ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಿಂದ ಗುಣಮುಖ, ನೆಟ್ ಪ್ರಾಕ್ಟೀಸ್ ಆರಂಭಿಸಿದ ರೋಹಿತ್ ಶರ್ಮಾ

|
Google Oneindia Kannada News

ಮುಂಬೈ, ಜುಲೈ 04; ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ. ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಕೋವಿಡ್‌ನಿಂದ ಗುಣಮುಖರಾಗಿದ್ದು, ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ.

35 ವರ್ಷದ ರೋಹಿತ್ ಶರ್ಮಾಗೆ ಅಭ್ಯಾಸ ಪಂದ್ಯದ ಬಳಿಕ ಆಂಟಿಜೆನ್ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ಸೋಂಕು ಪತ್ತೆಯಾದ ಕಾರಣ ಅವರು ಕ್ವಾರಂಟೈನ್ ಆಗಿದ್ದರು.

ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ಹೊಗಳಿದ ಪಿಎಂ ಮೋದಿ!ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ಹೊಗಳಿದ ಪಿಎಂ ಮೋದಿ!

ಇಂಗ್ಲೆಡ್ ವಿರುದ್ಧ ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೋವಿಡ್ ಸೋಂಕು ತಗುಲಿದ ಕಾರಣ ಅವರು ತಂಡದಿಂದ ಹೊರಗುಳಿದರು.

1983 World Cup : ಭಾರತೀಯ ಕ್ರಿಕೆಟ್ ತಂಡದ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 39 ವರ್ಷ1983 World Cup : ಭಾರತೀಯ ಕ್ರಿಕೆಟ್ ತಂಡದ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 39 ವರ್ಷ

After Recovering From COVID Captain Rohit Sharma Starts Net Practice

ರೋಹಿತ್ ಶರ್ಮಾ ಜೊತೆಗೆ ಅಭ್ಯಾಸದಲ್ಲಿ ತೊಡಗಿದ್ದ ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್ ಸಹ ತಂಡದಿಂದ ಹೊರಗುಳಿದಿದ್ದರು. ಜುಲೈ 7ರಂದು ನಡೆಯಲಿರುವ ಇಂಗ್ಲೆಡ್ ವಿರುದ್ಧದ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತImran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತ

ಮೊದಲ ಟಿ20 ಪಂದ್ಯಕ್ಕೆ ತಂಡ; ಇಂಗ್ಲೆಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುಋರಾಜ್ ಗಾಯಕ್‌ವಾಡ್, ಸಂಜು ಸ್ಯಾಮ್‌ಸನ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಶೋನಿ, ಜಸ್ಪಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್ ತಂಡದಲ್ಲಿದ್ದಾರೆ.

Rohit Sharma

2ನೇ ಪಂದ್ಯಕ್ಕೆ ಕೊಹ್ಲಿ; ಇಂಗ್ಲೆಡ್ ವಿರುದ್ಧದ 2 ಮತ್ತು 3ನೇ ಟಿ20 ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಪಂದ್ಯಗಳಿಗೆ ಸಹ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಐಯ್ಯರ್, ಡಿನೇಶ್ ಕಾರ್ತಿಕ್, ರಿಷಬ್ ಪಂಥ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಶೋನಿ, ಜಸ್ಪಿತ್ ಬೂಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಉಮ್ರಾನ್ ಮಲ್ಲಿಕ್ ತಂಡದಲ್ಲಿದ್ದಾರೆ.

ಭಾರತ ತಂಡ ಸದ್ಯ ಬರ್ಮಿಂಗ್‌ ಹ್ಯಾಂನಲ್ಲಿ ಇಂಗ್ಲೆಡ್ ಜೊತೆ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮೂರು ಟಿ20 ಪಂದ್ಯಗಳ ಬಳಿಕ ಭಾರತ ಮತ್ತು ಇಂಗ್ಲೆಡ್ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

257 ರನ್ ಮುನ್ನಡೆ; ಇಂಗ್ಲೆಡ್ ವಿರುದ್ಧ ಬರ್ಮಿಂಗ್‌ಹ್ಯಾಂನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಭಾನುವಾರ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 125 ರನ್‌ಗಳಿಸಿದೆ. ಒಟ್ಟಾರೆ 257 ರನ್‌ಗಳ ಮುನ್ನಡೆ ಸಾಧಿಸಿದೆ.

ಭಾನುವಾರ ಮೊದಲ ಇಂನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 284 ರನ್‌ಗಳಿಗೆ ಆಲೌಟ್ ಆಯಿತು. ಜಾನಿ ಬೆಸ್ಟೋ ಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾದರು. 140 ಬಾಲ್‌ಗಳಲ್ಲಿ 106 ರನ್ ಸಿಡಿಸಿದ ಸತತ ಮೂರು ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.

ಶತಕ ಸಿಡಿಸಿದ ಬಳಿಕ ಜಾನಿ ಬೆಸ್ಟೋ ಹೆಚ್ಚು ಹೊತ್ತು ಆಡಲಿಲ್ಲ. ಮೊಹಮ್ಮದ್ ಶಮಿ ಓವರ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

Recommended Video

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada

ಭಾರತದ ನಿಖರ ಬೌಲಿಂಗ್ ದಾಳಿಗೆ ಇಂಗ್ಲೆಡ್ ತಂಡದ ಆಟಗಾರರು ಬೇಗನೆ ಪೆಮಿಲಿಯನ್‌ಗೆ ಮರಳಿದರು. ಆದರೆ ಬೆಸ್ಟೋ ಮತ್ತು ಬೆನ್ ಸ್ಟೋಕ್ಸ್‌ (25 ರನ್) ನೆರವಿನಿಂದ ಆರನೇ ವಿಕೆಟ್‌ಗೆ 66 ರನ್ ಸೇರಿಸಿದರು.

English summary
Indian skipper Rohit Sharma stat the net practice after recovering from COVID-19. He all set to play first T20 on July 7th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X