ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾಕಪ್: ಭಾರತ ವಿರುದ್ಧ ಪಾಕಿಸ್ತಾನ ಟಿ20 ಪಂದ್ಯ ಯಾವಾಗ?

|
Google Oneindia Kannada News

ಬೆಂಗಳೂರು, ಜುಲೈ 07: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್‌ಗೂ ಮುನ್ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಏಷ್ಯಾಕಪ್ 2022ರಲ್ಲಿ ಬದ್ಧವೈರಿಗಳ ಕಾಳಗಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 11ರ ತನಕ ಏಷ್ಯಾಕಪ್ ಟೂರ್ನಮೆಂಟ್ ನಡೆಯಲಿದೆ.

ಈ ವರ್ಷದ ಏಷ್ಯಾಕಪ್ ಕದನವೂ ಕೂಡಾ ಟಿ20 ಮಾದರಿಯಲ್ಲೇ ನಡೆಸಲಾಗುತ್ತದೆ. ಈ ಹಿಂದೆ ಏಕದಿನ ಪಂದ್ಯದ ಮಾದರಿಯಲ್ಲಿ ನಡೆಸಲಾಗುತ್ತಿತ್ತು. ಟಿ20 ವಿಶ್ವಕಪ್ ಗೂ ಮುನ್ನ ಭಾರತದ ಉಪಖಂಡದ ತಂಡಗಳ ತಯಾರಿಗೆ ಏಷ್ಯಾಕಪ್ ಉತ್ತಮ ವೇದಿಕೆ ಒದಗಿಸಬಲ್ಲುದು.

ವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ

ಏಷ್ಯಾಕಪ್ ಟೂರ್ನಮೆಂಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಭಾರತ ಮತ್ತೊಮ್ಮೆ ಕಪ್ ಎತ್ತುವ ಉತ್ಸಾಹದಲ್ಲಿದೆ. 2018ರ ನಂತರ ಮತ್ತೊಮ್ಮೆ ಪ್ರೇಕ್ಷಕರ ಸಮ್ಮುಖದಲ್ಲಿ ಹೊಡಿ ಬಡಿ ಆಟ ಆಯೋಜನೆಗೊಳ್ಳಲಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಶ್ರೀಲಂಕಾ ದೇಶದ ಕ್ರಿಕೆಟ್ ಮಂಡಳಿಯು ಈ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದೆ. ಏಷ್ಯಾಕಪ್ 2022ರ ಅಧಿಕೃತ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ. ಲಭ್ಯ ಮಾಹಿತಿಯಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾವಳಿ ಆಗಸ್ಟ್ 28ರಂದು ನಡೆಯುವ ಸಾಧ್ಯತೆ ಹೆಚ್ಚಿದೆ.

Asia Cup 2022: When is India Vs Pakistan Match Date

ಏಷ್ಯಾಕಪ್ ನಂತರ ಟಿ20 ವಿಶ್ವಕಪ್ 2022ರಲ್ಲಿ ಕೂಡಾ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಎದುರಾಗಲಿವೆ. ಮೆಲ್ಬೋರ್ನ್ ಮೈದಾನದಲ್ಲಿ ಅಕ್ಟೋಬರ್ 23ರಂದು ಪರಸ್ಪರ ಸೆಣಸಲಿವೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತಂಡವನ್ನು ಬಾಬರ್ ಅಜಂ ನೇತೃತ್ವ ಪಾಕಿಸ್ತಾನ ತಂಡ ಸೋಲಿಸಿತ್ತು. ಈ ಮೂಲಕ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ಮೊದಲ ಜಯ ದಾಖಲಿಸಿತ್ತು. ಈ ಬಾರಿ ರೋಹಿತ್ ಶರ್ಮ ಪಡೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಜೊತೆಗೆ ಕಪ್ ಎತ್ತುವ ಉತ್ಸಾಹದಲ್ಲಿದೆ.

English summary
Ahead of the ICC T20 World Cup in Australia, Rohit Sharma's India will face off against arch-rivals Pakistan in the Asia Cup 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X