ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಂ ಇಂಡಿಯಾ ಕೆಣಕಿದ ವಕಾರ್ ಯೂನಿಸ್: ತಿರುಗೇಟು ಕೊಟ್ಟ ಟೀಂ ಇಂಡಿಯಾ ಅಭಿಮಾನಿಗಳು

|
Google Oneindia Kannada News

ಆಗಸ್ಟ್ 28ರಂದು ಕ್ರಿಕೆಟ್‌ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್‌ನ ಭಾರತ-ಪಾಕಿಸ್ತಾನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಭಾರತ-ಪಾಕಿಸ್ತಾನ ನಡುವಣ ಪಂದ್ಯವೆಂದರೆ ಅದು ಎರಡು ತಂಡಗಳ ನಡುವೆ ಮಾತ್ರವಲ್ಲ. ಎರಡೂ ತಂಡಗಳ ಅಭಿಮಾನಿಗಳ ಪ್ರತಿಷ್ಠೆಯ ವಿಚಾರ ಕೂಡ ಆಗಿರುತ್ತದೆ. ಸೋತ ತಂಡವನ್ನು ಗೆದ್ದ ತಂಡದ ಅಭಿಮಾನಿಗಳು ಹೀನಾಯವಾಗ ಟ್ರೋಲ್ ಮಾಡುವುದು ಕೂಡ ಆಗುತ್ತದೆ.

ಏಷ್ಯಾಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ಶ್ರೀಧರನ್ ಶ್ರೀರಾಮ್ ನೇಮಕಏಷ್ಯಾಕಪ್, ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶದ ಮುಖ್ಯ ಕೋಚ್ ಆಗಿ ಶ್ರೀಧರನ್ ಶ್ರೀರಾಮ್ ನೇಮಕ

ಪಂದ್ಯ ಆರಂಭಕ್ಕೂ ಮುನ್ನವೇ ಹಲವು ವಿಚಾರಗಳಿಗೆ ಎರಡೂ ತಂಡಗಳ ಆಭಿಮಾನಿಗಳು ಪರಸ್ಪರ ಟ್ರೋಲ್ ಮಾಡುವುದು ಇದೆ. ಆದರೆ ಈ ಬಾರಿ ಪಾಕಿಸ್ತಾನದ ಮಾಜಿ ಕ್ರಿಕೆಟರ್ ವಕಾರ್ ಯೂನಿಸ್ ಭಾರತೀಯರನ್ನು ಕೆಣಕಿ ಟ್ರೋಲ್‌ ಆಗಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಹಣಾಹಣಿಗೆ ಮುನ್ನ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಮಾಡಿದ ಟ್ವೀಟ್ ವೈರಲ್ ಆಗಿದ್ದು, ಕೋಪಗೊಂಡ ಭಾರತ ಕ್ರಿಕೆಟ್ ಅಭಿಮಾನಿಗಳು ವಕಾರ್ ಯೂನಿಸ್‌ರನ್ನ ಟ್ರೋಲ್ ಮಾಡಿದ್ದಾರೆ.

ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಗಾಯದ ಸಮಸ್ಯೆಯಿಂದ ಏಷ್ಯಾಕಪ್‌ನಿಂದ ಹೊರಗುಳಿಯಲಿದ್ದಾರೆ ಎಂದು ಪಿಸಿಬಿ ಹೇಳಿಕೆ ನೀಡಿದ ನಂತರ ವಕಾರ್ ಯೂನಿಸ್‌ ಭಾರತ ಕ್ರಿಕೆಟ್ ತಂಡವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.

Asia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿAsia Cup 2022: ಪಂದ್ಯಗಳು, ಸ್ಥಳ, ಟಿಕೆಟ್ ದರ, ನೇರಪ್ರಸಾರ ವಿವರಗಳನ್ನು ತಿಳಿಯಿರಿ

 ಭಾರತಕ್ಕೆ ಅನುಕೂಲವಾಗಿದೆ ಎಂದ ವಕಾರ್ ಯೂನಿಸ್

ಭಾರತಕ್ಕೆ ಅನುಕೂಲವಾಗಿದೆ ಎಂದ ವಕಾರ್ ಯೂನಿಸ್

ಶಾಹೀನ್ ಶಾ ಅಫ್ರಿದಿ ಗಾಯಗೊಂಡು ಏಷ್ಯಾಕಪ್‌ನಿಂದ ಹೊರಬಿದ್ದಿರುವುದು ಭಾರತ ತಂಡದ ಬ್ಯಾಟರ್ ಗಳಿಗೆ ಅನುಕೂಲವಾಗಿದೆ. ಎಂದು ವಕಾರ್ ಯೂನಿಸ್ ಮಾಡಿದ ಟ್ವೀಟ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

"ಶಾಹೀನ್ ಶಾ ಗಾಯಗೊಂಡಿದ್ದರಿಂದ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ ಗಳಿಗೆ ನಿಟ್ಟುಸಿರು ಬಿಡುವಂತಾಗಿದೆ. ಏಷ್ಯಾಕಪ್‌ನಲ್ಲಿ ನೀವು ಆಡದಿರುವುದು ಬೇಸರ ತಂದಿದೆ. ಬೇಗನೆ ಗುಣಮುಖರಾಗಿ" ಎಂದು ವಕಾರ್ ಯೂನಿಸ್ ಟ್ವೀಟ್ ಮಾಡಿದ್ದರು.

