India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದ ಭಾರತ ಪ್ರವಾಸ; ಯಾರಾಗಲಿದ್ದಾರೆ ಟೆಸ್ಟ್ ಚಾಂಪಿಯನ್ಸ್‌? ಯಾರು?

|
Google Oneindia Kannada News

ನವದೆಹಲಿ, ಜುಲೈ 05; ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ತಂಡ ಮುಂದಿನ ವರ್ಷ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ. ಕಾಂಗರೂ ಬಳಗದ ಈ ಪ್ರವಾಸ ವರ್ಡ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲಿಸ್ಟ್‌ಗಳನ್ನು ನಿರ್ಧರಿಸಲಿದ್ದು, ಬಹುಮುಖ್ಯ ಸರಣಿಯಾಗಿದೆ.

ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಭಾರತ ಪ್ರವಾಸ ಬಗ್ಗೆ ಮಾತನಾಡಿದ್ದಾರೆ, "ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಯಶಸ್ಸುಗಳಿಸುವುದು ನಮ್ಮ ಗುರಿ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸರಣಿ ನಮಗೆ ಇದಕ್ಕೆ ಸಹಾಯಕವಾಗಿದೆ" ಎಂದು ಹೇಳಿದ್ದಾರೆ.

ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕನಾದ 2ನೇ ವೇಗಿ ಬುಮ್ರಾ ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡಕ್ಕೆ ನಾಯಕನಾದ 2ನೇ ವೇಗಿ ಬುಮ್ರಾ

"ವೈಯಕ್ತಿಕವಾಗಿ ನನಗೆ ಭಾರತ ಪ್ರವಾಸದ ಮೇಲೆ ಒಂದು ಕಣ್ಣಿದೆ. ಪ್ರವಾಸದಲ್ಲಿ ಸರಣಿ ಗೆಲ್ಲುವುದು ನನ್ನ, ತಂಡದ ಗುರಿಯಾಗಿದೆ. ಆದರೆ ಭಾರತ ಪ್ರವಾಸಕ್ಕೂ ಮುನ್ನ ಹಲವಾರು ಟೆಸ್ಟ್ ಸರಣಿಗಳಿವೆ" ಎಂದು ಮಿಚೆಲ್ ಸ್ವೆಪ್ಸ್‌ನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಟೆಸ್ಟ್ ತಂಡ ಸೇರಿಕೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್

ತಂಡದ ಭಾರತ ಪ್ರವಾಸ; ಆಸ್ಟ್ರೇಲಿಯಾ ತಂಡ 2023ರ ಫೆಬ್ರವರಿ, ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳನ್ನು ಪ್ರವಾಸಿಗರು ಆಡಲಿದ್ದಾರೆ. ಇದೊಂದು ಬಹುಮುಖ್ಯ ಸರಣಿಯಾಗಿದ್ದು, ವರ್ಡ್ ಟೆಸ್ಟ್ ಚಾಂಪಿಯನ್‌ ಶಿಪ್‌ನ ಅಂತಿಮ ತಂಡಗಳು ಯಾವುದು? ಎಂಬುದು ತೀರ್ಮಾನವಾಗಲಿದೆ.

1983 World Cup : ಭಾರತೀಯ ಕ್ರಿಕೆಟ್ ತಂಡದ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 39 ವರ್ಷ1983 World Cup : ಭಾರತೀಯ ಕ್ರಿಕೆಟ್ ತಂಡದ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 39 ವರ್ಷ

ಕಾಂಗರೂ ಪಡೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಕೊನೆಯದಾಗಿ ಗೆದ್ದಿದ್ದು 2004-05ರಲ್ಲಿ. ಈಗಾಗಲೇ ಟೆಸ್ಟ್ ಕ್ರಿಕೆಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ಶುಕ್ರವಾರದಿಂದ ಗಾಲೆಯಲ್ಲಿ ಆರಂಭವಾಗಲಿರುವ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡುತ್ತಿದೆ. ಭಾರತ ಪ್ರವಾಸಕ್ಕೆ ಇನ್ನೂ ಸಮಯವಿದ್ದರೂ ತಂಡದ ಆಟಗಾರರು ಪ್ರವಾಸದ ಬಗ್ಗೆ ಈಗಲೇ ಮಾತನಾಡುತ್ತಿದ್ದಾರೆ.

