ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

131 ಎಸೆತಗಳಲ್ಲಿ 174 ರನ್: ಆಂಗ್ಲರ ನೆಲದಲ್ಲಿ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಬ್ಬರ

|
Google Oneindia Kannada News

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಏಕದಿನ ಕಪ್‌ ಪಂದ್ಯಾವಳಿಯಲ್ಲಿ ಚೇತೇಶ್ವರ ಪೂಜಾರ ಅಬ್ಬರಿಸುತ್ತಿದ್ದಾರೆ. ಟೆಸ್ಟ್ ಪ್ಲೇಯರ್ ಎಂದೇ ಹಣೆಪಟ್ಟಿ ಪಡೆದುಕೊಂಡಿರುವ ಚೇತೇಶ್ವರ ಪೂಜಾರ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ತಾನು ಕೂಡ ವೇಗವಾಗಿ ಬ್ಯಾಟ್ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ. ಸಸೆಕ್ಸ್ ತಂಡದ ಪರವಾಗಿ ಚೇತೇಶ್ವರ ಪೂಜಾರ ಆಡುತ್ತಿದ್ದು, ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ವಾರ್ವಿಕ್‌ಷೈರ್ ವಿರುದ್ಧ ನಡೆದ ಪಂದ್ಯದಲ್ಲಿ 79 ಎಸೆತಗಳಲ್ಲಿ 107 ರನ್ ಗಳಿಸಿ ಮಿಂಚಿದ್ದ ಚೇತೇಶ್ವರ ಪೂಜಾರ, ಭಾನುವಾರ ಸರ್‍ರೆ ವಿರುದ್ಧದ ಪಂದ್ಯದಲ್ಲಿ ತಮ್ಮ ಫಾರ್ಮ್ ಮುಂದುವರೆಸಿದರು. 131 ಎಸೆತಗಳಲ್ಲಿ 174 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಪೂಜಾರ ಬ್ಯಾಟಿಂಗ್ ನೆರವಿನಿಂದ ಸಸೆಕ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಐತಿಹಾಸಿಕ ಕ್ರಿಕೆಟ್ ಪಂದ್ಯಸೌರವ್ ಗಂಗೂಲಿ ನಾಯಕತ್ವದಲ್ಲಿ ವರ್ಲ್ಡ್ ಜೈಂಟ್ಸ್ ತಂಡದ ವಿರುದ್ಧ ಐತಿಹಾಸಿಕ ಕ್ರಿಕೆಟ್ ಪಂದ್ಯ

ಭಾನುವಾರ ಸರ್‍ರೆ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಸಸೆಕ್ಸ್ ತಂಡ 3.2 ಓವರ್ ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್‌ಗೆ ಬಂದ ಚೇತೇಶ್ವರ ಪೂಜಾರ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

 3ನೇ ವಿಕೆಟ್‌ಗೆ 205 ರನ್‌ಗಳ ಜೊತೆಯಾಟ

3ನೇ ವಿಕೆಟ್‌ಗೆ 205 ರನ್‌ಗಳ ಜೊತೆಯಾಟ

ಆರಂಭಿಕ ಆಘಾತ ಅನುಭವಿಸಿದ ಸಸೆಕ್ಸ್ ತಂಡಕ್ಕೆ ಆಸರೆಯಾಗಿ ನಿಂತ ಚೇತೇಶ್ವರ ಪೂಜಾರ ಮತ್ತೊಬ್ಬ ಬ್ಯಾಟರ್ ಟಾಮ್ ಕ್ಲಾರ್ಕ್ ಅವರೊಂದಿಗೆ ಮೂರನೇ ವಿಕೆಟ್‌ಗೆ 205 ರನ್‌ಗಳ ಜೊತೆಯಾಟವಾಡಿದರು.

ಟಾಮ್ ಕ್ಲಾರ್ಕ್ 104 ರನ್ ಗಳಿಸಿದರೆ, ಪೂಜಾರ ಮತ್ತೊಂದು ಬದಿಯಲ್ಲಿ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿದರು. 103 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ 2ನೇ ಶತಕ ದಾಖಲಿಸಿದರು. ನಂತರ ಮುಂದಿನ 28 ಎಸೆತಗಳಲ್ಲಿ 74 ರನ್‌ ಚಚ್ಚುವ ಮೂಲಕ ಸಸೆಕ್ಸ್ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅಂತಿಮವಾಗಿ 20 ಬೌಂಡರಿ ಮತ್ತು 5 ಸಿಕ್ಸರ್ ಮೂಲಕ 131 ಎಸೆತಗಳಲ್ಲಿ 174 ರನ್ ಗಳಿಸಿ ಔಟಾದರು.

 ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ? ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಯಾಕಿಲ್ಲ ಗೊತ್ತಾ?

