ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು-13 ಬ್ಯಾಡ್ಮಿಂಟನ್‌ನಲ್ಲಿ ಶೇ.60ರಷ್ಟು ಆಟಗಾರರು ವಯಸ್ಸಾದವರೇ!

|
Google Oneindia Kannada News

ಹೈದ್ರಾಬಾದ್, ಜೂನ್ 26: ಹೈದರಾಬಾದ್‌ನಲ್ಲಿ ಶನಿವಾರ ಮುಕ್ತಾಯಗೊಂಡ ಯೋನೆಕ್ಸ್-ಸನ್‌ರೈಸ್ ಆಲ್-ಇಂಡಿಯಾ ಸಬ್-ಜೂನಿಯರ್ U-13ರ ಶ್ರೇಣಿಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರೀಡೆಗಳ ವಯೋಮಾನದ ವಂಚನೆಯು ಮತ್ತೊಮ್ಮೆ ಸುದ್ದಿ ಆಗಿದೆ.

"ಅನೇಕ ಆಟಗಾರರು ನಿಗದಿತ ವಯೋಮಾನಕ್ಕಿಂತ ಹೆಚ್ಚು ವಯಸ್ಸಿನವರೇ ಆಗಿದ್ದರು, ಆದರೆ ಗರಿಷ್ಠ 6 ತಿಂಗಳು ಹೆಚ್ಚು ವಯಸ್ಸಿನವರಾಗಿದ್ದರು. ಹೀಗೆ ಭಾಗವಹಿಸಿದವರಲ್ಲಿ ಶೇ.60ರಷ್ಟು ಮಂದಿ ಹೆಚ್ಚು ವಯಸ್ಸಾದವರೇ," ಎಂದು ಖೇಲೋ ಇಂಡಿಯಾ ಮಾನ್ಯತೆ ಪಡೆದ ಅಕಾಡೆಮಿಯ ತರಬೇತುದಾರರು ಆರೋಪಿಸಿದ್ದಾರೆ.

ಬ್ಯಾಡ್ಮಿಂಟನ್‌: ನಿವೃತ್ತಿ ಘೋಷಿಸಿದ CWG ಕಂಚು ಪದಕ ವಿಜೇತ ಗುರುಸಾಯಿದತ್ ಬ್ಯಾಡ್ಮಿಂಟನ್‌: ನಿವೃತ್ತಿ ಘೋಷಿಸಿದ CWG ಕಂಚು ಪದಕ ವಿಜೇತ ಗುರುಸಾಯಿದತ್

ವಯೋಮಾನದ ವಂಚನೆ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ ಎಂದು ತರಬೇತುದಾರರು ಆರೋಪಿಸಿದ್ದಾರೆ. ಬಹುಶಃ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಬ್ಯಾಡ್ಮಿಂಟನ್ ಹೊಸ ತಿರುವು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

 Age Fraud Allegation: 60 Percent Participants Are Overage in U-13 Badminton

ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ ಆಟ: "ಸಹಜವಾಗಿ ಜನನ ಪ್ರಮಾಣಪತ್ರ ಫಡ್ಜಿಂಗ್ ಇದೆ, ಆದರೆ ಅನೇಕರು ಜನನ ಪ್ರಮಾಣಪತ್ರಕ್ಕಿಂತ ಹೆಚ್ಚಾಗಿ ವೈದ್ಯಕೀಯ ಪ್ರಮಾಣಪತ್ರವನ್ನು (BAI) ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾಗೆ ಸಲ್ಲಿಸಿದ ನಂತರ ಆಡುತ್ತಿದ್ದಾರೆ," ಎಂದು ಕೋಚ್ ಹೇಳಿದ್ದಾರೆ.

