• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

''ಇಂದಿರಾನಗರದ ಗೂಂಡಾ'' ಎಂದು ಅರಚಿದ ದ್ರಾವಿಡ್ ನೋಡಿ ಫ್ಯಾನ್ಸ್ ಅಚ್ಚರಿ!

|

ಬೆಂಗಳೂರು, ಏಪ್ರಿಲ್ 09: ಬೆಂಗಳೂರಿನ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ತಾಳ್ಮೆ ಕಳೆದು ಕೊಂಡು ''ನಾನು ಇಂದಿರಾನಗರದ ಗೂಂಡಾ'' ಎಂದು ಅರಚುವ ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಸರಳ, ಸಜ್ಜನ, ಸಂಭಾವಿತ ಕ್ರಿಕೆಟರ್ ಆಗಿದ್ದ ರಾಹುಲ್ ದ್ರಾವಿಡ್ ಅವರು ನಿವೃತ್ತಿ ಬಳಿಕವೂ ಕ್ರಿಕೆಟ್ ನಂಟು ಉಳಿಸಿಕೊಂಡಿದ್ದು, ಕೋಚ್ ಆಗಿ ಅನೇಕ ಯುವ ಕ್ರಿಕೆಟರ್‌ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಕ್ರಿಕೆಟರ್ ಆಗಿ ಅಷ್ಟೇ ಅಲ್ಲ ಇಂದಿರಾನಗರದ ನಿವಾಸಿಯಾಗಿ ದ್ರಾವಿಡ್ ಬೆಂಗಳೂರಿನ ಹೆಮ್ಮೆಯ ನಾಗರಿಕ ಕೂಡಾ ಆಗಿದ್ದಾರೆ.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

ಟ್ರಾಫಿಕ್ ನಿಯಮ, ಮತದಾನ ಹೀಗೆ ಜನ ಜಾಗೃತಿ ಅಭಿಯಾನಗಳ ಬಗ್ಗೆ ಆಗಾಗ ತಿಳಿ ಹೇಳುವ ದ್ರಾವಿಡ್ ಅವರು ಕೋಪಗೊಂಡರೆ ಹೇಗಿರಬಹುದು ಎಂಬ ಕಲ್ಪನೆಯೂ ಹಲವರಿಗೆ ಬಂದಿರಲಿಕ್ಕಿಲ್ಲ. ಮೈದಾನದ ಒಳಗೆ-ಹೊರಗೆ ಸಂಭಾವಿತರಾಗಿ ''ಜೆಂಟಲ್ ಮ್ಯಾನ್ಸ್ ಗೇಮ್'' ಎಂದೇ ಕರೆಸಿಕೊಳ್ಳುವ ಕಿಕ್ರೆಟ್ ಆಟದ ರಾಯಭಾರಿಯಾಗಿದ್ದಾರೆ.

ಆದರೆ, ದ್ರಾವಿಡ್ ಅವರನ್ನು ಯಾರೂ ಎಂದೂ ಕಾಣದಂಥ ರೀತಿಯಲ್ಲಿ ಕ್ರೆಡ್ ಕ್ರೆಡಿಟ್ ಕಾರ್ಡ್ ಆಪ್ ಜಾಹೀರಾತು ತೋರಿಸಿದೆ.

