ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಸ್ತುಬದ್ದ ಆಹಾರ, ಪ್ರತಿ ದಿನ ವ್ಯಾಯಾಮ : ಫಿಟ್‌ನೆಸ್‌ ಗುಟ್ಟು ಹೇಳಿದ ವಿರಾಟ್ ಕೊಹ್ಲಿ

|
Google Oneindia Kannada News

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ತಮ್ಮ ಅದ್ಭುತ ಬ್ಯಾಟಿಂಗ್‌ ಮಾತ್ರವಲ್ಲ ಅವರು ಇಷ್ಟು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿರುವ ಫಿಟ್ನೆಸ್‌ ಕೂಡ ಹಲವರಿಗೆ ಮಾದರಿಯಾಗಿದೆ. ತಮ್ಮ ಫಿಟ್ನೆಸ್ ಬಗ್ಗೆ ವಿರಾಟ್ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇದೇ ಮೊದಲ ಬಾರಿಗೆ ತಮ್ಮ ಫಿಟ್ನೆಸ್ ಗುಟ್ಟನ್ನು ವಿರಾಟ್ ಕೊಹ್ಲಿ ಬಹಿರಂಗ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡ ಅತ್ಯಂತ ಹೆಚ್ಚು ಫಿಟ್ನೆಸ್ ಇರುವ ಆಟಗಾರ ವಿರಾಟ್ ಕೊಹ್ಲಿ, ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ತಮ್ಮ ನೆಚ್ಚಿನ ಬಟರ್ ಚಿಕನ್ ತಿನ್ನುವುದನ್ನೇಕೆ ಬಿಟ್ಟಿದ್ದಾರೆ. ವಿಶ್ವದ ಉತ್ತಮ ಆಟಗಾರನಾಗಲು, ಅತ್ಯುತ್ತಮ ಕ್ರಿಕೆಟರ್ ಎನಿಸಿಕೊಳ್ಳಲು ಫಿಟ್ನೆಸ್ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಇದಕ್ಕಾಗಿ ಸ್ವತಃ ವಿರಾಟ್ ಕೊಹ್ಲಿ ಹಲವು ಮಾನದಂಡಗಳನ್ನು ಹೊಂದಿಸಿಕೊಂಡಿದ್ದಾರೆ. ಅವರು ಜಿಮ್‌ನಲ್ಲಿ ದೇಹವನ್ನು ದಂಡಿಸುವ ಹಲವು ವಿಡಿಯೋಗಳು ವೈರಲ್ ಕೂಡ ಆಗುತ್ತವೆ.

ಏಷ್ಯಾಕಪ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸುತ್ತಾರೆ: ಸೌರವ್ ಗಂಗೂಲಿ ವಿಶ್ವಾಸಏಷ್ಯಾಕಪ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಬಾರಿಸುತ್ತಾರೆ: ಸೌರವ್ ಗಂಗೂಲಿ ವಿಶ್ವಾಸ

ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಲು ವಿರಾಟ್ ಕೊಹ್ಲಿಯ ಪ್ರಯಾಣ, ಮತ್ತು ಅವರ ವೃತ್ತಿಜೀವನದ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡಲು ಕಟ್ಟುನಿಟ್ಟಾದ ಆಹಾರಕ್ರಮ ನಿರ್ವಹಿಸುವುದು ಹಲವು ಯುವ ಕ್ರೀಡಾಳುಗಳಿಗೆ ಸ್ಪೂರ್ತಿಯಾಗುತ್ತದೆ.

 ಫಿಟ್‌ನೆಸ್‌ ಗುಟ್ಟು ಹೇಳಿದ ವಿರಾಟ್ ಕೊಹ್ಲಿ

ಫಿಟ್‌ನೆಸ್‌ ಗುಟ್ಟು ಹೇಳಿದ ವಿರಾಟ್ ಕೊಹ್ಲಿ

33 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ಯಾವುದೇ ರಾಜಿ ಮಾಡುಕೊಳ್ಳುವುದಿಲ್ಲ. ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಸಂಪೂರ್ಣವಾಗಿ ವರ್ಕೌಟ್ ಮಾಡುತ್ತಾರೆ.
ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ, ಕೊಹ್ಲಿ ಅವರು ಆಹಾರಪ್ರೇಮಿಯಾಗಿದ್ದರೂ ಸಹ ಕಟ್ಟುನಿಟ್ಟಾದ ಆಹಾರ ಕ್ರಮ, ಅಭ್ಯಾಸವನ್ನು ಹೇಗೆ ನಿರ್ವಹಣೆ ಮಾಡಿದರು. ಏನೆಲ್ಲಾ ಶ್ರಮ ಹಾಕುವ ಮೂಲಕ ಇಷ್ಟು ವರ್ಷಗಳ ಕಾಲ ಫಿಟ್ನೆಸ್ ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ತಿಳಿಸಿದ್ದಾರೆ.
ತಾನು ಏನು ಆಹಾರ ಸೇವಿಸುತ್ತೇನೆ, ಎಷ್ಟೆಲ್ಲಾ ಕಸರತ್ತು ಮಾಡುತ್ತೇನೆ ಎಂಬುದಕ್ಕೆ ಸ್ಪಷ್ಟವಾದ ಯೋಜನೆ ಹೊಂದಿದ್ದೇನೆ, ಆದ್ದರಿಂದಲೇ ಫಿಟ್ ಆಗಿರಲು ಸಹಕಾರಿಯಾಯಿತು ಎಂದು ಹೇಳಿದ್ದಾರೆ.