 ಭಾರತೀಯ ಅಭಿಮಾನಿಗಳ ತರಾಟೆ

ಭಾರತೀಯ ಅಭಿಮಾನಿಗಳ ತರಾಟೆ

ವಕಾರ್ ಯೂನಿಸ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಅಭಿಮಾನಿಯೊಬ್ಬರು "ಆಡುವ ಮೊದಲೇ ಸೋಲೊಪ್ಪಿಕೊಂಡಿರಾ" ಎಂದು ಕಾಲೆಳೆದಿದ್ದಾರೆ.

ನೀವು ಇತಿಹಾಸವನ್ನು ಮರೆತಿದ್ದೀರಾ ಎನಿಸುತ್ತದೆ, ಶಾಹಿನ್ ಶಾ ಅಫ್ರಿದಿ ಬೌಲಿಂಗ್‌ನಲ್ಲಿ ರೋಹಿತ್ ಶರ್ಮಾ, ಧವನ್ ಸಿಡಿಸಿದ ಬೌಂಡರಿಗಳು ನೆನಪಿಲ್ಲವೇ ಎಂದು ಟೀಕಿಸಿದ್ದಾರೆ.

ಇದು ವಕಾರ್ ಯೂನಿಸ್‌ರ ಚೀಪ್ ಮೆಂಟಾಲಿಟಿ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

 4-6 ವಾರ ವಿಶ್ರಾಂತಿ ಪಡೆಯಲು ಸೂಚನೆ

4-6 ವಾರ ವಿಶ್ರಾಂತಿ ಪಡೆಯಲು ಸೂಚನೆ

ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹಿನ್ ಅಫ್ರಿದಿ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯದಿಂದ ಬಳಲುತ್ತಿದ್ದರು ಮತ್ತು ಅಂದಿನಿಂದ ಅಫ್ರಿದಿ ಯಾವುದೇ ಪಂದ್ಯವನ್ನು ಆಡಿಲ್ಲ.

22 ವರ್ಷದ ಎಡಗೈ ವೇಗಿ ಪ್ರಸ್ತುತ ಪುನರ್ವಸತಿ ಕಾರ್ಯಕ್ರಮದ ಭಾಗವಾಗಿ ನೆದರ್ಲೆಂಡ್ಸ್‌ನಲ್ಲಿ ಪಾಕಿಸ್ತಾನ ತಂಡದಲ್ಲಿದ್ದಾರೆ. ತರಬೇತುದಾರ ಮತ್ತು ತಂಡದ ಫಿಸಿಯೋಥೆರಪಿಸ್ಟ್ ಅವರನ್ನು ಆರೈಕೆ ಮಾಡಿದ್ದಾರೆ ಮತ್ತು ಸ್ಕ್ಯಾನ್ ಮತ್ತು ವರದಿಗಳ ನಂತರ ಕನಿಷ್ಠ 4-6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

 ಏಳು ಬಾರಿ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ

ಏಳು ಬಾರಿ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ

ಭಾರತ, ಹಾಲಿ ಚಾಂಪಿಯನ್ ಮತ್ತು ಏಳು ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದ್ದು, ಏಷ್ಯಾಕಪ್‌ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈವರೆಗೂ ಏಷ್ಯಾಕಪ್‌ ಏಕದಿನ ಮಾದರಿಯಲ್ಲಿ ನಡೆಯುತ್ತಿತ್ತು. ಇದೇ ಮೊದಲಬಾರಿಗೆ ಏಷ್ಯಾಕಪ್‌ ಪಂದ್ಯಾವಳಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯಾ ಕಪ್ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವಾಸ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಅಕ್ಟೋಬರ್ 23 ರಂದು ಭಾರತ-ಪಾಕಿಸ್ತಾನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ.

English summary
Former Pakistan pacer Waqar Younis brutally trolled by the fans after his tweet ahead of India vs Pakistan clash. Waqar tweeted for India’s top order will relaxed after Pakistan star pacer Shaheen Shah Afridi will be out of the Asia Cup due to an injury.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X