ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ರೂಪದಲ್ಲಿ ಕಾಲಿಡಲು PUBG ಸಜ್ಜು: ಭಾರತೀಯ ವರ್ಷನ್ ಬಿಡುಗಡೆ ಯಾವಾಗ?

|
Google Oneindia Kannada News

ನವದೆಹಲಿ, ಜೂನ್ 11: ಯುವ ಸಮುದಾಯವನ್ನು ಭಾರೀ ಪ್ರಮಾಣದಲ್ಲಿ ಸೆಳೆದಿದ್ದ ಪಬ್‌ಜಿ ಮೊಬೈಲ್ ಗೇಮ್ ಕಳೆದ ವರ್ಷ ಭಾರತದಲ್ಲಿ ನಿಷೇಧವಾಯಿತು. ಖಾಸಗಿತನ ಮತ್ತು ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಚೀನಾ ಮೂಲದ ಆಪ್‌ಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಪಬ್‌ಜಿ ಕೂಡ ಭಾರತದಲ್ಲಿ ಬ್ಯಾನ್ ಆಯಿತು. ಆದರೆ ಈಗ ಪಬ್‌ಜಿ ಹೊಸ ರೂಪದಲ್ಲಿ ಭಾರತಕ್ಕೆ ಬರಲು ಸಜ್ಜಾಗಿದೆ. ದಕ್ಷಿಣ ಕೊರಿಯ ಮೂಲದ ಪಬ್‌ಜಿಯ ಮೂಲ ಕಂಪನಿಯಾದ 'ಕ್ರಾಫ್ಟಾನ್' ಭಾರತೀಯ ವರ್ಷನ್‌ನ ಹೊಸ ಪಬ್‌ಜಿಯ ಬಿಡುಗಡೆಗೆ ಸಿದ್ದವಾಗಿದ್ದು ಜೂನ್ 18ರಂದು ಬಿಡುಗಡೆಯಾಗಲಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ.

ಟ್ರಂಪ್‌ ಆದೇಶ ಕಸದ ಬುಟ್ಟಿಗೆ! ಟಿಕ್‌ಟಾಕ್ ಬ್ಯಾನ್ ಕ್ಯಾನ್ಸಲ್.. ಕ್ಯಾನ್ಸಲ್!ಟ್ರಂಪ್‌ ಆದೇಶ ಕಸದ ಬುಟ್ಟಿಗೆ! ಟಿಕ್‌ಟಾಕ್ ಬ್ಯಾನ್ ಕ್ಯಾನ್ಸಲ್.. ಕ್ಯಾನ್ಸಲ್!

'ಬ್ಯಾಟಲ್‌ಗೌಂಡ್ಸ್ ಮೊಬೈಲ್ ಇಂಡಿಯಾ' ಎಂಬ ಹೆಸರಿನೊಂದಿಗೆ ಭಾರತದಲ್ಲಿ ಪಬ್‌ಜಿಯನ್ನು ಬಿಡುಗಡೆಗೊಳಿಸಲು ಬಹುತೇಕ ಸಿದ್ಧತೆಗಳನ್ನು ಕ್ರಾಫ್ಟಾನ್ ಕಂಪನಿ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಮೊದಲಿಗೆ ಮೇ 18ರಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಪ್ರಿ ರಿಜಿಸ್ಟ್ರೇಶನ್ ಮಾಡಲು ಕೂಡ ಅವಕಾಶವನ್ನು ನೀಡಿತ್ತು. ಅದಾದ ನಂತರ ಯಾವಾಗ ಈ ಗೇಮ್ಸ್ ಭಾರತದಲ್ಲಿ ಲಾಂಚ್ ಆಗಲಿದೆ ಎಂಬ ಕುತೂಹಲ ಭಾರತದ ಪಬ್‌ಜಿ ಅಭಿಮಾನಿಗಳಿ ಹೆಚ್ಚಾಗುತ್ತಲೇ ಇದೆ. ಆದರೆ ಯಾವುದೇ ಅಧಿಕೃತ ಮಾಹಿತಿಗಳನ್ನು ಕ್ರಾಫ್ಟಾನ್ ನೀಡಿಲ್ಲ

