ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ಕೋಚ್ ಲೈಂಗಿಕ ಕಿರುಕುಳ ಪ್ರಕರಣ; ಆಘಾತದಲ್ಲಿ ಭಾರತೀಯ ಆಟಗಾರ್ತಿಯರು

|
Google Oneindia Kannada News

ನವದೆಹಲಿ, ಜುಲೈ 6: ಭಾರತದ ಮಹಿಳಾ ಅಂಡರ್-17 ಫುಟ್ಬಾಲ್ ತಂಡದ ಸಹಾಯಕ ಕೋಚ್ ಆಗಿದ್ದ ಅಲೆಕ್ಸ್ ಆಂಬ್ರೋಸ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿತ್ತು. ಈ ಪ್ರಕರಣ ಈಗ ಭಾರತೀಯ ಫುಟ್ಬಾಲ್ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.

ಭಾರತೀಯ ಫುಟ್ಬಾಲ್ ತಂಡವೊಂದರ ಒಬ್ಬ ಕೋಚ್ ಅನ್ನು ವಜಾಗೊಳಿಸಿರುವುದಾಗಿ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) ಜೂನ್ 30ರಂದು ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ, ಯಾವ ವ್ಯಕ್ತಿ ಎಂದು ಹೆಸರು ತಿಳಿಸಿರಲಿಲ್ಲ. ಎರಡು ದಿನಗಳ ಹಿಂದೆ ಅಲೆಕ್ಸ್ ಆಂಬ್ರೋಸ್ ಹೆಸರನ್ನು ಬಹಿರಂಗಪಡಿಸಿತ್ತು.

ಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿ

"ಅಂಡರ್-17 ಮಹಿಳಾ ತಂಡದ ಸಹಾಯಕ ಮುಖ್ಯ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ಕಿರುಕುಳ ಕಾರಣಕ್ಕೆ ವಜಾಗೊಳಿಸಲಾಗಿದೆ. ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಡಾ. ಎಸ್ ವೈ ಖುರೇಷಿ ಇದೇ ಭಾನುವಾರದಂದು ಟ್ವೀಟ್ ಮಾಡಿದ್ದರು. ಖುರೇಷಿ ಅವರು ಎಐಎಫ್‌ಎಫ್‌ ನಿರ್ವಹಣೆಗೆಂದು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಆಡಳಿತಗಾರರ ಮಂಡಳಿಯ ಒಬ್ಬ ಸದಸ್ಯರಾಗಿದ್ದಾರೆ.

ಮುಂಬೈನ 39 ವರ್ಷದ ಅಲೆಕ್ಸ್ ಆಂಬ್ರೋಸ್ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಯುತ್ತಿದೆ.

24 ಗಂಟೆ ಮ್ಯಾರಥಾನ್ ಓಟ: ಭಾರತ ತಂಡಗಳಿಗೆ ಚಿನ್ನ ಮತ್ತು ಬೆಳ್ಳಿ24 ಗಂಟೆ ಮ್ಯಾರಥಾನ್ ಓಟ: ಭಾರತ ತಂಡಗಳಿಗೆ ಚಿನ್ನ ಮತ್ತು ಬೆಳ್ಳಿ

ವಿಚಾರಣೆಗೆ ಹಾಜರಾಗದ ಆಂಬ್ರೋಸ್

ವಿಚಾರಣೆಗೆ ಹಾಜರಾಗದ ಆಂಬ್ರೋಸ್

ಎಐಎಫ್‌ಎಫ್‌ನ ಆಂತರಿಕ ದೂರುಗಳ ಸಮಿತಿ ಮುಂದೆ ವಿಚಾರಣೆಗೆ ಸೋಮವಾರ (ಜುಲೈ ೧೧) ಹಾಜರಾಗುವಂತೆ ಅಲೆಕ್ಸ್ ಆಂಬ್ರೋಸ್‌ಗೆ ನೋಟೀಸ್ ನೀಡಲಾಗಿತ್ತು. ಅದರೆ, ಇಷ್ಟು ಕಿರು ಅವಧಿಯಲ್ಲಿ ತಾನು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಅಲೆಕ್ಸ್ ಹೇಳಿದ್ದಾರೆನ್ನಲಾಗಿದೆ.

