ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಪ್ರಸಾರ ಹಕ್ಕು ಮಾರಾಟ; ಡಿಸ್ನಿಸ್ಟಾರ್‌ಗೆ ಟಿವಿ, ವಯಾಕಾಮ್18ಗೆ ಡಿಜಿಟಲ್ ಹಕ್ಕು

|
Google Oneindia Kannada News

ಬೆಂಗಳೂರು, ಜೂನ್ 14: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ ಐದು ವರ್ಷಗಳ ಅವಧಿಯ ಪಂದ್ಯಗಳ ಪ್ರಸಾರ ಹಕ್ಕುಗಳು ಭರ್ಜರಿ ಮೊತ್ತಕ್ಕೆ ಬಿಕರಿಯಾಗಿವೆ. ಈ ಪ್ರಸಾರ ಹಕ್ಕು ಹರಾಜಿನಿಂದ ಬಿಸಿಸಿಐ ಖಜಾನೆಗೆ 44,075 ಕೋಟಿ ರೂ ಬಂದು ಬೀಳಲಿದೆ. 2023 ರಿಂದ 2027ರವರೆಗಿನ ಎಲ್ಲಾ ಐಪಿಎಲ್ ಪಂದ್ಯಗಳನ್ನು ಭಾರತದಲ್ಲಿ ಟಿವಿಯಲ್ಲಿ ಪ್ರಸಾರ ಮಾಡುವ ಹಕ್ಕನ್ನು ಡಿಸ್ನಿಸ್ಟಾರ್ ಗೆದ್ದುಕೊಂಡಿದೆ. ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ಗೆ ಸೇರಿದ ವಯಾಕಾಮ್18 (Viacom18) ಸಂಸ್ಥೆಗೆ ಡಿಜಿಟಲ್ ಪ್ರಸಾರದ ಹಕ್ಕು ಸಿಕ್ಕಿದೆ.

Recommended Video

IPL ನ ಪ್ರತಿ ಪಂದ್ಯ 111 ಕೋಟಿಗೆ ಮಾರಾಟ | *Cricket | OneIndia Kannada

44,075 ಕೋಟಿ ರೂ.ಗೆ ಐಪಿಎಲ್ ಟಿವಿ ಮತ್ತು ಡಿಜಿಟಲ್ ಪ್ರಸಾರದ ನೇರಪ್ರಸಾರದ ಹಕ್ಕು ಮಾರಾಟ44,075 ಕೋಟಿ ರೂ.ಗೆ ಐಪಿಎಲ್ ಟಿವಿ ಮತ್ತು ಡಿಜಿಟಲ್ ಪ್ರಸಾರದ ನೇರಪ್ರಸಾರದ ಹಕ್ಕು ಮಾರಾಟ

ಐಪಿಎಲ್‌ನ ಐದು ಸೀಸನ್‌ನ ಪಂದ್ಯಗಳ ಪ್ರಸಾರ ಹಕ್ಕುಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ಹರಾಜಿಗಿಡಲಾಗಿತ್ತು. ಎ ಪ್ಯಾಕೇಜ್‌ನಲ್ಲಿ ಭಾರತೀಯ ಉಪಖಂಡದಲ್ಲಿ ಟಿವಿ ಪ್ರಸಾರದ ಹಕ್ಕು ಇದ್ದರೆ, ಬಿ ಪ್ಯಾಕೇಜ್‌ನಲ್ಲಿ ಡಿಜಿಟಲ್ ಪ್ರಕಟಣೆಯ ಹಕ್ಕು ಇತ್ತು. ಸಿ ಪ್ಯಾಕೇಜ್‌ನಲ್ಲಿ ವಿದೇಶಗಳಲ್ಲಿ ಪ್ರತೀ ಸೀಸನ್‌ನಲ್ಲೂ ಆಯ್ದ ಕೆಲ ಪಂದ್ಯಗಳಿಗೆ ಡಿಜಿಟಲ್ ಹಕ್ಕು ಇದೆ. ನಾಲ್ಕನೇ ಪ್ಯಾಕೇಜ್‌ನಲ್ಲಿ ವಿದೇಶಗಳಲ್ಲಿ ಟಿವಿ ಮತ್ತು ಡಿಜಿಟಲ್ ಪ್ರಸಾರಗಳ ಎಲ್ಲಾ ಹಕ್ಕು ಇದೆ.