ಈ ಜಾಹೀರಾತಿನಲ್ಲಿ ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿದ್ದಾಗ ಪದೇ ಪದೇ ಹಾರ್ನ್ ಮಾಡುವವರ ಕಿರಿಕಿರಿ ತಾಳಲಾರದೆ 'ನಾನು ಇಂದಿರಾನಗರ ರೌಡಿ' ಎಂದೆಲ್ಲಾ ಕಿರುಚಾಡುತ್ತಾ, ಬ್ಯಾಟಿನಿಂದ ಕಾರಿನ ಗಾಜುಗಳನ್ನು ಒಡೆದು ಪುಡಿ-ಪುಡಿ ಮಾಡುವ ದ್ರಾವಿಡ್ ನೋಡಿ ಫ್ಯಾನ್ಸ್ ಹುಬ್ಬೇರಿಸಿ, ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೆ, ಕೊಹ್ಲಿ, ನಟರಾಜನ್, ದೊಡ್ಡಗಣೇಶ್ ಸೇರಿದಂತೆ ಹಲವು ಹಾಲಿ, ಮಾಜಿ ಕ್ರಿಕೆಟರ್ಸ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪ್ರತಿಕ್ರಿಯೆಗಳು ಇನ್ನೂ ಹರಿದು ಬರುತ್ತಿವೆ. ನಟ ಜಿಮ್ ಸೆರ್ಬ್ ಅವರು ಕ್ರೆಡ್ ಆಪ್ ಬಗ್ಗೆ ಮಾತನಾಡುತ್ತಾ, ಕ್ರೆಡ್ ಆಪ್ ಬಳಸಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ ಕ್ರೆಡ್ ಕಾಯಿನ್ ಸಿಗಲಿದೆ ಇದರಿಂದ ಕ್ಯಾಶ್ ಬ್ಯಾಕ್ ಮುಂತಾದ ಕೊಡುಗೆ ಸಿಗಲಿದೆ ಎನ್ನುತ್ತಾ, ಇದು ನಂಬಲು ಸಾಧ್ಯವಿಲ್ಲದಂಥ ಸುದ್ದಿ ಇರಬಹುದು, ದ್ರಾವಿಡ್ ಅವರಿಗೆ ಕೋಪದ ಸಮಸ್ಯೆ ಇದೆ ಎಂದು ಹೇಳಿದರೆ ಹೇಗೋ ಹಾಗೆ ಎನ್ನುತ್ತಾರೆ. ನಂತರ ದ್ರಾವಿಡ್ ಅವರನ್ನು ವಿಭಿನ್ನ ಅವತಾರದಲ್ಲಿ ತೋರಿಸಲಾಗಿದೆ..

''90ರ ದಶಕ ಹೀರೋಗಳನ್ನು ಮತ್ತೆ ಜಾಹೀರಾತಿನ ಮೂಲಕ ತರುವ ಪ್ರಯತ್ನ ಇದಾಗಿದೆ. ತನ್ಮಯ್ ಭಟ್, ದೇವಯ್ಯ ಬೋಪಣ್ಣ, ಪುನೀತ್ ಛಡ್ಡಾ, ನೂಪುರ್ ಪೈ ಹಾಗೂ ವಿಶಾಲ್ ಅವರಿರುವ ಕ್ರಿಯೇಟಿವ್ ತಂಡದ ಸ್ಕ್ರಿಪ್ಟ್ ದ್ರಾವಿಡ್ ಅವರಿಗೂ ಮೆಚ್ಚುಗೆಯಾಯ್ತು, ಇಂದು ಉತ್ತಮ ಪ್ರತಿಕ್ರಿಯೆ ಕಾಣುತ್ತಿದ್ದೇವೆ'' ಎಂದು ಕ್ರೆಡ್ ಆಡ್ ರೂಪಿಸಿದಿದ ಅರ್ಲಿ ಮ್ಯಾನ್ ಸಂಸ್ಥೆ ನಿರ್ದೇಶಕ ಅಯ್ಯಪ್ಪ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ 2021: ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ ಐಪಿಎಲ್ 2021: ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ

ಈ ಬಾರಿ ಐಪಿಎಲ್ ಸಂದರ್ಭದಲ್ಲಿ ಇನ್ನಷ್ಟು ಇಂಥ ಜಾಹೀರಾತುಗಳನ್ನು ಕಾಣಬಹುದು ಎಂಬ ಸುಳಿವು ನೀಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಿದ್ದ ಜಾಹೀರಾತಿಗಿಂತ ಇದು ಉತ್ತಮವಾಗಿದೆ, ಹೆಚ್ಚು ನೈಜವಾಗಿದೆ, ದ್ರಾವಿಡ್ ಅಭಿನಯ ಸೂಪರ್ ಎಂಬೆಲ್ಲ ಕಾಮೆಂಟ್ ಬರುತ್ತಿವೆ.

   ರಾಹುಲ್ ದ್ರಾವಿಡ್ ಕೋಪ ನೋಡಿ ವಿರಾಟ್ ಕೊಹ್ಲಿಗೆ ಶಾಕ್ | Oneindia Kannada

   English summary
   Many Cricketers reacted on Angry Rahul Dravid shouting on Bengaluru Traffic in CRED new AD for Indian Premier League.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X