ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಸಹಾ ವಿರುದ್ಧ ಸಹನೆ ಕಳೆದುಕೊಂಡ ಪತ್ರಕರ್ತನಿಗೆ ನಿಷೇಧ

|
Google Oneindia Kannada News

ಮುಂಬೈ, ಮೇ 4: ಕ್ರಿಕೆಟರ್ ವೃದ್ಧಿಮಾನ್ ಸಹಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಬೋರಿಯಾ ಮಜುಂದಾರ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿದೆ.

ವೃದ್ಧಿಮಾನ್ ಸಹಾ ಅವರು ಸಂದರ್ಶನ ಕೊಡಲು ನಿರಾಕರಿಸಿದರು ಎಂದು ಅವರ ಮೇಲೆ ಮಜುಂದಾರ್ ಟೀಕಾಸ್ತ್ರ ಪ್ರಯೋಗಿಸಿದ್ದರು. ಈ ಪ್ರಕರಣದ ತನಿಖೆಗಾಗಿ ಬಿಸಿಸಿಐ 3 ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿ ನೀಡಿದ ವರದಿ ಆಧಾರದ ಮೇಲೆ ಬೋರಿಯಾ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಿದೆ.

''ಬೋರಿಯಾರನ್ನು ಸ್ಟೇಡಿಯಂ ಒಳಗೆ ಬಿಡದಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ತಿಳಿಸುತ್ತೇವೆ. ತವರಿನ ಪಂದ್ಯಗಳಿಗೆ ಅವರಿಗೆ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ ಮತ್ತು ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ನಾವು ಐಸಿಸಿಗೆ ಪತ್ರ ಬರೆಯುತ್ತೇವೆ. ಅವನೊಂದಿಗೆ ತೊಡಗಿಸಿಕೊಳ್ಳದಂತೆ ಆಟಗಾರರನ್ನು ಕೇಳಲಾಗುತ್ತದೆ" ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರ ಉಲ್ಲೇಖಿಸಿ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

BCCI Bans Boria Majumdar For 2 Years For Intimidating Cricketer Wriddhiman Saha

ಫೆಬ್ರವರಿಯಲ್ಲಿ, ಸಹಾ ಅವರು 'ಪತ್ರಕರ್ತ' ಜೊತೆಗಿನ ಚಾಟಿಂಗ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು, ಮಜುಂದಾರ್ ಅವರನ್ನು ಹೇಗೆ ಬೆದರಿಸಿದ್ದರು ಎಂಬುದನ್ನು ತೋರಿಸುತ್ತಾ, "ನಾನು ಅವಮಾನಗಳನ್ನು ದಯೆಯಿಂದ ತೆಗೆದುಕೊಳ್ಳುವುದಿಲ್ಲ. ಮತ್ತು ನಾನು ಇದನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದರು. ಆದರೆ, ಆ ಸಮಯದಲ್ಲಿ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಘಟನೆಯ ನಂತರ, ಭಾರತೀಯ ವಿಕೆಟ್ ಕೀಪರ್‌ಗೆ ಕ್ರಿಕೆಟ್ ಭಾರಿ ಬೆಂಬಲ ವ್ಯಕ್ತವಾಗಿತ್ತು. ವರದಿಯ ಪ್ರಕಾರ ರವಿಶಾಸ್ತ್ರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದರು. ಭಾರತದ ಕೋಚ್ ರಾಹುಲ್ ದ್ರಾವಿಡ್ ಸಹ ಸಹಾಗೆ ಬೆಂಬಲ ವ್ಯಕ್ತಪಡಿಸಿದ್ದರು.

ಬಿಸಿಸಿಐ ಸಮಿತಿಯ ಮುಂದೆ ಘಟನೆ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಪತ್ರಕರ್ತನ ಹೆಸರನ್ನು ಸಹಾ ಬಹಿರಂಗಪಡಿಸಿದ್ದಾರೆ. ಸಮಿತಿಯ ನೇತೃತ್ವವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಹಿಸಿದ್ದರು. ಬಿಸಿಸಿಐ ಖಜಾಂಚಿ, ಅರುಣ್ ಧುಮಾಲ್ ಮತ್ತು ಪ್ರಭತೇಜ್ ಭಾಟಿಯಾ ಅವರು ಕೂಡಾ ಸಮಿತಿಯಲ್ಲಿದ್ದರು.

English summary
The Board of Control for Cricket in India (BCCI) has banned journalist Boria Majumdar for two years after its committee found him guilty of intimidating Wriddhiman Saha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X