ಟಿವಿ ಪ್ರಸಾರದ ಬೆಲೆ ಒಂದು ಪಂದ್ಯಕ್ಕೆ 57.5 ಕೋಟಿ ರೂ:

ಟಿವಿ ಪ್ರಸಾರದ ಬೆಲೆ ಒಂದು ಪಂದ್ಯಕ್ಕೆ 57.5 ಕೋಟಿ ರೂ:

ಭಾರತೀಯ ಉಪಖಂಡದಲ್ಲಿ ಟಿವಿ ಪ್ರಸಾರದ ಹಕ್ಕನ್ನು ಡಿಸ್ನಿ ಸ್ಟಾರ್ ಸಂಸ್ಥೆ 23,575 ಕೋಟಿ ರೂಗೆ ಖರೀದಿ ಮಾಡಿದೆ. ಇದರಲ್ಲಿ 410 ಪಂದ್ಯಗಳ ಪ್ರಸಾರ ಹಕ್ಕು ಇದೆ. ಅಂದರೆ ಒಂದು ಪಂದ್ಯಕ್ಕೆ ಬರೋಬ್ಬರಿ 57.5 ಕೋಟಿ ರೂನಂತೆ ಹಣ ತೆತ್ತು ಸ್ಟಾರ್ ಹಕ್ಕು ಸಂಪಾದನೆ ಮಾಡಿದೆ.

ಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆ

ರಿಲಯನ್ಸ್ ಸುಪರ್ದಿಗೆ ಡಿಜಿಟಲ್ ಹಕ್ಕು:

ರಿಲಯನ್ಸ್ ಸುಪರ್ದಿಗೆ ಡಿಜಿಟಲ್ ಹಕ್ಕು:

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ವಯಾಕಾಮ್18 ಬಿ ಪ್ಯಾಕೇಜ್ ಅನ್ನು ಪಡೆಯಿತು. ಐದು ವರ್ಷಗಳ ಅವಧಿಯ ಐಪಿಎಲ್ ಪಂದ್ಯಗಳ ಡಿಜಿಟಲ್ ಹಕ್ಕನ್ನು 20,500 ಕೋಟಿ ರೂ ಕೊಟ್ಟು ಖರೀದಿಸಿದೆ. ಒಂದು ಪಂದ್ಯಕ್ಕೆ 50 ಕೋಟಿ ರೂ ಬೆಲೆ ನೀಡಿದೆ.

ಇದಕ್ಕೆ ಹಿಂದಿನ ಐದು ವರ್ಷದ ಅವಧಿಯಲ್ಲಿ ಡಿಸ್ನಿ ಸ್ಟಾರ್ ಸಂಸ್ಥೆ ಟಿವಿ ಮತ್ತು ಡಿಜಿಟಲ್ ಹಕ್ಕು ಎರಡನ್ನೂ 16,347.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಅಂದರೆ, ಒಂದು ಪಂದ್ಯದ ಹಕ್ಕಿಗೆ 54.5 ಕೋಟಿ ರೂ ನೀಡಿತ್ತು. ಈ ಬಾರಿ ಟಿವಿ ಪ್ರಸಾರ ಒಂದಕ್ಕೇ 57 ಕೋಟಿಗೂ ಹೆಚ್ಚು ಹಣ ನೀಡಿದೆ.

ಸಿ ಮತ್ತು ಡಿ ಪ್ಯಾಕೇಜ್‌ಗಳ ಹಕ್ಕು

ಸಿ ಮತ್ತು ಡಿ ಪ್ಯಾಕೇಜ್‌ಗಳ ಹಕ್ಕು

ಇನ್ನು ಸಿ ಮತ್ತು ಡಿ ಪ್ಯಾಕೇಜ್‌ಗಳ ಹಕ್ಕು ಮಾರಾಟಕ್ಕೆ ಬಿಡ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಸಿ ಪ್ಯಾಕೇಜ್ ಪಡೆಯಲು ವಯಾಕಾಮ್೧೮ ಪ್ರಯತ್ನ ಮಾಡುತ್ತಿದೆ. ಮೂಲ ಬೆಲೆಗಿಂತ ಹೆಚ್ಚು ಮೊತ್ತಕ್ಕೆ ಈ ಎರಡು ಪ್ಯಾಕೇಜ್‌ಗಳು ಬಿಕರಿಯಾಗುವ ಸಾಧ್ಯತೆ ಇದೆ. ಇಂದು ಮಂಗಳವಾರ ಸಂಜೆಯೊಳಗೆ ಅಂತಿಮ ಚಿತ್ರಣ ಸಿಗಲಿದೆ. ನಾಲ್ಕೂ ಪ್ಯಾಕೇಜ್‌ಗಳ ಹಕ್ಕು ಮಾರಾಟವಾದ ಬಳಿ ಬಿಸಿಸಿಐ ಅಧಿಕೃತವಾಗಿ ಇದನ್ನು ಪ್ರಕಟಿಸುವ ಸಾಧ್ಯತೆ ಇದೆ.

