಂದು ನನ್ನನ್ನು ಕರೆದರು. ನಾನು ಬೆಳೆಸಿದ ಕ್ರೀಡಾಪಟುವು ದೇಶಕ್ಕೆ ಹೆಮ್ಮೆ ತಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಲ್ದೋಸ್‌ ಪೌಲ್‌ ತರಬೇತುದಾರ ಟಿ.ಪಿ. ಔಸೆಫ್ ತಿಳಿಸಿದರು.

English summary
Raised by his grandmother and laborer father after his mother's death as a young child, Eldhose Paul struggled for pocket money during his college days. But now he has won gold in the historic triple jump at the Birmingham Commonwealth Games.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X