 ಪೂಜಾರ ಆಟ ಸಸೆಕ್ಸ್ ಬೃಹತ್ ಮೊತ್ತ

ಪೂಜಾರ ಆಟ ಸಸೆಕ್ಸ್ ಬೃಹತ್ ಮೊತ್ತ

ಚೇತೇಶ್ವರ ಪೂಜಾರ ಅವರ ಭರ್ಜರಿ ಆಟದ ನೆರವಿನಿಂದ ಸಸೆಕ್ಸ್ ನಿಗದಿತ 50 ಓವರ್‌ಗಳಲ್ಲಿ 378/6 ಗಳಿಸಿತು. ಸರ್‍ರೆ ತಂಡದ ಪರವಾಗಿ ಕಾನರ್ ಮೆಕೆರ್ ಎರಡು ವಿಕೆಟ್ ಪಡೆದರೆ, ಟಾಮ್ ಲಾವ್ಸ್, ಮ್ಯಾಟ್ ಡನ್, ಅಮರ್ ವಿರ್ಡಿ ಮತ್ತು ಯೂಸೆಫ್ ಮಜಿದ್ ತಲಾ ಒಂದು ವಿಕೆಟ್ ಪಡೆದರು.

ನಂತರ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸರ್‍ರೆ ತಂಡ ಸಸೆಕ್ಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ಅರಿಸ್ಟೈಡ್ಸ್ ಕರ್ವೆಲಾಸ್ (35ಕ್ಕೆ 4) ಮತ್ತು ಡೆಲ್ರೆ ರಾಲಿನ್ಸ್ (25ಕ್ಕೆ 3) ಮಾರಕ ಬೌಲಿಂಗ್‌ನಿಂದಾಗಿ ಸರ್‍ರೆ 162 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಮೂಲಕ ಸಸೆಕ್ಸ್ 216 ರನ್‌ಗಳ ಅಂತರಿಂದ ಭರ್ಜರಿ ಜಯ ಸಾಧಿಸಿದರು.

 ಟೂರ್ನಿಯಲ್ಲಿ ಪೂಜಾರ ಭರ್ಜರಿ ಪ್ರದರ್ಶನ

ಟೂರ್ನಿಯಲ್ಲಿ ಪೂಜಾರ ಭರ್ಜರಿ ಪ್ರದರ್ಶನ

ಸಸೆಕ್ಸ್ ತಂಡದ ಪರವಾಗಿ ಈ ಬಾರಿಯ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದುವರೆಗೆ ಟೂರ್ನಿಯಲ್ಲಿ ಐದು ಇನ್ನಿಂಗ್ಸ್ ಆಡಿರುವ ಪೂಜಾರ 91.75 ಸರಾಸರಿಯಲ್ಲಿ 367 ರನ್ ಗಳಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ನಲ್ಲೂ ಅವರು ತಮ್ಮ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಎಂಟು ಪಂದ್ಯಗಳಲ್ಲಿ, ಪೂಜಾರ 13 ಇನ್ನಿಂಗ್ಸ್‌ಗಳಲ್ಲಿ 109.40 ಸರಾಸರಿಯಲ್ಲಿ 1,094 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಕೂಡ ಸೇರಿದೆ.

 ಹಿಂದಿನ ಪಂದ್ಯದಲ್ಲೂ ಶತಕ ಬಾರಿಸಿದ್ದ ಪೂಜಾರ

ಹಿಂದಿನ ಪಂದ್ಯದಲ್ಲೂ ಶತಕ ಬಾರಿಸಿದ್ದ ಪೂಜಾರ

ಕಳೆದ ವಾರ್ ವಿಕ್‌ಶೈರ್ ತಂಡದ ವಿರುದ್ಧ ಪಂದ್ಯದಲ್ಲೂ ಚೇತೇಶ್ವರ ಪೂಜಾರ 79 ಎಸೆತಗಳಲ್ಲಿ 107 ರನ್ ಗಳಿಸಿ ಮಿಂಚಿದ್ದರು. ಒಂದೇ ಓವರ್ ನಲ್ಲಿ 22 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಎರಡು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಪೂಜಾರ ಭರ್ಜರಿ ಬ್ಯಾಟಿಂಗ್ ನಡುವೆಯೂ ಸಸೆಕ್ಸ್ 4 ರನ್‌ಗಳ ಅಂತರದಲ್ಲಿ ರೋಚಕವಾಗಿ ಸೋಲನುಭವಿಸಿತ್ತು.

ಈ ಗೆಲುವಿನೊಂದಿಗೆ ರಾಯಲ್ ಲಂಡನ್ ಏಕದಿನ ಕಪ್‌ ಟೂರ್ನಿಯಲ್ಲಿ ಸಸೆಕ್ಸ್ ಗ್ರೂಪ್ ಎ ನಲ್ಲಿ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Recommended Video

India-Pak Cricket Craze ಅಂದ್ಮೇಲೆ ಅದ್ರ ಹವಾ ಹಿಂಗೇ ಇರುತ್ತೆ | *Cricket | OneIndia Kannada

English summary
Indian batter Cheteshwar Pujara smashed the highest score by a Sussex player in the List A cricket format on Sunday. Pujara unveiled a rare side of him and smashed 174 runs off just 131 deliveries, consisting of 20 fours and five sixes. In five innings so far, he has scored 367 runs at an average of 91.75.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X