ತಾನು ಗೋವಾದಲ್ಲಿದ್ದೇನೆ. ಎಐಎಫ್‌ಎಫ್ ಕಚೇರಿ ಇರುವುದು ದೆಹಲಿಯಲ್ಲಿ. ತಾನು ಅಲ್ಲಿ ಬರಬೇಕೆಂದರೆ ಟ್ರೈನ್ ಟಿಕೆಟ್ ಬುಕ್ ಮಾಡಬೇಕು. ಜುಲೈ 10 ಅಥವಾ 11ಕ್ಕೆ ತನಗೆ ದೆಹಲಿಗೆ ಬರಲು ಆಗುವುದಿಲ್ಲ ಎಂದು ಅಲೆಕ್ಸ್ ಆಂಬ್ರೋಸ್ ತಿಳಿಸಿದ್ದಾರೆ.

ಆಂಬ್ರೋಸ್ ಗೈರುಹಾಜರಿಯಲ್ಲೂ ಫುಟ್ಬಾಲ್ ಸಂಸ್ಥೆಯ ಆಂತರಿಕ ದೂರುಗಳ ಸಮಿತಿ ಸಭೆ ನಡೆಸಿತು. ಯೂರೋಪ್ ಪ್ರವಾಸದಲ್ಲಿ ಅಂಡರ್-17 ಮಹಿಳಾ ತಂಡದ ಜೊತೆ ಇದ್ದ ಕೋಚ್ ಥಾಮಸ್ ಡೆನ್ನರ್‌ಬಿ, ತಂಡದ ಮ್ಯಾನೇಜರ್ ಮತ್ತು ತಂಡದ ಸೈಕಾಲಜಿಸ್ಟ್ ಈ ಮೂವರು ಸಲ್ಲಿಸಿದ್ದ ವರದಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಇದಾದ ಬಳಿಕ ಸಮಿತಿ ನೀಡುವ ವರದಿ ಆಧರಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಾಧಾರಣ ಪ್ರಕರಣವಲ್ಲ

ಸಾಧಾರಣ ಪ್ರಕರಣವಲ್ಲ

ಅಂಡರ್-17 ಎಂದರೆ ಅದು ಅಪ್ರಾಪ್ತ ವಯೋಮಾನ. ಇವರ ವಿರುದ್ಧ ಕಿರುಕುಳ ಬಂದಿರುವುದರಿಂದ ಪೋಕ್ಸೋ ಕಾಯ್ದೆ ಅನ್ವಯ ಆಗುವ ಸಾಧ್ಯತೆ ಇದೆ. ಇದು ಕೇವಲ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಮಾತ್ರವಲ್ಲ ತಂಡದ ಜೊತೆ ಇದ್ದ ಎಲ್ಲಾ ಸಿಬ್ಬಂದಿ ವರ್ಗದವರು ಹಾಗು ಅಂತಿಮವಾಗಿ ಫುಟ್ಬಾಲ್ ಸಂಸ್ಥೆ ಕೂಡ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಈಗ ಈ ಘಟನೆ ಬಗ್ಗೆ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸುವುದು ಅನಿವಾರ್ಯ. ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಲಿದೆ. ಈಗ ಎಐಎಫ್‌ಎಫ್‌ನಿಂದ ನಡೆಯುತ್ತಿರುವ ಆಂತರಿಕ ತನಿಖೆ ಜೊತೆಗೆ ಪೊಲೀಸ್ ತನಿಖೆಯೂ ಪ್ರತ್ಯೇಕವಾಗಿ ನಡೆಯಲಿದೆ. ಒಂದು ವೇಳೆ, ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಗೊತ್ತಿದ್ದೂ ಯಾರಾದರೂ ಸುಮ್ಮನಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವ ಸಂಭವ ಇರುತ್ತದೆ.

