ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಟ್ಟಿಂಗ್ ಕಂಪೆನಿ ಜೊತೆ ಒಪ್ಪಂದ: ಶಕೀಬ್‌ ಅಲ್‌ ಹಸನ್‌ ವಿರುದ್ಧ ತನಿಖೆ

|
Google Oneindia Kannada News

ಬಾಂಗ್ಲಾದೇಶದ ಅತಿದೊಡ್ಡ ಕ್ರಿಕೆಟ್ ತಾರೆ ಶಕೀಬ್ ಅಲ್ ಹಸನ್ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದ್ದು, ದೇಶದ ಕ್ರಿಕೆಟ್ ಮಂಡಳಿಯು ಕ್ರೀಡಾ ಬೆಟ್ಟಿಂಗ್ ಕಂಪನಿಯನ್ನು ಅನುಮೋದಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ತನಿಖೆ ಮಾಡಲು ನಿರ್ಧರಿಸಿದೆ.

2019 ರಲ್ಲಿ, ಭಾರತೀಯ ಬುಕ್‌ಮೇಕರ್‌ನಿಂದ ಭ್ರಷ್ಟ ವಿಧಾನವನ್ನು ವರದಿ ಮಾಡಲು ವಿಫಲವಾದ ಆರೋಪದ ಮೇಲೆ ಶಕೀಬ್ ಅಲ್ ಹಸನ್‌ರನ್ನು ಐಸಿಸಿ ಒಂದು ವರ್ಷ ನಿಷೇಧಿಸಿತ್ತು. ಜೂಜನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಗಳ ಮೇಲೆ ಬಾಂಗ್ಲಾದೇಶದಲ್ಲಿ ಕಠಿಣ ಕಾನೂನು ಇದೆ. ಯಾವುದೇ ಜೂಜಿನ ಸಂಬಂಧಿತ ಚಟುವಟಿಕೆಗಳ ಸುಗಮಗೊಳಿಸುವಿಕೆ ಮತ್ತು ಪ್ರಚಾರದ ಮೇಲೆ ನಿಷೇಧ ವಿಧಿಸಲಾಗಿದೆ.

ಶೂ ಕೊಳ್ಳಲೂ ಆಗದ ರ್‍ಯಾನ್ ಬರ್ಲ್ ಬಾಂಗ್ಲಾ ವಿರುದ್ಧ ಒಂದೇ ಓವರ್‌ನಲ್ಲಿ ಚಚ್ಚಿದ್ದು 34 ರನ್!ಶೂ ಕೊಳ್ಳಲೂ ಆಗದ ರ್‍ಯಾನ್ ಬರ್ಲ್ ಬಾಂಗ್ಲಾ ವಿರುದ್ಧ ಒಂದೇ ಓವರ್‌ನಲ್ಲಿ ಚಚ್ಚಿದ್ದು 34 ರನ್!

ಕ್ರಿಕ್‌ಬಜ್‌ ವರದಿಯ ಪ್ರಕಾರ, "ಬಿಟ್‌ವಿನ್ನರ್ ನ್ಯೂಸ್" ಎಂಬ ಕಂಪನಿಯೊಂದಿಗೆ ಶಕೀಬ್ ಅಲ್‌ ಹಸನ್‌ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಕುರಿತಂತೆ ಬಿಸಿಬಿ ತನಿಖೆ ಮಾಡಲು ನಿರ್ಧರಿಸಿದೆ.

Bangladesh cricket board Will Investigate About Shakib Al Hasans Social Media Post

400 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್, ಸುಮಾರು 650 ವಿಕೆಟ್ ಗಳಿಸಿದ್ದಾರೆ. 12 ಸಾವಿರಕ್ಕಿಂತ ಹೆಚ್ಚಿನ ರನ್ ಬಾರಿಸಿದ್ದಾರೆ. ಶಕೀಬ್ ಅಲ್ ಹಸನ್‌ಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.

ಮೈಸೂರಿಗೆ ಮರಳಿದ ಕ್ರಿಕೆಟ್ ಹಬ್ಬ, ಮಹಾರಾಜ ಟಿ20 ಟ್ರೋಫಿಯ ಡಿಟೈಲ್ಸ್ ಇಲ್ಲಿದೆಮೈಸೂರಿಗೆ ಮರಳಿದ ಕ್ರಿಕೆಟ್ ಹಬ್ಬ, ಮಹಾರಾಜ ಟಿ20 ಟ್ರೋಫಿಯ ಡಿಟೈಲ್ಸ್ ಇಲ್ಲಿದೆ

