ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಪ್ರಸಾರ ಹಕ್ಕಿಗೆ ಎಗ್ಗಿಲ್ಲದ ಪೈಪೋಟಿ; ಒಂದು ಪಂದ್ಯಕ್ಕೆ ಮುಟ್ಟಿತು ನೂರು ಕೋಟಿ ಬೆಲೆ

|
Google Oneindia Kannada News

ಬೆಂಗಳೂರು, ಜೂನ್ 12: ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾ ಟೂರ್ನಿಗಳಲ್ಲಿ ಒಂದೆನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಿರೀಕ್ಷೆಗೆ ತಕ್ಕಂತೆ ಅದರ ಪ್ರಸಾರ ಹಕ್ಕುಗಳಿಗೆ ವಿಪರೀತ ಪೈಪೋಟಿ ನಡೆದಿದೆ. ಬಿಡ್ಡಿಂಗ್ ಪ್ರಕ್ರಿಯೆಯಿಂದ ಅಮೆಜಾನ್ ಹೊರಬಂದರೂ ಬೇರೆ ಕಂಪನಿಗಳಿಂದ ಬಿಡ್ಡಿಂಗ್ ಪೈಪೋಟಿ ಕಡಿಮೆಗೊಂಡಿಲ್ಲ. 2023ರಿಂದ ಐದು ವರ್ಷಗಳ ಅವಧಿಯವರೆಗೆ ಐಪಿಎಲ್ ಟೂರ್ನಿಯ ಪಂದ್ಯಗಳ ಪ್ರಸಾರ ಹಕ್ಕಿಗಾಗಿ ನಡೆದ ಇ-ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನವೇ 43 ಸಾವಿರಕ್ಕೂ ಹೆಚ್ಚು ರೂ ಮೊತ್ತದ ಬಿಡ್ಡಿಂಗ್ ನಡೆದಿರುವುದು ತಿಳಿದುಬಂದಿದೆ.

ಟಿವಿ ಪ್ರಸಾರ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳಿಗೆ ಹರಾಜು ನಡೆಯುತ್ತಿದೆ. ನಾಳೆ ಸೋಮವಾರ ಅಥವಾ ಮಂಗಳವಾರದೊಳಗೆ ಅಂತಿಮಗೊಳ್ಳಲಿದೆ. ಈಗ ನಡೆದಿರುವ ಬಿಡ್ಡಿಂಗ್‌ನ ಮೌಲ್ಯ ಗಣಿಸಿದರೆ ಒಂದು ಪಂದ್ಯದ ಪ್ರಸಾರ ಹಕ್ಕಿಗೆ 100 ಕೋಟಿ ರೂಗಿಂತಲೂ ಹೆಚ್ಚು ಬೆಲೆ ಸಿಕ್ಕಿದಂತಿದೆ. ಐದು ವರ್ಷಗಳ ಒಟ್ಟಾರೆ ಐಪಿಎಲ್ ಪ್ರಸಾರ ಹಕ್ಕುಗಳ ಮಾರಾಟದಿಂದ ಬಿಸಿಸಿಐಗೆ 50 ಸಾವಿರ ಕೋಟಿ ರೂಗಿಂತಲೂ ಹೆಚ್ಚು ಮೊತ್ತ ಸಿಗುವ ಸಾಧ್ಯತೆ ಇದೆ.

ಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಿಂದ ಅಮೆಜಾನ್ ಹೊರಕ್ಕೆಐಪಿಎಲ್ ಪ್ರಸಾರ ಹಕ್ಕು ಬಿಡ್ಡಿಂಗ್‌ನಿಂದ ಅಮೆಜಾನ್ ಹೊರಕ್ಕೆ

ಐಪಿಎಲ್ ಪ್ರಸಾರ ಹಕ್ಕಿಗೆ ಏಳು ಕಂಪನಿಗಳು ಬಿಡ್ಡಿಂಗ್ ನಡೆಸಿವೆ. ಇಂದು ಭಾನುವಾರಂದು ವಯಾಕಾಮ್18 (ರಿಲಾಯನ್ಸ್ ಗ್ರೂಪ್‌ನ ಕಂಪನಿ), ಡಿಸ್ನೀ ಹಾಟ್‌ಸ್ಟಾರ್, ಸೋನಿ ಮತ್ತು ಝೀ ಕಂಪನಿಗಳು ಏಳು ಗಂಟೆ ಕಾಲ ಹರಾಜಿನಲ್ಲಿ ಪೈಪೋಟಿಗಿಳಿದಿದ್ದವು.