ಅಲೆಕ್ಸ್ ಆಂಬ್ರೋಸ್ ಸಾಧಾರಣನಲ್ಲ

ಅಲೆಕ್ಸ್ ಆಂಬ್ರೋಸ್ ಸಾಧಾರಣನಲ್ಲ

39 ವರ್ಷದ ಅಲೆಕ್ಸ್ ಆಂಬ್ರೋಸ್ ಭಾರತದ 17 ವರ್ಷ ವಯೋಮಾನದೊಳಗಿನ ಮಹಿಳಾ ಫುಟ್ಬಾಲ್ ತಂಡದ ಸಹಾಯಕ ಕೋಚ್ ಮಾತ್ರವಲ್ಲ, ಅಂಡರ್-15 ಮತ್ತು ಅಂಡರ್-18 ತಂಡದ ಮುಖ್ಯ ಕೋಚ್ ಆಗಿಯೂ ಇದ್ದರು. ಅಲ್ಲದೇ ಎಐಎಫ್‌ಎಫ್‌ನ ಸ್ಕೌಟಿಂಗ್ ಮುಖ್ಯಸ್ಥರೂ ಅಗಿದ್ದಾರೆ. ಮುಂಬೈನ ಹಲವು ಶಾಲೆಗಳ ಫುಟ್ಬಾಲ್ ಕೋಚಿಂಗ್ ಘಟಕಗಳೊಂದಿಗೆ ಅವರು ಜೋಡಿತರಾಗಿದ್ದಾರೆ. ಯುಎಇಯ ಕೋಚಿಂಗ್ ಸೆಂಟರ್ ಜೊತೆಯೂ ಅವರ ಸಹಭಾಗಿತ್ವ ಇದೆ. ಇಷ್ಟೆಲ್ಲಾ ಸ್ಥಾನಗಳನ್ನು ಹೊಂದಿರುವ ಅಲೆಕ್ಸ್ ಆಂಬ್ರೋಸ್ ಬಹಳ ಪ್ರಭಾವಿ ಎಂಬುದರಲ್ಲಿ ಸಂಶಯ ಇಲ್ಲ.

ಒಂದು ವೇಳೆ, ಅಲೆಕ್ಸ್ ಆಂಬ್ರೋಸ್ ತಪ್ಪು ಮಾಡಿರುವುದು ಹೌದಾದರೆ ಜೈಲು ಶಿಕ್ಷೆಯ ಜೊತೆಗೆ ಅವರ ಫುಟ್ಬಾಲ್ ಲೈಸೆನ್ಸ್ ರದ್ದಾಗಬಹುದು. ಭಾರತ ಮಾತ್ರವಲ್ಲ ವಿಶ್ವದ ಬೇರೆಲ್ಲೂ ಕೋಚ್ ಆಗದಂತೆ ನಿಷೇಧಿಸಬೇಕೆಂದು ಫೀಫಾಗೆ ಭಾರತ ಮನವಿ ಮಾಡುವ ಸಾಧ್ಯತೆ ಇದೆ.

ಆಟಗಾರ್ತಿಯರು ಕಂಗಾಲು

ಆಟಗಾರ್ತಿಯರು ಕಂಗಾಲು

ಭಾರತದ ಅಂಡರ್-17 ಮಹಿಳಾ ತಂಡದ ಆಟಗಾರ್ತಿಯರು ಹೆಚ್ಚೂಕಡಿಮೆ ಒಂದು ವರ್ಷ ಕಾಲ ಅಲೆಕ್ಸ್ ಆಂಬ್ರೋಸ್ ಜೊತೆ ತರಬೇತಿ ಪಡೆದಿದ್ದಾರೆ. ಅಂಡರ್-17 ವಿಶ್ವಕಪ್ ನಡೆಯಲು ಮೂರು ತಿಂಗಳು ಇರುವಂತೆಯೇ ತಮ್ಮ ಕೋಚಿಂಗ್ ಸಿಬ್ಬಂದಿಯೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿಬಂದಿರುವುದು ಆಟಗಾರ್ತಿಯರ ಮಾನಸಿಕ ಜಂಘಾಬಲವನ್ನೇ ಉಡುಗಿಸಿದಂತಾಗಿದೆ. ಇದು ವಿಶ್ವಕಪ್ ಪಂದ್ಯಗಳಲ್ಲಿ ಅವರ ಪ್ರದರ್ಶನದ ಮೇಲೆ ನೇರ ಪರಿಣಾಮ ಬಿದ್ದರೂ ಬೀಳಬಹುದು.

