ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಒಲಿಂಪಿಕ್ಸ್ ಸುದ್ದಿ ವ್ಯಾಪಕ ಪ್ರಸಾರ

|
Google Oneindia Kannada News

ಬೆಂಗಳೂರು, ಜುಲೈ 23: ಜಪಾನಿನ ರಾಜಧಾನಿಯಲ್ಲಿ ಹೊಸದಾಗಿ ನಿರ್ಮಿಸಿರುವ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಸಮಾರಂಭ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯಾವುದೇ ಅದ್ಧೂರಿ ಇಲ್ಲದೆ ಸರಳ ರೀತಿಯಲ್ಲಿ ನಡೆಯಲಿದೆ.

ಜಪಾನಿನ ವರ್ಣಮಾಲೆಯ ಪ್ರಕಾರ ಭಾರತ ಪಥ ಸಂಚಲನದಲ್ಲಿ 21ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದೆ. ಈ ಬಾರಿ ಒಲಿಂಪಿಕ್ಸ್ ಗೆ ಭಾರತ ಅತಿದೊಡ್ಡ ತಂಡವನ್ನು ಕಳುಹಿಸಿದೆ. 22 ರಾಜ್ಯಗಳ 127 ಅಥ್ಲೀಟ್ ಗಳನ್ನೊಳಗೊಂಡ 228 ಮಂದಿಯ ಬಲಿಷ್ಠ ತಂಡ ಪಾಲ್ಗೊಳ್ಳುತ್ತಿದೆ.

Catch Tokyo Olympics coverage from Akashavani and Doordarshan

18 ಕ್ರೀಡಾ ವಿಭಾಗಗಳಲ್ಲಿ ಅಂದರೆ ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಈಕ್ವೆಸ್ಟ್ರಿಯನ್, ಫೆನ್ಸಿಂಗ್, ರೋಯಿಂಗ್, ಶೂಟಿಂಗ್, ಸೈಲಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಯ್ಟ್ ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಸೆಣಸುವರು. ಭಾರತೀಯ ನಿಯೋಗದಲ್ಲಿ 68 ಪುರುಷ ಹಾಗೂ 52 ಮಹಿಳಾ ಅಥ್ಲಿಟ್ ಗಳು, 58 ಅಧಿಕಾರಿಗಳು, 43 ಪರ್ಯಾಯ ಅಥ್ಲೀಟ್ ಗಳು ಮತ್ತು 8 ತುರ್ತು ಸೇವಾ ಸಿಬ್ಬಂದಿ, ಕೋಚ್ ಗಳು, ತಂಡದ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳು 85 ಸಂಭವನೀಯ ಪದಕಗಳಿಗಾಗಿ ಸೆಣಸುವರು.

Catch Tokyo Olympics coverage from Akashavani and Doordarshan

ವಿಶ್ವದ ಅತಿ ದೊಡ್ಡ ಕ್ರೀಡಾ ಹಬ್ಬ ಟೋಕಿಯೋದಲ್ಲಿ ಆರಂಭವಾಗಲಿದ್ದು, ಪ್ರಸಾರಭಾರತಿ ತನ್ನ ಅವಳಿ ಜಾಲ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಹಾಗೂ ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ ಹೆಚ್ಚಿನ ಮಾಹಿತಿ ಮತ್ತು ಸುದ್ದಿಯನ್ನು ಪ್ರಸಾರ ಮಾಡಲಿದೆ. ಕ್ರೀಡಾಕೂಟ ಆರಂಭಕ್ಕೂ ಮುನ್ನದಿಂದ ಕ್ರೀಡಾಕೂಟ ಮುಗಿದ ನಂತರದವರೆಗೆ ಪ್ರಸಾರಭಾರತಿಯ ಟಿವಿ, ರೇಡಿಯೋ ಮತ್ತು ಡಿಜಿಟಲ್ ವೇದಿಕೆಗಳು ಸೇರಿ ಎಲ್ಲ ರೂಪದಲ್ಲೂ ದೇಶಾದ್ಯಂತ ಪ್ರಸಾರ ಮಾಡಲಿದೆ.

Catch Tokyo Olympics coverage from Akashavani and Doordarshan

'ಚಿಯರ್ ಫಾರ್ ಇಂಡಿಯಾ' ಅಭಿಯಾನಕ್ಕೆ ನೆರವಾಗಲು ಡಿಡಿ ಸ್ಪೋರ್ಟ್ಸ್ ಟೋಕಿಯೋ ಒಲಿಂಪಿಕ್ಸ್ 2020ಯ ಕುರಿತು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಕ್ರೀಡಾಕೂಟಗಳೊಂದಿಗೆ ಚರ್ಚೆ ಆಧಾರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಈ ವಿಶೇಷ ಕಾರ್ಯಕ್ರಮ ಜುಲೈ 22 ಹಾಗೂ 23ರಂದು ಡಿಡಿ ಸ್ಪೋರ್ಟ್ಸ್ ನಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನೇರ ಪ್ರಸಾರವಾಗಿದೆ. ಪ್ರತಿ ದಿನ ವಿಭಿನ್ನ ವಿಷಯಗಳನ್ನು ಹೊಂದಿರುವ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 22ರಂದು ಎರಡು ಅವಧಿಯಲ್ಲಿ ರಾತ್ರಿ 7 ಗಂಟೆಯಿಂದ 9 ಗಂಟೆವರೆಗೆ ಮತ್ತು ಜು.23ರಂದು ಮರುದಿನ ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಮರುಪ್ರಸಾರವಾಗಲಿದೆ.

English summary
The world's greatest sports extravaganza which starts tomorrow at Tokyo is being given a mega-coverage by Prasar Bharati, through its twin network of Doordarshan and All India Radio, and the dedicated sports channel DD Sports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X