Aggressive Bidding on First Day of IPL Media Rights Auction Indicates New Record

ನಾಲ್ಕು ಪ್ಯಾಕೇಜ್‌ಗಳು:
ಹರಾಜಿನಲ್ಲಿ ನಾಲ್ಕು ಪ್ಯಾಕೇಜ್‌ಗಳಿವೆ. ಎ ಪ್ಯಾಕೇಜ್‌ನಲ್ಲಿ ಭಾರತದಲ್ಲಿ ಐಪಿಎಲ್ ಪಂದ್ಯಗಳ ಟವಿ ಪ್ರಸಾರದ ಹಕ್ಕು ಇದೆ. ಬಿ ಪ್ಯಾಕೇಜ್‌ನಲ್ಲಿ ಭಾರತದಲ್ಲಿ ಐಪಿಎಲ್ ಪಂದ್ಯಗಳ ಡಿಜಿಟಲ್ ಹಕ್ಕು ಇದೆ. ಸಿ ಪ್ಯಾಕೇಜ್‌ನಲ್ಲಿ ಕೆಲ ಆಯ್ದ ಪಂದ್ಯಗಳಿಗೆ ನಿರ್ದಿಷ್ಟ ಡಿಜಿಟಲ್ ಹಕ್ಕುಗಳನ್ನು ನೀಡಲಾಗುತ್ತದೆ. ಇನ್ನು, ಡಿ ಪ್ಯಾಕೇಜ್‌ನಲ್ಲಿ ವಿದೇಶಗಳಲ್ಲಿ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕು ಇರುತ್ತದೆ.

ಈಗ ಎ ಮತ್ತು ಬಿ ಪ್ಯಾಕೇಜ್‌ಗಳಿಗೆ ಇನ್ನಿಲ್ಲದ ಪೈಪೋಟಿ ಇದೆ. ಒಂದು ಪಂದ್ಯದ ಟಿವಿ ಪ್ರಸಾರದ ಹಕ್ಕಿಗೆ ಮೂಲ ಬೆಲೆಯಾಗಿ 49 ಕೋಟಿ ಇದ್ದರೂ ಸಂಜೆಯ ವೇಳೆಗೆ ಅದು 57 ಕೋಟಿ ರೂಪಾಯಿಗೆ ಏರಿದೆ. ಇನ್ನು, ಬಿ ಪ್ಯಾಕೇಜ್‌ನಲ್ಲಿ ಒಂದು ಪಂದ್ಯದ ಡಿಜಿಟಲ್ ಹಕ್ಕಿಗೆ ಮೂಲ ಬೆಲೆ 33 ಕೋಟಿ ರೂ ಇತ್ತು. ಅದು 48 ಕೋಟಿ ರೂಪಾಯಿಗೆ ಏರಿದೆ. ನಾಳೆ ಸೋಮವಾರವೂ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ಇನ್ನೂ ಹೆಚ್ಚಿನ ಮೊತ್ತಕ್ಕೆ ಬಿಡ್ಡಿಂಗ್ ನಡೆಯುವ ಸಾಧ್ಯತೆ ಇದೆ.

ಎ ಮತ್ತು ಬಿ ಎರಡೂ ಪ್ಯಾಕೇಜ್ ಸೇರಿ ಕಳೆದ ಬಾರಿ ಒಂದು ಪಂದ್ಯಕ್ಕೆ 54 ಕೋಟಿ ರೂಪಾಯಿಯಂತೆ ಹಕ್ಕು ಮಾರಾಟವಾಗಿತ್ತು. ಈಗ ಅದು ನೂರು ಕೋಟಿ ರೂ ದಾಟಿ ಹೋಗಿದೆ. ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಷ್ಟರ ಮಟ್ಟಕ್ಕೆ ಹರಾಜು ನಡೆಯುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆ

ಟಿವಿ ಪ್ರಸಾರ ಹಕ್ಕಿಗೆ ಇರುವ ಎ ಪ್ಯಾಕೇಜ್‌ಗೆ ಭಾನುವಾರ ನಡೆದ ಬಿಡ್ಡಿಂಗ್ ಮೊತ್ತ 23,370 ಕೋಟಿ ರೂ ಮುಟ್ಟಿದೆ. ಇನ್ನು ಡಿಜಿಟಲ್ ಹಕ್ಕಿಗೆ ಬಿಡ್ಡಿಂಗ್ 19,680 ಕೋಟಿ ರೂ ಆಗಿದೆ.