Australia Team Tour To India In 2023 High Profile Test Series

28 ವರ್ಷದ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಪಾಕಿಸ್ತಾನದ ಪರವಾಗಿ ಆಡಿದ ಪಂದ್ಯಗಳಲ್ಲಿ ಪಡೆದಿರುವುದು ಕೇವಲ ಎರಡು ವಿಕೆಟ್. ಆದರೆ "ಹಿಂದಿನ ಸರಣಿಗಳ ಗೆಲವು ಭಾರತ ಪ್ರವಾಸದ ಸವಾಲು ಎದುರಿಸಲು ನಮಗೆ ಸಹಕಾರಿಯಾಗಿದೆ" ಎಂದು ಸ್ವೆಪ್ಸನ್ ಹೇಳಿದ್ದಾರೆ.

ಆದರೆ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯುವ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಗಮನಸೆಳೆದಿದ್ದರು. ಶ್ರೀಲಂಕಾದ ಪ್ರಮುಖ ಮೂರು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸಿದ್ದರು. ಮೊದಲ ದಿನವೇ ಕಾಂಗರೂಗಳ ಸ್ಪಿನ್ ದಾಳಿಗೆ ಶ್ರೀಲಂಕಾ ತಂಡ 212ರನ್‌ಗಳಿಗೆ ಆಲೌಟ್ ಆಗಿತ್ತು.

ಗೆಲುವಿನತ್ತ ಇಂಗ್ಲೆಂಡ್ ತಂಡ; ಪ್ರಸ್ತುತ ಭಾರತ ತಂಡ ಇಂಗ್ಲೆಂಡ್ ಜೊತೆ ಬರ್ಮಿಂಗ್ ಹ್ಯಾಂನಲ್ಲಿ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮಂಗಳವಾರ ಪಂದ್ಯದ ಕೊನೆಯ ದಿನವಾಗಿದ್ದು, ಜೋ ರೂಟ್, ಜಾನಿ ಬೆಸ್ಟೋ ಜೊತೆಯಾಟದ ನೆರವಿನಿಂದ ಇಂಗ್ಲೆಂಡ್ ತಂಡ ಗೆಲುವಿನತ್ತ ಸಾಗಿದೆ.

378 ರನ್‌ಗಳ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ತಂಡ ಸೋಮವಾರದ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿದೆ. ಕೊನೆಯ ದಿನವಾದ ಮಂಗಳವಾರ ಬೆನ್ ಸ್ಟೋಕ್ಸ್‌ ಬಳಗ 119 ರನ್‌ಗಳಿಸಬೇಕಿದೆ.

7 ವಿಕೆಟ್ ಕೈಯಲ್ಲಿ ಇಟ್ಟುಕೊಂಡಿರುವ ಬೆನ್ ಸ್ಟೋಕ್ಸ್‌ ಬಳಗ ಕಟ್ಟಿಹಾಕಲು ಜಸ್‌ಪ್ರೀತ್ ಬೂಮ್ರಾ ನೇತೃತ್ವದಲ್ಲಿ ಭಾರತೀಯ ಬೌಲರ್‌ಗಳು ಭಾರೀ ಶ್ರಮ ಪಡಬೇಕಿದೆ.

ಪಂದ್ಯದ ಮೊದಲ ಮೂರು ದಿನ ಭಾರತ ಪ್ರಭುತ್ವ ಸಾಧಿಸಿತ್ತು. ಆದರೆ 4ನೇ ದಿನವಾದ ಸೋಮವಾರ ಇಂಗ್ಲೆಂಡ್ ತಂಡ ಪಂದ್ಯವನ್ನು ಕೈವಶ ಮಾಡಿಕೊಂಡಿದೆ.

ಜೋ ರೂಟ್ 76, ಜಾನಿ ಬೆಸ್ಟೋ 72 ರನ್‌ಗಳ ಜೊತೆಯಾಟದಲ್ಲಿ ನಾಲ್ಕನೇ ವಿಕೆಟ್‌ಗೆ ತಂಡ 150 ರನ್ ಸೇರಿಸಿದೆ. ಇದು ಬೂಮ್ರಾ ಬಳಗದ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ.

   Ind vs Eng ಕ್ರೀಡಾಂಗಣದಲ್ಲಿ ಏನಿದು ಆತಂಕಕಾರಿ ಸುದ್ದಿ | *Cricket | OneIndia Kannada
   English summary
   Australia cricket team scheduled to tour India for four tests in February and March 2023. Team last won a test series in India in 2004-05. High-profile series will decide the finalists of the World Test Championship.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X