ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಕಾಂಗ್‌ ವಿರುದ್ಧ ಗೆದ್ದ ಪಾಕಿಸ್ತಾನ: ಸೆಪ್ಟೆಂಬರ್ 4ರಂದು ಮತ್ತೆ ಭಾರತ-ಪಾಕಿಸ್ತಾನ ಪಂದ್ಯ

|
Google Oneindia Kannada News

ನಿರೀಕ್ಷೆಯಂತೆ ಪಾಕಿಸ್ತಾನ ತಂಡ ದುರ್ಬಲ ಹಾಂಗ್‌ಕಾಂಗ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದುರ್ಬಲ ಹಾಂಗ್‌ಕಾಂಗ್ ತಂಡವನ್ನು 155 ರನ್‌ಗಳ ಅಂತರದಿಂದ ಸೋಲಿಸಿದ ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಸೂಪರ್ 4 ಹಂತವನ್ನು ಪ್ರವೇಶಿಸಿದೆ. ಈ ಮೂಲಕ ಸೆಪ್ಟೆಂಬರ್ 4ರಂದು ಮತ್ತೆ ಭಾರತ ಪಾಕಿಸ್ತಾನ ಪಂದ್ಯ ನಡೆಯುವುದು ಖಚಿತವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹಾಂಗ್‌ ಕಾಂಗ್‌ ಪಾಕಿಸ್ತಾನ ನಾಯಕ ಬಾಬರ್ ಅಜಂರನ್ನು ಬೇಗನೇ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಮೊದಲ 10 ಓವರ್ ಗಳಲ್ಲಿ ಹಾಂಗ್‌ಕಾಂಗ್ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದರು. ಮೊದಲ 10 ಓವರ್ ಗಳಲ್ಲಿ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ ಕೇವಲ 64 ರನ್ ಗಳಿಸಿತ್ತು. ಆದರ ನಂತರ 10 ಓವರ್ ಗಳಲ್ಲಿ ಭರ್ಜರಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ 129 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.

ಪಾಂಡ್ಯ ವಿನಿಂಗ್ ಶಾಟ್; ಟಿವಿಗೆ ಮುತ್ತಿಟ್ಟ ಅಫ್ಘಾನ್ ವ್ಯಕ್ತಿ- ವಿಡಿಯೋ ವೈರಲ್ಪಾಂಡ್ಯ ವಿನಿಂಗ್ ಶಾಟ್; ಟಿವಿಗೆ ಮುತ್ತಿಟ್ಟ ಅಫ್ಘಾನ್ ವ್ಯಕ್ತಿ- ವಿಡಿಯೋ ವೈರಲ್

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಹಾಂಗ್ ಕಾಂಗ್ ತಂಡ ಯಾವ ಹಂತದಲ್ಲೂ ಪಾಕಿಸ್ತಾನ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲೇ ಇಲ್ಲ. ಕೇವಲ 10.4 ಓವರ್ ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿತು. ಹಾಂಗ್‌ಕಾಂಗ್‌ನ ಯಾವೊಬ್ಬ ಆಟಗಾರನು ಎರಡಂಕಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಂಗ್‌ ಕಾಂಗ್‌ ನಾಯಕ ನಿಜಾಕತ್ ಖಾನ್ 8 ರನ್ ಗಳಿಸಿದ್ದು ತಂಡದ ಗರಿಷ್ಠ ರನ್ ಆಗಿದೆ.

Asia Cup 2022: Pakistan Won Against Hong Kong Entered Super 4 Round Will Face India At September 4

ಪಾಕಿಸ್ತಾನದ ಪರ ಶಾದಾಬ್ ಖಾನ್ ನಾಲ್ಕು ವಿಕೆಟ್ ಗಳಿಸುವ ಮೂಲಕ ತಂಡದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಮೊಹಮ್ಮದ್ ನವಾಜ್ 3 ವಿಕೆಟ್ ಪಡೆದು ಮಿಂಚಿದರೆ. ನಸೀಮ್ ಶಾ 2 ವಿಕೆಟ್ ಪಡೆದರು.

ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಗಾಯಗೊಂಡ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ಸೆಪ್ಟೆಂಬರ್ 4ರಂದು ಭಾರತ-ಪಾಕಿಸ್ತಾನ ಪಂದ್ಯ

ಅಪರೂಪಕ್ಕೆ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ. ಆದರೆ ಈ ಬಾರಿ ಕೆಲವೇ ದಿನಗಳ ಅಂತರದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿರುವುದು ವಿಶೇಷವಾಗಿದೆ. ಏಷ್ಯಾಕಪ್‌ ಟೂರ್ನಿ ಗುಂಪು ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ರೋಚಕ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಈಗ ಭಾನುವಾರ ಮತ್ತೆ ಎರಡೂ ತಂಡಗಳ ನಡುವೆ ಸೂಪರ್ 4 ಹಂತದ ಪಂದ್ಯದಲ್ಲಿ ಜಯಕ್ಕಾಗಿ ಹೋರಾಡಲಿವೆ.

Asia Cup 2022: Pakistan Won Against Hong Kong Entered Super 4 Round Will Face India At September 4

ಸೆಪ್ಟೆಂಬರ್ 4ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ 7-30ಕ್ಕೆ ಪಂದ್ಯ ಆರಂಭವಾಗಲಿದೆ. ಡಿಸ್ನಿ ಹಾಟ್‌ಸ್ಟಾರ್ ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಣೆ ಮಾಡಬಹುದಾಗಿದೆ.

English summary
India and Pakistan are set to collide for the 2nd time in a week and will square off in the Super Four match of Asia Cup 2022. In the final league stage match, Pakistan crushed Hong Kong by a huge margin of 155 runs to set up another must-watch fixture against India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X