ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asia Cup 2022: ಸೆಪ್ಟಂಬರ್ 4ರಂದು ಮತ್ತೆ ನಡೆಯಲಿದೆ ಭಾನುವಾರ ಭಾರತ-ಪಾಕಿಸ್ತಾನ ಪಂದ್ಯ!

|
Google Oneindia Kannada News

ಏಷ್ಯಾಕಪ್ ಗುಂಪುಹಂತದ ಪಂದ್ಯಗಳು ಮುಕ್ತಾಯ ಹಂತಕ್ಕೆ ಬಂದಿದೆ. ಈಗಾಗಲೇ ಎ ಗುಂಪಿನಿಂದ ಭಾರತ ತಂಡ ಅಜೇಯವಾಗಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಹಾಂಕಾಂಗ್ ಮತ್ತು ಪಾಕಿಸ್ತಾನ ಎ ಗುಂಪಿನಲ್ಲಿರುವ ಇನ್ನೆರಡು ತಂಡಗಳಾಗಿದ್ದು ಸೆಪ್ಟೆಂಬರ್ 2ರಂದು ಶುಕ್ರವಾರ ಹಾಂಕಾಂಗ್‌-ಪಾಕಿಸ್ತಾನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಎ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ.

ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ ಅಜೇಯವಾಗಿ ಸೂಪರ್ 4 ಹಂತ ಪ್ರವೇಶಿಸಿದ ಮೊದಲನೇ ತಂಡ ಎನಿಸಿಕೊಂಡಿದ್ದು, ಸೆಪ್ಟೆಂಬರ್ 1 ರಂದು ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಶ್ರೀಲಂಕಾ ಬಿ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಸೋತ ಬಾಂಗ್ಲಾ ಟೂರ್ನಿಯಿಂದ ಹೊರಬಿದ್ದಿದೆ.

ಟಿ20 ವಿಶ್ವಕಪ್, ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಟಿ20 ವಿಶ್ವಕಪ್, ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ಈಗಾಗಲೇ ಭಾರತ-ಪಾಕಿಸ್ತಾನದ ಪಂದ್ಯವನ್ನು ಕಣ್ತುಂಬಿಕೊಂಡಿರುವ ಅಭಿಮಾನಿಗಳಿಗೆ ಸಂತಸದ ಸುದ್ದಿ ಒಂದಿದೆ. ಭಾರತ-ಪಾಕಿಸ್ತಾನ ತಂಡ ಮತ್ತೊಮ್ಮೆ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ, ಅದೂ ಕೂಡ ಸೆಪ್ಟೆಂಬರ್ 4ರಂದು ಭಾನುವಾರದ ಪಂದ್ಯದಲ್ಲಿ. ಆದರೆ, ಇದು ನಿಜವಾಗಬೇಕಾದರೆ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಬೇಕಿದೆ.

 ಭಾರತ-ಪಾಕಿಸ್ತಾನ ಮುಖಾಮುಖಿ ಬಹುತೇಕ ಖಚಿತ !

ಭಾರತ-ಪಾಕಿಸ್ತಾನ ಮುಖಾಮುಖಿ ಬಹುತೇಕ ಖಚಿತ !

ಪಾಕಿಸ್ತಾನಕ್ಕೆ ಹೋಲಿಸಿಕೊಂಡರೆ ಹಾಂಕಾಂಗ್‌ ತಂಡ ದುರ್ಬಲವಾಗಿದೆ. ಸೆಪ್ಟೆಂಬರ್ 2ರಂದು ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುವು ಸಾಧ್ಯತೆ ಹೆಚ್ಚಾಗಿರುವುದರಿಂದ ಸೂಪರ್ 4 ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ.

ಗುಂಪು ಹಂತದ ಪಂದ್ಯದಲ್ಲಿ ಭಾರತದ ವಿರುದ್ಧ ಹಾಂಕಾಂಗ್ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸೋಲನ್ನಪ್ಪಿವೆ. ಶುಕ್ರವಾರ ಗೆಲ್ಲುವ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

 ಏಷ್ಯಾಕಪ್ ಸೂಪರ್ 4 ವೇಳಾಪಟ್ಟಿ

ಏಷ್ಯಾಕಪ್ ಸೂಪರ್ 4 ವೇಳಾಪಟ್ಟಿ

ಸೆಪ್ಟೆಂಬರ್ 3ರ ಶನಿವಾರ B1 v B2 (ಅಫ್ಘಾನಿಸ್ತಾನ vs ಶ್ರೀಲಂಕಾ) ನಡುವೆ ಸೂಪರ್ 4 ಹಂತದ ಮೊದಲ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ. A1 v A2 (ಭಾರತ vs ಪಾಕಿಸ್ತಾನ/ಹಾಂಕಾಂಗ್) ಪಂದ್ಯ ಸೆಪ್ಟೆಂಬರ್ 4ರ ಭಾನುವಾರ, ದುಬೈನಲ್ಲಿ ನಡೆಯಲಿದೆ.

