ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಟೀಂ ಇಂಡಿಯಾ ಟಿ20 ತಂಡಕ್ಕೆ ಕೆಎಲ್ ರಾಹುಲ್ ನಾಯಕ

|
Google Oneindia Kannada News

ಮುಂಬೈ, ಮೇ 22: ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ, ಇಂದು ಸಭೆ ಸೇರಿ ತಂಡವನ್ನು ಪ್ರಕಟಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಟಿ20 ತಂಡಕ್ಕೆ ನಾಯಕರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಬಹುಕಾಲದ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಶಿಖರ್ ಧವನ್ ಅವರು ಅವಕಾಶ ವಂಚಿತರಾಗಿದ್ದರೆ, ದಿನೇಶ್ ಕಾರ್ತಿಕ್ ಟಿ20 ತಂಡಕ್ಕೆ ಮರಳಿದ್ದಾರೆ.

ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡಾ, ಶ್ರೇಯಸ್ ಆಯ್ಯರ್, ರಿಷಬ್ ಪಂತ್(ಉಪ ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ನೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್,ಆವೇಶ್ ಖಾನ್ , ಅರ್ಶ್ ದೀಪ್ ಸಿಂಗ್, ಉಮ್ರಾನ್ ಮಲೀಕ್.

ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮಾ ವಿಹಾರಿ, ಚೇತೇಶ್ವರ್ ಪೂಜಾರಾ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿಧ್ ಕೃಷ್ಣ.

BCCI Selection Committee named KL Rahul as captain for SA T20 Series

ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಅಲ್ಲದೆ, ದಿನೇಶ್ ಕಾರ್ತಿಕ್ ಕೂಡಾ ತಂಡಕ್ಕೆ ಮರಳಿದ್ದಾರೆ. ವೇಗಿಗಳ ಪೈಕಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್ ತಂಡದಲ್ಲಿದ್ದಾರೆ. ಉಮ್ರಾನ್ ಮಲಿಕ್, ರಾಹುಲ್ ತ್ರಿಪಾಠಿ ಮತ್ತು ಅರ್ಶ್ ದೀಪ್ ಸಿಂಗ್ ಇದೇ ಮೊದಲ ಬಾರಿಗೆ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಐಪಿಎಲ್ 2022ರ ಪ್ರದರ್ಶನದ ಆಧಾರದ ಮೇಲೆ ತಂಡದ ಆಯ್ಕೆ ಮಾಡಲಾಗಿದೆ. ಶರವೇಗಿ ಕಾಶ್ಮೀರದ ಉಮ್ರಾನ್ ಮಲೀಕ್ 157 ಕಿ. ಮೀ ಪ್ರತಿ ಗಂಟೆ ವೇಗದಲ್ಲಿ ಚೆಂಡು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಲ್ಲದೆ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಗಾಯಾಳುವಾಗಿದ್ದು, ಅವರ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ.

ದಕ್ಷಿಣ ಆಫ್ರಿಕಾದಿಂದ ಭಾರತ ಪ್ರವಾಸ ವೇಳಾಪಟ್ಟಿ
ಮೊದಲ ಟಿ20: ಜೂನ್ 9, ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ
ಎರಡನೇ ಟಿ20: ಜೂನ್ 12, ಬಾರಬತಿ ಸ್ಟೇಡಿಯಂ, ಕಟಕ್
ಮೂರನೇ ಟಿ20: ಜೂನ್ 14, ವಿಶಾಖಪಟ್ಟಣಂ
ನಾಲ್ಕನೇ ಟಿ20: ಜೂನ್ 17, ರಾಜ್ ಕೋಟ್
ಐದನೇ ಟಿ20: ಜೂನ್ 19, ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ಭಾರತದಿಂದ ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ
ಐದನೇ ಟೆಸ್ಟ್ 1-5 ಜುಲೈ ಬರ್ಮಿಂಗ್ ಹ್ಯಾಮ್
ಮೊದಲ ಟಿ20: ಜುಲೈ 7, ಸೌಂಥಾಪ್ಟನ್
ಎರಡನೇ ಟಿ20: ಜುಲೈ 9: ಬರ್ಮಿಂಗ್ ಹ್ಯಾಮ್
ಮೂರನೇ ಟಿ20: ಜುಲೈ 10, ನಾಟಿಂಗ್ ಹ್ಯಾಮ್

ಮೊದಲ ಏಕದಿನ ಪಂದ್ಯ: ಜುಲೈ 12, ಲಂಡನ್
ಎರಡನೇ ಏಕದಿನ ಪಂದ್ಯ: ಜುಲೈ 14, ಲಂಡನ್
ಮೂರನೇ ಏಕದಿನ ಪಂದ್ಯ: ಜುಲೈ 17, ಮ್ಯಾಂಚೆಸ್ಟರ್

English summary
The Chetan Sharma-led selection committee has surprised many. Shikhar Dhawan has been completely snubbed from the T20 squad. Hardik Pandya has ended his exile and has returned to Team India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X