ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CWG 2022: ಅಮಿತ್ ಪಂಗಲ್, ನೀತು ಘಂಘಲ್‌ಗೆ ಚಿನ್ನ, ಮಹಿಳಾ ಹಾಕಿ ತಂಡಕ್ಕೆ ಕಂಚು

|
Google Oneindia Kannada News

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಭಾನುವಾರ ಬಾಕ್ಸಿಂಗ್‌ನಲ್ಲಿ ಪುರುಷರ 51 ಕೆಜಿ ವಿಭಾಗದಲ್ಲಿ ಭಾರತದ ಅಮಿತ್ ಪಂಗಲ್ ಚಿನ್ನ ಗೆದ್ದರು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕದ ನಿರಾಸೆ ಅನುಭವಿಸಿದ್ದ ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ಬಂಗಾರದ ಪದಕಕ್ಕೆ ಮುತ್ತಿಟ್ಟರು. ಇಂಗ್ಲೆಂಡ್‌ನ ಕಿಯಾರನ್ ಮ್ಯಾಕ್‌ಡೊನಾಲ್ಡ್ ವಿರುದ್ಧದ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡರು.

ಸ್ಥಳೀಯ ಆಟಗಾರ ಕಿಯಾರನ್ ಮ್ಯಾಕ್‌ಡೊನಾಲ್ಡ್‌ಗೆ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರೂ, ಅಮಿತ್ ಪಂಗಲ್ ಭರ್ಜರಿ ಆಟವಾಡಿದರು. ಮ್ಯಾಕ್‌ಡೊನಾಲ್ಡ್ ಅವರ ಎತ್ತರದ ಪ್ರಯೋಜನವನ್ನು ಬಳಸಲು ವಿಫಲವಾದ ಕಾರಣ ಭಾರಿ ಹೊಡೆತ ತಿಂದರು.

ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಎತ್ತರ ಜಿಗತದಲ್ಲಿ ಭಾರತಕ್ಕೆ ಮೊದಲ ಪದಕಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಎತ್ತರ ಜಿಗತದಲ್ಲಿ ಭಾರತಕ್ಕೆ ಮೊದಲ ಪದಕ

ಪುರುಷರ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಅಮಿತ್ ಪಂಗಲ್ 5-0 ಅಂತರದಲ್ಲಿ ಗೆದ್ದರು. ಅಮಿತ್ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ ಸಂಭ್ರಮಿಸಿದರು.

ಕೇವಲ 5 ಅಡಿ ಮತ್ತು 2 ಇಂಚುಗಳಷ್ಟು ಎತ್ತರವಿರುವ ಪಂಗಲ್, ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮತ್ತು ಏಕೈಕ ಭಾರತೀಯ ಪುರುಷ ಬಾಕ್ಸರ್ ಎನಿಸಿಕೊಂಡಿದ್ದಾರೆ. ಹರಿಯಾಣದ ರೋಹ್ಟಕ್ ಮೂಲದ ಕೃಷಿ ಕುಟುಂಬದಲ್ಲಿ ಜನಿಸಿದ ಪಂಗಲ್, ಬಾಕ್ಸರ್ ಆಗಲು ತನ್ನ ಹಿರಿಯ ಸಹೋದರ ಅಜಯ್ ಅವರಿಂದ ಸ್ಫೂರ್ತಿ ಪಡೆದರು.

ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ನೀತು ಘಂಘಾಸ್

ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ನೀತು ಘಂಘಾಸ್

ಭಾರತದ ನೀತು ಘಂಘಾಸ್ ತಾನು ಭಾಗವಹಿಸಿದ ಮೊದಲ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೇ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಅವರು ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಇಂಗ್ಲೆಂಡ್‌ನ ಡೆಮಿ-ಜೇಡ್ ರೆಸ್ಟನ್ ಅವರನ್ನು ಸೋಲಿಸಿದರು.

ಮಹಿಳೆಯರ 48 ಕೆಜಿ ಕನಿಷ್ಠ ತೂಕ ವಿಭಾಗದಲ್ಲಿ 21 ವರ್ಷದ ನೀತು ಘಂಘಾಸ್ 5-0 ಅಂತರದಲ್ಲಿ ಫೈನಲ್‌ನಲ್ಲಿ ಭರ್ಜರಿ ಜಯಗಳಿಸಿದರು.

