ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Team India T20 World Cup Jersey : ಟೀಂ ಇಂಡಿಯಾ ಹೊಸ ಜರ್ಸಿ ಟೀಸರ್ ಹೇಗಿದೆ?

|
Google Oneindia Kannada News

ಮುಂಬೈ, ಸೆ.14: ಟಿ20 ವಿಶ್ವಕಪ್ 2022 ಆಡಲಿರುವ ಟೀಂ ಇಂಡಿಯಾ ಪ್ರಕಟಗೊಂಡಿದೆ. ತಂಡದಲ್ಲಿ ಹೆಚ್ಚಿನ ಅಚ್ಚರಿಯ ಆಯ್ಕೆ ಕಂಡು ಬಂದಿಲ್ಲ. ಬಹುತೇಕ ಇದೇ ತಂಡ ಆಸ್ಟ್ರೇಲಿಯಾ ಸರಣಿಯಲ್ಲೂ ಆಡುತ್ತಿದೆ. ಈ ನಡುವೆ ಮಂಗಳವಾರದಂದು ಟೀಮ್ ಇಂಡಿಯಾದ ಅಧಿಕೃತ ಕಿಟ್ ಪಾಲುದಾರ MPL ಸ್ಪೋರ್ಟ್ಸ್ ಕಿರು ವಿಡಿಯೊವನ್ನು ಹಂಚಿಕೊಂಡಿದೆ. ರೋಹಿತ್, ಹಾರ್ದಿಕ್ ಮತ್ತು ಶ್ರೇಯಸ್ ಅಯ್ಯರ್ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಹೊಸ ಜರ್ಸಿ ಬಗ್ಗೆ ಸುಳಿವು ನೀಡಿದ್ದಾರೆ.

"ನೀವು ಹುಡುಗರೇ ನಮ್ಮನ್ನು ಹುರಿದುಂಬಿಸದೆ ಆಟವು ನಿಜವಾಗಿಯೂ ಒಂದೇ ಆಗಿರುವುದಿಲ್ಲ! ನಿಮ್ಮ ಅಭಿಮಾನಿಗಳ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಆಟಕ್ಕಾಗಿ BCCI ಜೊತೆಗೆ ನಿಮ್ಮ ಅಭಿಮಾನವನ್ನು ತೋರಿಸಿ," ಎಂದು MPL ನ ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಲಾಗಿದೆ, ಇದರಲ್ಲಿ ಭಾರತೀಯ ಆಟಗಾರರು ಟ್ರ್ಯಾಕ್‌ಸೂಟ್ ಅಪ್ಪರ್‌ಗಳನ್ನು ಧರಿಸಿರುವುದು ಕಂಡುಬಂದಿದೆ. ಭಾರತದ ಮುಂದಿನ ಜೆರ್ಸಿ ಬಗ್ಗೆ ಸುಳಿವು ನೀಡಿದೆ.

ಮೊಘಲರ ಕಾಲದ ಚಿತ್ರ ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ ಶಶಿ ತರೂರ್ಮೊಘಲರ ಕಾಲದ ಚಿತ್ರ ಹಂಚಿಕೊಂಡು ಪಾಕ್ ತಂಡವನ್ನು ಕಿಚಾಯಿಸಿದ ಶಶಿ ತರೂರ್

ಹೊಸ ಕಿಟ್‌ನ ಬಣ್ಣ ಅಥವಾ ವಿನ್ಯಾಸದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ ಸಹ, ವಿಡಿಯೊದಲ್ಲಿ ರೋಹಿತ್ ಮತ್ತು ಸಹ ಆಟಗಾರರು ಧರಿಸಿರುವ ಟ್ರ್ಯಾಕ್‌ಸೂಟ್ ಮೇಲ್ಭಾಗದ ಕೆಳಗೆ ಆಕಾಶ ನೀಲಿ ಬಣ್ಣದ ಸುಳಿವನ್ನು ಗುರುತಿಸಿದ ನಂತರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Team India new jersey for T20 World Cup Teaser is here


ಮತ್ತೆ ತಿಳಿ ನೀಲಿ ಬಣ್ಣದ ಜರ್ಸಿಯೇ ಇರಲಿ, ಭಾರತ ತಂಡಕ್ಕೆ ಇದುವೇ ಲಕ್ಕಿ ಎಂದಿದ್ದಾರೆ. ಸದ್ಯ ಕಡು ಬಣ್ಣದ ನೀಲಿ ಜರ್ಸಿಯನ್ನು ಟೀಂ ಇಂಡಿಯಾ ಧರಿಸುತ್ತಿದ್ದು, ಮತ್ತೊಮ್ಮೆ ತಿಳಿ ನೀಲಿ ಬಣ್ಣದ ಜರ್ಸಿ ಧರಿಸುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಎದುರಾಳಿಗಳು ಫಿಕ್ಸ್ ಆಗಿದ್ದಾರೆ. ಅಕ್ಟೋಬರ್ 17 ಮತ್ತು ಅಕ್ಟೋಬರ್ 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಆಡುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 10ರಿಂದ 13ರವರೆಗೂ ನಡೆಯಲಿದೆ. ಸೂಪರ್-12ರ ಹಂತದಲ್ಲಿ ನೇರವಾಗಿ ಕ್ವಾಲಿಫೈ ಆಗಿರುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 17ರಿಂದ 19ರವರೆಗೆ ನಡೆಯಲಿದೆ.

India squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟIndia squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟ

ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಆಡುತ್ತಿವೆ. ಟೂರ್ನಿ ಶುರುವಾಗುವ ಮುನ್ನ ಈ 16 ತಂಡಗಳಿಗೆ ವಾರ್ಮಪ್ ಪಂದ್ಯಗಳನ್ನು ಐಸಿಸಿ ನಿಗದಿ ಮಾಡಿದೆ. ಅಭ್ಯಾಸ ಪಂದ್ಯಗಳು ಅಕ್ಟೋಬರ್ 10ರಿಂದ 19ವರೆಗೂ ನಡೆಯಲಿದೆ.

ವಿಶ್ವದೆಲ್ಲೆಡೆಯಿಂದ ಅರ್ಹತೆ ಪಡೆದ ನಾಲ್ಕು ತಂಡಗಳು ಹಾಗೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದ ನಿರ್ಗಮಿಸಿದ ನಾಲ್ಕು ತಂಡಗಳು ಹೀಗೆ ಎಂಟು ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಲಿವೆ. ಈ ವೇಳೆ ಎರಡು ಗುಂಪುಗಳಾಗಿ ಮಾಡಲಾಗಿದೆ.

ಎ ಗುಂಪಿನಲ್ಲಿ ಶ್ರೀಲಂಕಾ, ನೆದರ್‌ಲೆಂಡ್ಸ್, ನಮೀಬಿಯಾ ಮತ್ತು ಯುಎಇ ತಂಡಗಳಿವೆ. ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಈ ಎರಡು ಗುಂಪುಗಳಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೇರುತ್ತವೆ.

ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ: ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷ್ ದೀಪ್ ಸಿಂಗ್.

English summary
Cricket: Team India are all set to don a new jersey for their upcoming T20 World Cup 2022, Here is the teaser
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X