India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆ ಮ್ಯಾರಥಾನ್ ಓಟ: ಭಾರತ ತಂಡಗಳಿಗೆ ಚಿನ್ನ ಮತ್ತು ಬೆಳ್ಳಿ

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಜುಲೈ 3: ಪ್ರತಿಷ್ಠಿತ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಐಎಯು 24 ಗಂಟೆ ಅಲ್ಟ್ರಾ ಮ್ಯಾರಾಥಾನ್ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪುರುಷರ ತಂಡ ಮತ್ತು ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಲ್ಲದೇ ಮಹಿಳೆಯರ ತಂಡ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಶನಿವಾರ ಮತ್ತು ಭಾನುವಾರ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಭಾರತೀಯರು ಅದ್ಭುತ ಪ್ರದರ್ಶನ ತೋರಿ ಪದಕಗಳನ್ನು ಕೊಳ್ಳೆ ಹೊಡೆದರು.

ಅಮರ್ ಸಿಂಗ್ ದೆವಂಡ ಅವರ ನೇತೃತ್ವದ ಭಾರತ ತಂಡ ನಿಗದಿತ 24 ಗಂಟೆಗಳಲ್ಲಿ 739.959 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಮೊದಲ ಸ್ಥಾನ ಪಡೆಯಿತು. ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದ ಓಟ ಭಾನುವಾರ ಬೆಳಗ್ಗೆ ಮುಕ್ತಾಯಗೊಂಡಿತು.

ಅಮರ್ ಸಿಂಗ್ ವೈಯಕ್ತಿಕ ಶ್ರೇಷ್ಠ 254.418 ಕಿಲೋ ಮೀಟರ್ ದೂರ ಓಡಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ತಮ್ಮ ಹಿಂದಿನ ಶ್ರೇಷ್ಠ ದಾಖಲೆಯನ್ನು 18 ಕಿಲೋ ಮೀಟರ್‌ಗಳಿಂದ ಉತ್ತಮಗೊಳಿಸಿಕೊಂಡ ಅಮರ್ ಸಿಂಗ್ ಈ ಕೂಟದ ಪ್ರಮುಖ ಆಕರ್ಷಣೆ ಎನಿಸಿದರು.

ಸೌರವ್ ಕುಮಾರ್ ರಂಜನ್ (242.564 ಕಿ.ಮೀ.) ಮತ್ತು ಗೀನೊ ಆ್ಯಂಥೋನಿ(238.977) ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದ ಕಾರಣ ವೈಯಕ್ತಿಕ ವಿಭಾಗದಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಮೂವರೂ ಸೇರಿ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟರು.

ಆಸ್ಟ್ರೇಲಿಯಾ(628,405) ಮತ್ತು ಚೈನೀಸ್ ತೈಪೆ(563,591) ತಂಡ ವಿಭಾಗದಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳನ್ನು ಪಡೆದುಕೊಂಡವು.

ಕಾರ್ತಿಕ್ ರಾಮನ್ ಮಾತು

ಕಾರ್ತಿಕ್ ರಾಮನ್ ಮಾತು

ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್‌ನ ಸಿಎಂಒ ಕಾರ್ತಿಕ್ ರಾಮನ್ ಮಾತನಾಡಿ, ‘ಭಾರತೀಯ ಓಟಗಾರರು ಇಂತಹ ಬಲಿಷ್ಠ ಪ್ರದರ್ಶನ ತೋರಿದ್ದು ಬಹಳ ಖುಷ ನೀಡಿದೆ. 24 ಗಂಟೆಗಳ ಕಾಲ ಟ್ರ್ಯಾಕ್‌ನಲ್ಲಿ ಛಲ ಮತ್ತು ಧೈರ್ಯ ಪ್ರದರ್ಶಿಸಿದ ಪ್ರತಿಯೊಬ್ಬ ವಿಜೇತರಿಗೂ ಅಭಿನಂದನೆ ಸಲ್ಲಿಸುತ್ತೇನೆ' ಎಂದರು.

ಭಾರತೀಯರ ಪ್ರಬಲ ಸ್ಪರ್ಧೆ

ಭಾರತೀಯರ ಪ್ರಬಲ ಸ್ಪರ್ಧೆ

ತುಂತುರು ಮಳೆ ಬೀಳುತ್ತಿದ್ದ ಕಾರಣ ವಾತಾವರಣ ಓಟಗಾರರಿಗೆ ಅಹ್ಲಾದಕರ ಅನುಭವ ನೀಡಿತು. ಭಾರತೀಯ ಮಹಿಳಾ ತಂಡವೂ ಅತ್ಯುತ್ತಮ ಪ್ರದರ್ಶನ ತೋರಿ ಎರಡನೇ ಸ್ಥಾನ ಪಡೆದುಕೊಂಡಿತು. ಓಟಗಾರ್ತಿಯರು ಒಟ್ಟು 570.70 ಕಿಲೋ ಮೀಟರ್ ದೂರ ಓಡಿ ಮೊದಲ ಸ್ಥಾನ ಪಡೆದ ಆಸ್ಟ್ರೇಲಿಯಾಗೆ ಪ್ರಬಲ ಪೈಪೋಟಿ ನೀಡಿದರು.