"ಆಟಗಾರ್ತಿಯರ ಮಾನಸಿಕ ಸ್ಥಿತಿಯನ್ನು ಅವಲೋಕಿಸಬೇಕು. ಇಂಥ ಘಟನೆಗಳು ಅಪರಿಮಿತ ಒತ್ತಡ ಉಂಟು ಮಾಡುತ್ತವೆ. ಪ್ಯಾನಿಕ್ ಅಟ್ಯಾಕ್ ಇತ್ಯಾದಿ ಸಮಸ್ಯೆಗಳು ಹುಡುಗಿಯರನ್ನು ಕಾಡಬಹುದು. ಹೀಗಾದರೆ, ಅವರ ಫುಟ್ಬಾಲ್ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ" ಎಂದು ಮನಃಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ಧಾರೆ.

ಆಟಗಾರರ ಆಕ್ರೋಶ

ಫುಟ್ಬಾಲ್ ಅಸಿಸ್ಟೆಂಟ್ ಕೋಚ್‌ನಿಂದ ಲೈಂಗಿಕ ಕಿರುಕುಳವಾದ ಘಟನೆ ಬಗ್ಗೆ ಆಟಗಾರರು ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಆಟಗಾರರಾದ ಗುರಪ್ರೀತ್ ಸಿಂಗ್ ಸಂಧು, ಸುರೇಶ್ ವಾಂಗ್‌ಜಮ್ ಮೊದಲಾದವರು ಘಟನೆಯನ್ನು ಖಂಡಿಸಿದ್ದಾರೆ.

"ದೇಶದಲ್ಲಿ ಮಹಿಳಾ ಫುಟ್ಬಾಲ್ ಪರ ನನ್ನ ಕೈಲಾದಷ್ಟು ಧ್ವನಿ ಕೊಟ್ಟಿದ್ದೇನೆ. ಆದರೆ, ಈ ಘಟನೆ ನಡೆದಿರುವುದನ್ನು ನೋಡಿದಾಗ ನಾವೆಲ್ಲರೂ ಮಾಡುತ್ತಿರುವುದು ಸಾಲಲ್ಲ ಎನಿಸುತ್ತದೆ. ಲೈಂಗಿಕ ದುರ್ವರ್ತನೆಗಳಿಗೆ ನಮ್ಮ ಸಮಾಜದಲ್ಲೇ ಅವಕಾಶ ಇರಬಾರದು" ಎಂದು ಟೀಮ್ ಇಂಡಿಯಾದ ಗೋಲ್‌ಕೀಪರ್ ಕೂಡ ಆಗಿರುವ ಗುರ್‌ಪ್ರೀತ್ ಸಿಂಗ್ ಸಂಧು ಹೇಳಿದ್ದಾರೆ.

ಮತ್ತೊಬ್ಬ ಬಿಎಫ್‌ಸಿ ಅಟಗಾರ ಸುರೇಶ್ ವಾಂಗ್‌ಜಾಮ್ ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೆಂದು ಆಶಿಸಿದ್ದಾರೆ.

"ಸುರಕ್ಷಿತ ವ್ಯವಸ್ಥೆಯೇ ಇಲ್ಲದಿರುವಾಗ ವೃತ್ತಿಪರವಾಗಿ ಫುಟ್ಬಾಲ್ ಆಟವನ್ನು ಆಯ್ಕೆ ಮಾಡಿಕೊಳ್ಳಲು ಹುಡುಗಿಯರಿಗೆ ಅಥವಾ ಪೋಷಕರಿಗೆ ಧೈರ್ಯ ಇರುತ್ತದಾ?" ಎಂದು ಸುರೇಶ್ ವಾಂಗ್‌ಜಾಮ್ ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Criminal proceedings against Indian coach Alex Ambrose have started after he was sacked facing sexual harassment on a player.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X