ನಿಯಮಗಳ ಪ್ರಕಾರ, ಆಟಗಾರನು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದರೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ ನೋಂದಣಿ ಮಾಡಿದ ನಂತರ ಅಧಿಕೃತ ಜನ್ಮ ಪ್ರಮಾಣಪತ್ರವನ್ನು ಸಲ್ಲಿಸದೆ ಒಂದು ವರ್ಷ ಆಡಬಹುದು. ವಯಸ್ಸಿನ ದೃಢೀಕರಣಕ್ಕಾಗಿ ವೈದ್ಯಕೀಯ ಪ್ರಮಾಣಪತ್ರವು ತಪ್ಪಾಗಿದೆ ಎಂಬುದು ಸಾಬೀತಾಗಿದೆ.

ಈ ಆರೋಪದ ಹಿನ್ನೆಲೆ ವಯೋಮಾನ ವಂಚನೆ ಸಮಿತಿಯ ಸದಸ್ಯ ಸಂದೀಪ್ ಹೆಬ್ಳೆ ಅವರು ರಾಷ್ಟ್ರೀಯ ಒಕ್ಕೂಟದ ಉನ್ನತ ಅಧಿಕಾರಿಗಳಿಗೆ ಪತ್ರವನ್ನು ಕಳುಹಿಸುವುದರೊಂದಿಗೆ ವಿಷಯವನ್ನು ಬಿಎಐಗೆ ವಿಸ್ತರಿಸಲಾಗಿದೆ. "ಈ ಪತ್ರವನ್ನು ಈಗಾಗಲೇ BAI ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಇದು ವ್ಯವಸ್ಥೆಯಲ್ಲಿನ ಉನ್ನತ ಅಧಿಕಾರಿಗಳ ಬೆಂಬಲದೊಂದಿಗೆ ನಡೆಯುತ್ತಿದೆ. ಇದು ಅನೇಕ ಅಕಾಡೆಮಿಗಳು ಮತ್ತು ರಾಜ್ಯ ಸಂಘಗಳು ಪ್ರಚಾರ ಮಾಡುವ ದಂಧೆಯಾಗಿದೆ," ಎಂದು ಅವರು ಆರೋಪಿಸಿದರು.

Recommended Video

ದುರ್ಗಾ ದೇವಿಯ ಹರಕೆಯ ಕೋಣ ಕೊಡ್ತಿರೋ ಕಾಟದಿಂದ ಇವ್ರಿಬ್ಬರಿಗೆ ಯಾವಾಗ ಮುಕ್ತಿ.. | *Viral | OneIndia Kannada

ವಯಸ್ಸಿನ ವಂಚನೆ ಸಮಿತಿಯು ಪ್ರಸ್ತುತ ಸಮಸ್ಯೆಗೆ ಪರಿಹಾರಗಳನ್ನು ಹುಡುಕುತ್ತಿದೆ. ಅವುಗಳಲ್ಲಿ ನಮೂದುಗಳನ್ನು ಪರಿಶೀಲಿಸಲು ಪಂದ್ಯಾವಳಿಯ ಸ್ಥಳಗಳಲ್ಲಿ ಪ್ಯಾನಲ್ ಸದಸ್ಯರನ್ನು ಹೊಂದಿರುವುದು ಸಹ ಒಂದಾಗಿದೆ. "ನಾವು ಪೋಷಕರು ಮತ್ತು ಆಟಗಾರರಿಂದ ದಾಖಲೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು BAI ತನಿಖೆಯಲ್ಲಿ ಯಾವುದೇ ಸಮಸ್ಯೆಗಳ ಪುರಾವೆಗಳನ್ನು ನಾವು ಕಂಡುಕೊಂಡರೆ, BAI ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳುತ್ತದೆ. ನಾವು ಕೆಲವು ಆಟಗಾರರ ವಿರುದ್ಧ ಕೆಲವು ಸಾಕ್ಷ್ಯಗಳನ್ನು ಪಡೆಯುತ್ತಿದ್ದೇವೆ," ಎಂದು ಮಿಶ್ರಾ ದೃಢಪಡಿಸಿದರು.

English summary
Age fraud allegation: 60 percent participants are overage in U-13 badminton.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X