ಸೆಪ್ಟೆಂಬರ್ 6ರಂದು A1 v B1 (ಭಾರತ vs ಅಫ್ಘಾನಿಸ್ತಾನ) ದುಬೈನಲ್ಲಿ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 7ರಂದು A2 v B2 ( ಪಾಕಿಸ್ತಾನ/ಹಾಂಗ್ ಕಾಂಗ್ vs ಶ್ರೀಲಂಕಾ) ಪಂದ್ಯ ದುಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ 8ರಂದು A1 v B2 (ಭಾರತ vs ಶ್ರೀಲಂಕಾ) ದುಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ 9ರಂದು A2 v B1 (ಅಫ್ಘಾನಿಸ್ತಾನ vs ಪಾಕಿಸ್ತಾನ) ಪಂದ್ಯ ದುಬೈನಲ್ಲಿ ನಡೆಯಲಿದೆ.

 ಅಗ್ರ ಎರಡು ತಂಡಗಳು ಫೈನಲ್‌ಗೆ ಪ್ರವೇಶ

ಅಗ್ರ ಎರಡು ತಂಡಗಳು ಫೈನಲ್‌ಗೆ ಪ್ರವೇಶ

ಎ ಮತ್ತು ಬಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯುತ್ತವೆ. 4 ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಪರಸ್ಪರರ ವಿರುದ್ಧ ಪಂದ್ಯಗಳನ್ನಾಡುತ್ತವೆ. ಈ ಸುತ್ತಿನ ಮುಕ್ತಾಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಖಚಿತಪಡಿಸಕೊಳ್ಳುವ ತಂಡಗಳು ಫೈನಲ್ ಹಂತಕ್ಕೆ ಪ್ರವೇಶಿಸಲಿವೆ.

ಸೆಪ್ಟೆಂಬರ್ 11ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶಿಸಿ, ಇಲ್ಲು ಕೂಡ ಭಾರತ, ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಿ ಅಗ್ರ ಎರಡು ಸ್ಥಾನಗಳಲ್ಲಿದ್ದರೆ ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಅವಕಾಶ ಇದೆ.

 ಶ್ರೀಲಂಕಾ ವಿರುದ್ಧ ಸೋತ ಬಾಂಗ್ಲಾ ಏಷ್ಯಾಕಪ್‌ನಿಂದ ಹೊರಗೆ

ಶ್ರೀಲಂಕಾ ವಿರುದ್ಧ ಸೋತ ಬಾಂಗ್ಲಾ ಏಷ್ಯಾಕಪ್‌ನಿಂದ ಹೊರಗೆ

2016, 2018 ರ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದ ಬಾಂಗ್ಲಾ ತಂಡ ಈ ಬಾರಿ ಏಷ್ಯಾಕಪ್‌ನಲ್ಲಿ ಗ್ರೂಪ್ ಹಂತದಲ್ಲೇ ಮುಗ್ಗರಿಸಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲನುಭವಿಸಿದ್ದ ಬಾಂಗ್ಲಾ ಸೂಪರ್ 4 ಹಂತ ಪ್ರವೇಶಿಸಬೇಕಾದರೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾಗಿತ್ತು. ಅಫ್ಘಾನಿಸ್ತಾನದ ವಿರುದ್ಧ ಮೊದಲನೇ ಪಂದ್ಯದಲ್ಲಿ ಸೋತಿದ್ದ ಶ್ರೀಲಂಕಾಗೆ ಕೂಡ ಇದು ಮಾಡಿ ಇಲ್ಲವೇ ಮಡಿ ಪಂದ್ಯವಾಗಿತ್ತು.

ಎರಡೂ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ 184ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ ಶ್ರೀಲಂಕಾ ತಂಡ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು.

English summary
Pakistan need to beat Hong Kong on September 2 to enter the Super 4. If they do that, then Pakistan will enter the Super 4 as A2 and can meet India on September 4 at Dubai. The first-round of India vs Pakistan encounter in Asia Cup 2022 was played out on August 28 at Dubai. India won that match by 5 wickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X