ಆಸ್ಟ್ರೇಲಿಯಾ ತಂಡ 607.63 ಕಿ.ಮೀ. ದೂರ ಓಡಿ ಮೊದಲ ಸ್ಥಾನ ಪಡೆದರೆ, ಚೈನೀಸ್ ತೈಪೆ ತಂಡ ೫೨೯.೦೮೨ ೩ನೇ ಸ್ಥಾನ ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ತೈಪೆಯ ಕುವಾನ್ ಜು ಲಿನ್ (216.877 ಕಿ.ಮೀ) ಮೊದಲ ಸ್ಥಾನ ಪಡೆದರೆ, ಆಸ್ಟ್ರೇಲಿಯಾದ ಕ್ಯಾಸಿ ಕೊಹೆನ್ (214.990 ಕಿ.ಮೀ.), ಅಲಿಸಿಯಾ ಹೆರೊನ್(211.442 ಕಿ.ಮೀ.) ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ಪಡೆದರು.

ರೇಸ್ ನಿರ್ದೇಶಕರಗಿದ್ದ ಎನ್‌ಇಬಿ ಸ್ಪೋರ್ಟ್ಸ್‌ನ ನಾಗರಾಜ್ ಅಡಿಗ ಮತ್ತು ಆಯೋಜಕರು ಚಾಂಪಿಯನ್‌ಶಿಪ್‌ನ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ‘ಇದೇ ಮೊದಲ ಬಾರಿಗೆ ಭಾರತ ಇಷ್ಟು ದೊಡ್ಡ ಮಟ್ಟದಲ್ಲಿ ಐಎಯು ಚಾಂಪಿಯನ್‌ಶಿಪ್ ಆಯೋಜಿಸಿದೆ. ಈ ಕೂಟದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ' ಎಂದು ನಾಗರಾಜ್ ಅಡಿಗ ಹೇಳಿದರು.

ಫಲಿತಾಂಶಗಳು

ಫಲಿತಾಂಶಗಳು

ತಂಡ ವಿಭಾಗ
ಪುರುಷರು:
1. ಭಾರತ (739.959 ಕಿ.ಮೀ.),
2. ಆಸ್ಟ್ರೇಲಿಯಾ (628.405 ಕಿ.ಮೀ.),
3. ಚೈನೀಸ್ ತೈಪೆ(563.591 ಕಿ.ಮೀ.)

ಮಹಿಳೆಯರು:
1. ಆಸ್ಟ್ರೇಲಿಯಾ (607.630 ಕಿ.ಮೀ.),
2. ಭಾರತ (570.700 ಕಿ.ಮೀ),
೩. ಚೈನೀಸ್ ತೈಪೆ(529.082)

ವೈಯಕ್ತಿಕ ವಿಭಾಗ
ಪುರುಷರು:
1. ಅಮರ್ ಸಿಂಗ್ ದೆವಂಡ (258.418 ಕಿ.ಮೀ),
2. ಸೌರವ್ ರಂಜನ್(242.564 ಕಿ.ಮೀ),
3. ಗೀನೊ ಆ್ಯಂಥೋನಿ(238.977 ಕಿ.ಮೀ.)

ಮಹಿಳೆಯರು:
1. ಕುವಾನ್ ಜು ಲಿನ್(216.877 ಕಿ.ಮೀ),
2. ಕ್ಯಾಸಿ ಕೊಹೆನ್(214.990 ಕಿ.ಮೀ.),
3. ಅಲಿಸಿಯಾ ಹೆರೊನ್(211.442 ಕಿ.ಮೀ.)

  Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada
  ಮುಕ್ತ ವಿಭಾಗದ ರಿಸಲ್ಟ್

  ಮುಕ್ತ ವಿಭಾಗದ ರಿಸಲ್ಟ್

  ಎಲೈಟ್ ಮಹಿಳೆ
  1. ಯೊಹಾನ ಜಕ್ರಜ್ವೆಸ್ಕಿ (ಪೋಲೆಂಡ್ 199.20)

  ಓಪನ್ ಮಹಿಳೆ
  1. ತೃಪ್ತಿ ಚವಾಣ್ (ಭಾರತ 134.90 ಕಿ.ಮೀ)

  ಎಲೈಟ್ ಪುರುಷ
  1. ತೊಮಾಜ್ ಪಾವ್ಲೊಸ್ಕಿ (ಪೋಲೆಂಡ್ 222.00)

  ಓಪನ್ ಪುರುಷ
  1. ಸಿಕಂದರ್ ಲಾಂಬ (ಭಾರತ 202.36),
  2. ಸಂದೆಲ್ ನಿಪಾಣೆ (190.53)

  (ಒನ್ಇಂಡಿಯಾ ಸುದ್ದಿ)

  English summary
  Indian men's team has won gold in AgeasFederal Asia-Oceania 24 hrs Marathon race. Women's team won silver in the championship.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X