ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಾಕಿಸ್ತಾನ ಸೋಲಿಸಿ, ಏಷ್ಯಾಕಪ್ ಎತ್ತಿ ಹಿಡಿದ ಶ್ರೀಲಂಕಾ

|
Google Oneindia Kannada News

ದುಬೈ, ಸೆ. 11: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2022ರ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಶ್ರೀಲಂಕಾ ಗೆಲುವಿನ ನಗೆ ಬೀರಿದೆ. ಏಷ್ಯಾಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 23 ರನ್ ಗಳಿಂದ ಶ್ರೀಲಂಕಾ ಸೋಲಿಸಿದೆ.

171ರನ್ ಗುರಿ ಬೆನ್ನತ್ತಿದ್ದ ಬಾಬರ್ ಅಜಮ್ ಪಡೆ 147 ಸ್ಕೋರಿಗೆ ಆಲೌಟ್ ಆಗಿ ಸೋಲು ಕಂಡಿದೆ. ಈ ಮೂಲಕ 23 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ಮತ್ತೊಮ್ಮೆ ಏಷ್ಯಾಕಪ್ ಗೆದ್ದುಕೊಂಡಿದೆ.

ಇಲ್ಲಿ ತನಕ ಭಾರತ 7 ಬಾರಿ ಏಷ್ಯಾಕಪ್ ಗೆದ್ದುಕೊಂಡಿದೆ. 1984, 1988, 1990-91, 1995, 2010, 2016 & 2018. ಶ್ರೀಲಂಕಾ 6 ಬಾರಿ ಕಪ್ ಎತ್ತಿ ಹಿಡಿದಿದೆ. 1986, 1997, 2004, 2008, & 2014,2022.ಪಾಕಿಸ್ತಾನ 2000 ಹಾಗೂ 2012ರಲ್ಲಿ ಕಪ್ ಗೆದ್ದಿದೆ.

ಈ ಮೊದಲು 50 ಓವರ್ ಗಳ ಪಂದ್ಯಾವಳಿ ಮಾದರಿಯಲ್ಲಿ ಏಷ್ಯಾಕಪ್ ಆಡಲಾಗುತ್ತಿತ್ತು. ಟಿ20ಐ ಮಾದರಿ ಆರಂಭವಾದ ಬಳಿಕ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದ್ದು, ಈ ಬಾರಿ ಶ್ರೀಲಂಕಾದಲ್ಲಿ ಏಷ್ಯಾಕಪ್ ಆಯೋಜನೆಗೊಳ್ಳಬೇಕಿತ್ತು. ಆದರೆ, ರಾಜಕೀಯ ಅಸ್ಥಿರತೆ, ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಯುಎಇಗೆ ವರ್ಗಾಯಿಸಲಾಗಿತ್ತು.

Sri lanka beat pakistan to lift Asia cup 2022

2022ರ ಏಷ್ಯಾಕಪ್ ಅಂತಿಮ ಹಣಾಹಣಿ ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ 20 ಓವರ್ ಗಳಲ್ಲಿ 170/6
ಪಾಕಿಸ್ತಾನ 20 ಓವರ್ ಗಳಲ್ಲಿ 147

ಫಲಿತಾಂಶ: ಶ್ರೀಲಂಕಾಕ್ಕೆ 23ರನ್ ಗಳಿಂದ ಜಯ.

ರನ್ ಚೇಸ್: ನಾಯಕ ಬಾಬರ್ ಅಜಮ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡು 5 ರನ್ ಗಳಿಸಿ ಪ್ರಮೋದ್ ಎಸೆತಕ್ಕೆ ಬಲಿಯಾದರು. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 49 ಎಸೆತಗಳಲ್ಲಿ 59 ಗಳಿಸಿ ಇನ್ನೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಆಟಕ್ಕಿಂತ ಹಾಡಿಗೆ ಭಯಪಟ್ಟ ಇಂಗ್ಲೆಂಡ್ ಕ್ರಿಕೆಟಿಗರು; ಓಲೀ ರಾಬಿನ್ಸನ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ ಆಟಕ್ಕಿಂತ ಹಾಡಿಗೆ ಭಯಪಟ್ಟ ಇಂಗ್ಲೆಂಡ್ ಕ್ರಿಕೆಟಿಗರು; ಓಲೀ ರಾಬಿನ್ಸನ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ


ಮಧ್ಯಮ ಕ್ರಮಾಂಕದಲ್ಲಿ ಫಖರ್ ಜಮಾನ್ ಶೂನ್ಯ ಸುತ್ತಿದರೆ, ಮೊಹಮ್ಮದ್ ನವಾಜ್ 6, ಖುಶ್ದಿಲ್ ಶಾ 2 ರನ್ ಗಳಿಸಿದರು, ಇಫ್ತಿಕಾರ್ ಅಹ್ಮದ್ 32ರನ್ ಗಳಿಸಿ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಹುರುಪು ತಂದರು. ಆದರೆ, ಈ ಜೋಡಿಯನ್ನು ಮುರಿದ ಲಂಕನ್ನರು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಶ್ರೀಲಂಕಾ ಪರ ಪ್ರಮೋದ್ ಮದುಶಾನ್ 34ಕ್ಕೆ 4, ವನಿಂದು ಹಸರಂಗಾ 27ಕ್ಕೆ 3 ವಿಕೆಟ್ ಕಿತ್ತರೆ, ಕರುಣಾರತ್ನೆ 33ಕ್ಕೆ 2 ವಿಕೆಟ್ ಕಬಳಿಸಿದರು.

ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಜೊತೆ ಕ್ರಿಕೆಟರ್ ಅರ್ಜುನ್ ಹೊಯ್ಸಳ ನಿಶ್ಚಿತಾರ್ಥಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಜೊತೆ ಕ್ರಿಕೆಟರ್ ಅರ್ಜುನ್ ಹೊಯ್ಸಳ ನಿಶ್ಚಿತಾರ್ಥ

ಇದಕ್ಕೂ ಮುನ್ನ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿದರೂ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿತು.

Sri lanka beat pakistan to lift Asia cup 2022

ಭಾನುಕ ರಾಜಪಕ್ಸೆ ಹಾಗೂ ವನಿಂದು ಹಸರಂಗಾ ಜೊತೆ ಉತ್ತಮ ಮೊತ್ತ ಕಲೆ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ, 36 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವನಿಂದು ಹಸರಂಗಾ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ

ಭಾನುಕ ರಾಜಪಕ್ಸೆ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು.

ಹ್ಯಾರಿಸ್ ರೌಫ್ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ನಸೀಮ್ ಶಾ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು. ಶಾದಾಬ್ ಖಾನ್ 4 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಇಫ್ತಿಕರ್ ಅಹ್ಮದ್ ಒಂದು ವಿಕೆಟ್ ಪಡೆದರು.

English summary
Sri Lanka beat Pakistan by 23 runs to lift Asia cup 2022 on September 11, 2022 at Dubai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X