ಬಿಡುಗಡೆಗೂ ಮುನ್ನವೇ ಭಾರೀ ಸ್ಪಂದನೆ

ಬಿಡುಗಡೆಗೂ ಮುನ್ನವೇ ಭಾರೀ ಸ್ಪಂದನೆ

'ಗೂಗಲ್‌ ಪ್ಲೇ'ನಲ್ಲಿ ಪ್ರಿ ರಿಜಿಸ್ಟ್ರೇಶನ್‌ಗೆ ಅದ್ಭುತವಾಗಿ ಸ್ಪಂದನೆ ದೊರೆತಿದ್ದು 20 ಮಿಲಿಯನ್(2 ಕೋಟಿ) ಬಳಕೆದಾರರು ಪ್ರ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದಾರೆ ಎಂದು 'ಕ್ರಾಫ್ಟಾನ್' ಇತ್ತೀಚೆಗೆ ಘೋಷಿಸಿಕೊಂಡಿತ್ತು. ಈ ಸ್ಪಂದನೆಗೆ ಹರ್ಷವನ್ನು ವ್ಯಕ್ತಪಡಿಸಿರುವ ಕ್ರಾಫ್ಟಾನ್ ಕಂಪನಿಯ ಸಿಇಒ ಸಿಹೆಚ್ ಕಿಮ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾಗೆ ಭಾರತದ ಅಭಿಮಾನಿಗಳು ನೀಡಿರುವ ಅಭೂತಪೂರ್ವ ಸ್ಪಂದನೆಗೆ ಧನ್ಯವಾದಗಳು ಎಂದಿದ್ದಾರೆ.

ಸಣ್ಣಪುಟ್ಟ ಬದಲಾವಣೆಗಳು

ಸಣ್ಣಪುಟ್ಟ ಬದಲಾವಣೆಗಳು

ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಕೂಡ ಪಬ್ಜಿ ರೀತಿಯಲ್ಲೇ ಇರುತ್ತದೆ. ಆದರೆ ಭಾರತವನ್ನು ಕೇಂದ್ರೀಕರಿಸಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ರೆಕಾನ್ ಔಟ್‌ಫಿಟ್, ರೆಕಾನ್ ಮಾಸ್ಕ್, ಇನ್‌ ಗೇಮ್ ಕರೆನ್ಸಿ ಮತ್ತು 300 ಎಜಿ ಮೊದಲಾದ ವಿಶೇಷ ಉಡುಗೊರೆಗಳು ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾದಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ.

ಪ್ರಿ ರಿಜಿಸ್ಟ್ರೇಶನ್ ಹೇಗೆ?

ಪ್ರಿ ರಿಜಿಸ್ಟ್ರೇಶನ್ ಹೇಗೆ?

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಳಕೆದಾರರು ಗೂಗಲ್‌ ಪ್ಲೇನಲ್ಲಿ ಪ್ರಿ ರಿಜಿಸ್ಟ್ರೇಶನ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಪ್ರಿ ರಿಜಿಸ್ಟ್ರೇಶನ್ ಮಾಡಿಸಿಕೊಂಡ ಬಳಕೆದಾರರಿಗೆ ವಿಶೇಷ ರಿವಾರ್ಡ್‌ಗಳನ್ನು ನೀಡಲಾಗುತ್ತದೆ. ಡೌನ್‌ಲೋಡ್‌ಗೆ ಲಭ್ಯವಾದ ಬಳಿಕ ಆ ರಿವಾರ್ಡ್‌ಗಳನ್ನು ಬಳಸಿ ಆಟದ ಸೊಗಸನ್ನು ಹೆಚ್ಚಿಸಿಕೊಳ್ಳಬಹುದು.

ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ?

ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ?

ಸದ್ಯ 'ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್'ಗೆ ಆಂಡ್ರಾಯ್ಡ್ ಬಳಕೆದಾರರು ಮಾತ್ರವೇ ಪ್ರಿರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಆದರೆ ಐಓಎಸ್(iOS) ಬಳಕೆದಾರರಿಗೆ ಗೇಮ್ಸ್ ಲಭ್ಯತೆಯ ಬಗ್ಗೆ ಕ್ರಾಫ್ಟಾನ್ ಪ್ರತಿಕ್ರಿಯೆ ನೀಡಿದೆಯಾದರೂ ಸ್ಪಷ್ಟ ಉತ್ತರ ದೊರೆತಿಲ್ಲ. "ನಾವು ನಮ್ಮ ಬಳಕೆದಾರರಿಗೆ ಎಲ್ಲಾ ಅಪ್‌ಡೇಟ್‌ಗಳನ್ನು ನೀಡುತ್ತೇವೆ. ಹೊಸ ಅಪ್‌ಡೇಟ್‌ಗಳು ನಮ್ಮ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುತ್ತದೆ" ಎಂದಷ್ಟೇ ತಿಳಿಸಿದೆ.

English summary
Battlegrounds Mobile India Launch Date – How to Download Beta Version, Release Date, and Pre-Registration Process in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X