CWG 2022: ಇಂಗ್ಲೆಂಡ್ ಬಗ್ಗುಬಡಿದು ಚಿನ್ನದ ಪದಕ ಸುತ್ತಿಗೆ ಎಂಟ್ರಿ ಕೊಟ್ಟ ಕೌರ್ ಪಡೆCWG 2022: ಇಂಗ್ಲೆಂಡ್ ಬಗ್ಗುಬಡಿದು ಚಿನ್ನದ ಪದಕ ಸುತ್ತಿಗೆ ಎಂಟ್ರಿ ಕೊಟ್ಟ ಕೌರ್ ಪಡೆ

ಹಾಕಿಯಲ್ಲಿ ಭಾರತದ ವನಿತೆಯರ ತಂಡಕ್ಕೆ ಕಂಚು

ಹಾಕಿಯಲ್ಲಿ ಭಾರತದ ವನಿತೆಯರ ತಂಡಕ್ಕೆ ಕಂಚು

ನ್ಯೂಜಿಲೆಂಡ್ ತಂಡವನ್ನು ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಸೋಲಿಸುವ ಮೂಲಕ ಮಹಿಳೆಯರ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಭಾರತ ತಂಡವು ಎರಡನೇ ಕ್ವಾರ್ಟರ್‌ನಲ್ಲಿ ಸಲಿಮಾ ಟೆಟೆ ಅವರ ಗೋಲಿನ ನೆರವಿನಿಂದ ಭಾರತ ಮುನ್ನಡೆ ಸಾಧಿಸಿತ್ತು, ಆದರೆ ನ್ಯೂಜಿಲೆಂಡ್ ಪಂದ್ಯ ಮುಗಿಯಲು ಕೇವಲ 17 ಸೆಕೆಂಡುಗಳಲ್ಲಿ ಪೆನಾಲ್ಟಿ ಸ್ಟ್ರೋಕ್‌ನೊಂದಿಗೆ 1-1 ಗೋಲು ಗಳಿಸಿ ಅದನ್ನು ಶೂಟೌಟ್‌ಗೆ ತೆಗೆದುಕೊಂಡಿತು.

ಶೂಟೌಟ್ ನಲ್ಲಿ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು. 16 ವರ್ಷಗಳ ನಂತರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಫೈನಲ್ ಪ್ರವೇಶಿಸಿದ ಪಿ.ವಿ ಸಿಂಧು

ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್ ತಲುಪುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ ಗೆದ್ದರೆ ಚಿನ್ನದ ಪದಕ, ಒಂದು ವೇಳೆ ಸೋತರೆ ಬೆಳ್ಳಿ ಪದಕ ಸಿಗುವುದು ಖಚಿತವಾಗಿದೆ.

ಸೆಮಿಫೈನಲ್‌ನಲ್ಲಿ ಸಿಂಗಾಪುರದ ಜಿಯಾ ಮಿನ್ ಯೆಯೊ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು. ಸಿಂಗಲ್ಸ್ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಿ.ವಿ ಸಿಂಧುಗೆ ಇದು ಎರಡನೇ ಪದಕವಾಗಿದೆ. 2018 ರ ಗೋಲ್ಡ್ ಕೋಸ್ಟ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಈ ಬಾರಿ ತಮ್ಮ ಮೊದಲ ಸಿಂಗಲ್ಸ್ ಚಿನ್ನದ ಪದಕ ಗೆಲ್ಲುವ ತವಕದಲ್ಲಿದ್ದಾರೆ.

ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಪದಕ

ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಪದಕ

ಪುರುಷರ ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ ಚಿನ್ನದ ಪದಕ ಗೆದ್ದಿದ್ದಾರೆ ಮತ್ತು ಅಬ್ದುಲ್ಲಾ ಅಬೂಬಕರ್ ನರಂಗೊಲಿಂಟೆವಿಡ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಟ್ರಿಪಲ್‌ ಜಂಪ್‌ನಲ್ಲಿ ಭಾರತ ಮೊದಲ ಎರಡು ಪದಕಗಳನ್ನು ಗೆದ್ದಿದೆ.

ಭಾರತದ ಶಟ್ಲರ್ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತವು ಮಹಿಳಾ ಕ್ರಿಕೆಟ್ ಫೈನಲ್‌ನಲ್ಲಿ ಚಿನ್ನಕ್ಕಾಗಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

English summary
India's Amit Panghal and Niti Ghanghas won Gold in boxing at the Commonwealth Games. Indian Ace Shutler PV Sindhu Entered Final, ensure Medal. Gold-Silver For India In Triple Jump, India also won the bronze medal in women's hockey after beating New Zealand in a shootout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X