ಬಾಂಗ್ಲಾದಲ್ಲಿ ಬೆಟ್ಟಿಂಗ್ ಸಂಪೂರ್ಣ ನಿಷೇಧ

"ಅವರು ನಮ್ಮಿಂದ ಯಾವುದೇ ಅನುಮತಿ ಕೇಳಲಿಲ್ಲ. ಎರಡನೆಯದಾಗಿ, ಅವರು ನಿಜವಾಗಿಯೂ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಅನುಮತಿ ಪಡೆಯಲು ಅವಕಾಶವಿಲ್ಲ ಏಕೆಂದರೆ ನಾವು ಅನುಮತಿ ನೀಡುವುದಿಲ್ಲ. ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಏನಾದರೂ ಇದ್ದರೆ ನಾವು ಯಾವುದೇ ಅನುಮತಿಯನ್ನು ನೀಡುವುದಿಲ್ಲ," ಎಂದು ನಜ್ಮುಲ್ ಹೇಳಿದ್ದಾರೆ ಎಂದು ವೆಬ್‌ಸೈಟ್ ವರದಿ ಮಾಡಿದೆ. ಗುರುವಾರ ಬಿಸಿಬಿ ಸಭೆ ನಡೆಸಿದ್ದು, ಶಕೀಬ್‌ ಅಲ್‌ ಹಸನ್ ಸಾಮಾಜಿಕ ಮಾಧ್ಯಮ ಪೋಸ್ಟ್ ತನಿಖೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಕ್ಷಣ ತನಿಖೆ ನಡೆಸಲು ನಿರ್ಧಾರ

"ಸಭೆಯಲ್ಲಿ, ಸಮಸ್ಯೆಯನ್ನು ಬಗ್ಗೆ ಚರ್ಚೆ ಮಾಡಲಾಯಿತು ಮತ್ತು ಈ ರೀತಿ ಒಪ್ಪಂದ ಮಾಡಿಕೊಳ್ಳಲು ಹೇಘೆ ಸಾಧ್ಯ ಎಂದು ನಾವು ಕೇಳಿದ್ದೇವೆ. ಏಕೆಂದರೆ ಈ ರೀತಿ ಒಪ್ಪಂದ ಮಾಡಿಕೊಳ್ಳುವುದು ಅಸಾಧ್ಯ. ಒಂದು ವೇಳೆ ಹಾಗಾಗಿದ್ದರೆ ತಕ್ಷಣ ಶಕೀಬ್ ಅಲ್ ಹಸನ್ ಬಳಿ ವಿಚಾರಣೆ ನಡೆಸಿ. ಶಕೀಬ್‌ಗೆ ಸೂಚನೆ ನೀಡಿ ಮತ್ತುಘಟನೆ ಹೇಗಾಯಿತು ಎಂದು ಕಾರಣ ಕೇಳಿ, ಏಕೆಂದರೆ ಮಂಡಳಿಯು ಇದಕ್ಕೆ ಅನುಮತಿಸುವುದಿಲ್ಲ. ಇದು ಬೆಟ್ಟಿಂಗ್‌ಗೆ ಸಂಬಂಧಿಸಿದ್ದರೆ ನಾವು ಅದನ್ನು ಅನುಮತಿಸುವುದಿಲ್ಲ" ಎಂದು ನಜ್ಮುಲ್ ಹೇಳಿದರು.

Bangladesh cricket board Will Investigate About Shakib Al Hasans Social Media Post

ದೇಶದ ಕಾನೂನಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವುದಾಗಿ ನಜ್ಮುಲ್ ಭರವಸೆ ನೀಡಿದ್ದಾರೆ. "ಮೊದಲು, ಶಕೀಬ್ ಅಲ್ ಹನಸ್ ಏನು ಮಾಡಿದ್ದಾನೆಂದು ನಾವು ತಿಳಿದುಕೊಳ್ಳಬೇಕು. ಬೆಟ್ಟಿಂಗ್ ಸಂಬಂಧಿತ ಚಟುವಟಿಕೆಗಳು ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಎಲ್ಲಾ ಕ್ರೀಡೆಗಳಲ್ಲಿ ಇದನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ ಮತ್ತು ಕಾನೂನು ಇದಕ್ಕೆ ಅನುಮತಿ ನೀಡುವುದಿಲ್ಲ. ಇದೊಂದು ಗಂಭೀರ ವಿಚಾರ. ನಾವು ಫೇಸ್‌ಬುಕ್ ಪೋಸ್ಟ್‌ಗಳ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ, ನಾವು ಅದನ್ನು ತನಿಖೆ ಮಾಡಬೇಕು. ಇದು ನಿಜವಾಗಿದ್ದರೆ, ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ," ಎಂದು ಅವರು ಹೇಳಿದ್ದಾರೆ.

English summary
Bangladesh cricket board will investigate a recent social-media post from the all-rounder Shakib Al Hasan announcing his partnership with a company called “Betwinner News”. As per existing laws in Bangladesh, there is prohibition on facilitation and promotion of any gambling related activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X