ಶ್ರೀಮಂತಿಕೆಯಲ್ಲಿ ಐಪಿಎಲ್‌ಗೆ ಐಪಿಎಲ್ ಸಾಟಿ:
ವಿಶ್ವದ ಯಾವುದೇ ಕ್ರೀಡೆಯಲ್ಲೂ ಪ್ರಸಾರ ಹಕ್ಕಿಗೆ ಈ ಮಟ್ಟದ ಪೈಪೋಟಿ ಇರುವುದು ಅಪರೂಪ ಎನ್ನುತ್ತಾರೆ ತಜ್ಞರು. ಸ್ಟಾರ್ ಮತ್ತು ರಿಲಾಯನ್ಸ್ ನಡುವೆ ಎ ಮತ್ತು ಬಿ ಪ್ಯಾಕೇಜ್‌ಗೆ ತೀವ್ರ ಪೈಪೋಟಿ ಇದೆ. ಸೋನಿ ಮತ್ತು ಝೀ ಟಿವಿಗಳೂ ಸಿ ಮತ್ತು ಡಿ ಪ್ಯಾಕೇಜ್‌ಗಳ ಮೇಲೆ ಗಮನ ನೆಟ್ಟಿವೆ. ಝೀ ಟಿವಿ ವಿದೇಶಗಳಲ್ಲಿ ಸಾಕಷ್ಟು ವೀಕ್ಷಕರ ಬಳಗ ಹೊಂದಿದೆ. ಹೀಗಾಗಿ ಅದು ಡಿ ಪ್ಯಾಕೇಜ್ ಪಡೆಯಲು ಮುಂದಾಗಬಹುದು ಎನ್ನಲಾಗಿದೆ.

Aggressive Bidding on First Day of IPL Media Rights Auction Indicates New Record

Recommended Video

Justin Bieber ಗೆ ಬಂದಿರೋ ಕಾಯಿಲೆಯನ್ನು ಭಾರತಕ್ಕೆ ಹೋಲಿಸಿದ ಕಾಮಿಡಿಯನ್ ಮುನಾವರ್ ಫಾರೂಕಿ | Oneindia Kannada

2017-2022ರ ಅವಧಿಯಲ್ಲಿ ಐಪಿಎಲ್ ಮೀಡಿಯಾ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದಿತ್ತು. ಅದು 16 ಸಾವಿರ ಕೋಟಿ ರೂಗಿಂತಲೂ ಹೆಚ್ಚು ಮೊತ್ತದ ಬಿಡ್ ಮಾಡಿ ಹಕ್ಕು ಸಂಪಾದಿಸಿತ್ತು. ಟಿವಿ ಮತ್ತು ಡಿಜಿಟಲ್ ಎರಡೂ ಸೇರಿ ಹಕ್ಕನ್ನು ಪಡೆದಿತ್ತು. ಒಂದು ಪಂದ್ಯಕ್ಕೆ ಬಂದ ಮೌಲ್ಯ 55 ಕೋಟಿ ರೂ ಆಗಿತ್ತು. ಈ ಬಾರಿ ಮೊದಲ ದಿನದ ಹರಾಜು ಪ್ರಕ್ರಿಯೆ ಗಮನಿಸಿದರೆ ಇದು 105 ರೂ ದಾಟಿ ಹೋಗಿದೆ.

ಇನ್ನು, 2008ರಲ್ಲಿ ಸೋನಿ ಸಂಸ್ಥೆ 10 ವರ್ಷಗಳ ಅವಧಿಗೆ 8200 ಕೋಟಿ ರೂಪಾಯಿಗೆ ಐಪಿಎಲ್ ಪ್ರಸಾರ ಹಕ್ಕು ಗೆದ್ದಿತ್ತು. ಐಪಿಎಲ್ ಟೂರ್ನಿಯ ಆರಂಭದಲ್ಲಿ ಇದ್ದ ಬೆಲೆಗಿಂತ ಈಗ ಆರೇಳು ಪಟ್ಟು ಹೆಚ್ಚಾಗಿರುವುದನ್ನು ಗಮನಿಸಬಹುದು. ಐಪಿಎಲ್ ಮಾಧ್ಯಮ ಹಕ್ಕಿಗಾಗಿ ಇ-ಹರಾಜು ಸೋಮವಾರ ಅಥವಾ ಮಂಗಳವಾರದವರೆಗೂ ಮುಂದುವರಿಯಬಹುದು.

(ಒನ್ಇಂಡಿಯಾ ಸುದ್ದಿ)

English summary
IPL media rights auction on First day saw aggressive bidding for TV and digital rights of the Indian sub-continent with the combined valuation per match is at whopping Rs 105 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X