ಡಿಸ್ನಿ ಸ್ಟಾರ್ ಮತ್ತು ವಯಾಕಾಮ್18 ಸಂಸ್ಥೆಗಳು ಇಷ್ಟು ದೊಡ್ಡ ಮೊತ್ತಕ್ಕೆ ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕನ್ನು ಖರೀದಿಸಿದ್ದು ಅನಿರೀಕ್ಷಿತವಲ್ಲ. ಆದರೆ, ಇದರಿಂದ ಎಷ್ಟರಮಟ್ಟಿಗೆ ಲಾಭ ಮಾಡಿಕೊಳ್ಳಲು ಸಾಧ್ಯ ಎಂಬುದು ತಜ್ಞರಿಗೂ ಮೂಡಿರುವ ಸಂದೇಹ.

ದುಬಾರಿ ಜಾಹೀರಾತು:

ದುಬಾರಿ ಜಾಹೀರಾತು:

ಐಪಿಎಲ್ ಪಂದ್ಯಗಳ ವೇಳೆ ಟಿವಿ ಜಾಹೀರಾತುಗಳ ಸಂಖ್ಯೆ ಹೆಚ್ಚಾಗಬಹುದು. 10 ಸೆಕೆಂಡ್ ಜಾಹೀರಾತಿಗೆ 20 ಲಕ್ಷಕ್ಕಿಂತ ಹೆಚ್ಚು ಬೆಲೆ ನಿಗದಿಯಾಗಬಹುದು. ಕಳೆದ ಸೀಸನ್‌ನಲ್ಲಿ ಡಿಸ್ನಿಸ್ಟಾರ್ ಜಾಹೀರಾತಿನಿಂದ ಸಾಕಷ್ಟು ಆದಾಯ ಮಾಡಿಕೊಂಡರೂ ನಿವ್ವಳ ಲಾಭ ಸಾಧ್ಯವಾಗದೇ ಹೋಗಿದ್ದಿರಬಹುದು. ಈ ಬಾರಿ ಎರಡು ಪಟ್ಟು ಹೆಚ್ಚು ಹಣ ತೆತ್ತಿರುವ ಡಿಸ್ನಿಸ್ಟಾರ್ ಅಷ್ಟು ಹಣವನ್ನು ಹೇಗೆ ಸಂಪಾದನೆ ಮಾಡಿ ಲಾಭ ಮಾಡಿಕೊಳ್ಳುತ್ತದೆ ಎಂಬುದು ಪ್ರಶ್ನೆ.

ಹಾಗೆಯೇ, ಡಿಜಿಟಲ್ ಪ್ರಸಾರದ ಹಕ್ಕು ಪಡೆದ ವಯಾಕಾಮ್18ಗೂ ಈಗ ಲಾಭ ಮಾಡಿಕೊಳ್ಳುವ ಬಗೆ ಹೇಗೆ ಎಂಬುದು ಸವಾಲಿನ ಪ್ರಶ್ನೆಯಾಗಬಹುದು ಎಂದು ಉದ್ಯಮ ತಜ್ಞರು ಹೇಳುತ್ತಾರೆ.

ಆದಾಯದ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಈ ಸಂಸ್ಥೆಗಳು ಇಷ್ಟು ದೊಡ್ಡ ಮೊತ್ತಕ್ಕೆ ಬಿಡ್ ಸಲ್ಲಿಸಿರುತ್ತವೆ. ಲಾಭ ಮಾಡಿಕೊಳ್ಳುವ ದಾರಿ ಹುಡುಕಿರುತ್ತವೆ ಎಂಬುದೂ ನಿಜವೇ.

(ಒನ್ಇಂಡಿಯಾ ಸುದ್ದಿ)

English summary
DisneyStar is said to have won the television broadcast rights for the IPL, while the digital rights went to Viacom18. BCCI will be richer with a total Rs 44,075 crore for the rights over the next five years
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X