• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಲ್ 2021: ಚೆನ್ನೈ ಪಂದ್ಯದ ಮೇಲೆ ಬೆಟ್ಟಿಂಗ್, ಓರ್ವ ಬಂಧನ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಐಪಿಎಲ್ 2021 ಆರಂಭದೊಂದಿಗೆ ಕದ್ದುಮುಚ್ಚಿ ಕ್ರಿಕೆಟ್‌ ಬೆಟ್ಟಿಂಗ್ ದಂಧೆ ನಡೆಸುವುದು ಹೆಚ್ಚಾಗುತ್ತಿದೆ. ಬೆಟ್ಟಿಂಗ್ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ನಿರಂತರ ಮುಂದುವರೆದಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ, ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿಯ ಬಂಧಿಸಿದ್ದಾರೆ. ಬಂಧಿತ ಆರೊಪಿಯನ್ನು ದೀಪಕ್ ಎಂದು ಗುರುತಿಸಲಾಗಿದೆ. ಐಪಿಎಲ್ 14ರ ಮ್ಯಾಚ್ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಿದ್ದ.

ಆನ್ಲೈನ್ ಗೇಮ್, ಬೆಟ್ಟಿಂಗ್ ನಿಷೇಧ ವಿಧೇಯಕ ಆಂಧ್ರ ಅಸೆಂಬ್ಲಿ ಅಸ್ತು!ಆನ್ಲೈನ್ ಗೇಮ್, ಬೆಟ್ಟಿಂಗ್ ನಿಷೇಧ ವಿಧೇಯಕ ಆಂಧ್ರ ಅಸೆಂಬ್ಲಿ ಅಸ್ತು!

ಲೋಟಸ್ ಬುಕ್ 9 ಎಂಬ ಮೊಬೈಲ್ ಅಪ್ಲಿಕೇಷನ್ ಬಳಸಿಕೊಂಡು ಬೆಟ್ಟಿಂಗ್ ನಡೆಸುತ್ತಿದ್ದ ಆರೋಪವಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ದಾಳಿ ವೇಳೆ ಆರೋಪಿಯನ್ನು ಬಂಧಿಸಿ, ಆತನ ಬಳಿ ಇದ್ದ 2 ಲಕ್ಷ ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಎಲ್ಲಾ ರೀತಿಯ ಬೆಟ್ಟಿಂಗ್ ಮೇಲೆ ನಿಷೇಧವಿದೆ. ಆನ್‌ಲೈನ್ ಗೇಮಿಂಗ್ ಅಪ್ ಮೂಲಕ ದುಡ್ಡು ಕಟ್ಟಿ ಆಡುವ ಆಟಕ್ಕೆ ನಿರ್ಬಂಧವಿದ್ದರೂ ಸಂಪೂರ್ಣ ನಿಷೇಧ ಸಾಧ್ಯವಾಗಿಲ್ಲ. ಈ ಬಗ್ಗೆ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಕೂಡಾ ಕ್ರಮ ಜರುಗಿಸಿದ್ದು, ಬೆಟ್ಟಿಂಗ್ ಮೇಲೆ ನಿಷೇಧ ಹೇರಿವೆ.

   #Covid19update : ಒಂದೇ ದಿನ ದೇಶದಲ್ಲಿ 2,73,810 ಜನರಿಗೆ ಕೊರೊನಾ ಸೋಂಕು! | Oneindia Kannada

   ಆನ್ ಲೈನ್ ಗೇಮಿಂಗ್ ಹಾವಳಿಯಿಂದ ಅನೇಕ ಸಾಮಾಜಿಕ ಪಿಡುಗು ಆರಂಭವಾಗಿದ್ದು, ಹಣ, ಪ್ರಾಣ ಎಲ್ಲವೂ ಹೋಗಿದೆ. ಬೆಟ್ಟಿಂಗ್ ಯಾವುದೇ ಮಾದರಿಯಾದರೂ ಅದರಿಂದ ನಷ್ಟ ಹೊಂದುವವರೇ ಅಧಿಕ, ಯುವ ಜನಾಂಗ ಇದರಿಂದ ಭಾರಿ ನಷ್ಟ ಅನುಭವಿಸಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೂಗಿದ್ದರೂ ಕರ್ನಾಟಕ ಸರ್ಕಾರ ಯಾವುದೇ ಕಠಿಣ ನಿರ್ಧಾರ ಕೈಗೊಂಡಿಲ್ಲ, ಇನ್ನು ಗೇಮಿಂಗ್ ಆಪ್ ಮೇಲೆ ನಿಯಂತ್ರಣ, ನಿಷೇಧ ಎಲ್ಲವೂ ಕೇಂದ್ರ ಗೃಹ ಇಲಾಖೆ ನಿರ್ಧರಿಸಬೇಕಾಗುತ್ತದೆ.

   English summary
   Bengaluru: CCB arrest a person for betting on IPL 14 match between Chennai Super kings and Punjab Kings.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X