 ಸಕ್ಕರೆ, ಗ್ಲುಟನ್ ಸೇವನೆ ಮಾಡಲ್ಲ

ಸಕ್ಕರೆ, ಗ್ಲುಟನ್ ಸೇವನೆ ಮಾಡಲ್ಲ

"ಕ್ರಿಕೆಟ್ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಾನು ಫಿಟ್ನೆಸ್ ಕಡೆ ಅಷ್ಟಾಗಿ ಗಮನ ನೀಡುತ್ತಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ನಾನು ಆಹಾರ ವಿಧಾನವನ್ನು ಬದಲಾಯಿಸಿದ್ದೇನೆ ಮತ್ತು ಫಿಟ್ನೆಸ್ ವಿಚಾರದಲ್ಲಿ ಹೆಚ್ಚು ಶಿಸ್ತುಬದ್ಧನಾಗಿದ್ದೇನೆ." ಎಂದು ಹೇಳಿದ್ದಾರೆ.


"ನಾನು ತಿನ್ನುವ ಆಹಾರದ ಬಗ್ಗೆ ಯಾವಾಗಲೂ ಸಂಪೂರ್ಣ ಅರಿವು ಹೊಂದಿರುತ್ತೇನೆ. ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದು ನನಗೆ ಚನ್ನಾಗಿ ತಿಳಿದಿದೆ. ಸಂಸ್ಕರಿಸಿದ ಸಕ್ಕರೆ, ಗ್ಲುಟನ್ ಅಂತಹ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದೇನೆ" ಎಂದು ಹೇಳಿದರು.

 ಡೈರಿ ಉತ್ಪನ್ನಗಳನ್ನು ಸೇವಿಸಲ್ಲ

ಡೈರಿ ಉತ್ಪನ್ನಗಳನ್ನು ಸೇವಿಸಲ್ಲ

ಕೆಲವು ಆಹಾರ ಪದ್ಧತಿಗಳು ತಮ್ಮ ಫಿಟ್‌ನೆಸ್ ಉತ್ತಮ ಪಡಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ ಎಂಬುದರ ಬಗ್ಗೆ ಅವರು ಮತ್ತಷ್ಟು ಮಾಹಿತಿ ನೀಡಿದರು.

"ನಾನು ಸಾಧ್ಯವಾದಷ್ಟು ಡೈರಿ ಉತ್ಪನ್ನಗಳನ್ನು ಸೇವನೆಯನ್ನು ತಪ್ಪಿಸುತ್ತೇನೆ. ನನ್ನ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಲು ನನಗೆ ಸಹಾಯ ಮಾಡಿದ ಇನ್ನೊಂದು ಉಪಾಯವೆಂದರೆ ನನ್ನ ಹೊಟ್ಟೆಯ ಸಾಮರ್ಥ್ಯದ 90 ಪ್ರತಿಶತದಷ್ಟು ಮಾತ್ರ ತಿನ್ನುವುದು. ನನ್ನಂತಹ ಆಹಾರಪ್ರಿಯರಿಗೆ ಇದು ಸುಲಭದ ಕೆಲಸವಲ್ಲ, ಆದರೆ ಅಂತಿಮವಾಗಿ, ನಿಮ್ಮ ದೇಹದಲ್ಲಿ ಆಗುವ ಧನಾತ್ಮಕ ಬದಲಾವಣೆಗಳನ್ನು ನೀವು ಗಮನಿಸಿದಾಗ, ಫಿಟ್‌ನೆಸ್‌ ನಿಮಗೆ ವ್ಯಸನವಾಗಿ ಬದಲಾಗುತ್ತದೆ" ಎಂದು ಅವರು ಹೇಳಿದರು.
 ಏಷ್ಯಾಕಪ್‌ಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ

ಏಷ್ಯಾಕಪ್‌ಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ

"ಆದ್ದರಿಂದ, ನನ್ನ ಆಹಾರಕ್ರಮ, ಫಿಟ್‌ನೆಸ್ ದಿನಚರಿಗಳಾಗಲಿ, ಜಿಮ್‌ನಲ್ಲಿ ಸಮಯ ಕಳೆಯುದನ್ನು ನಾನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ನನ್ನ ದೇಹಕ್ಕೆ ಒಳ್ಳೆಯದಲ್ಲದ ಆಹಾರಗಳನ್ನು ನಾನು ಎಂದಿಗೂ ತಿನ್ನುವುದಿಲ್ಲ. ಈ ಎಲ್ಲಾ ಬದಲಾವಣೆಗಳು ನಿಮ್ಮನ್ನು ಸೀಮಿತಗೊಳಿಸುವುದನ್ನು ಬಿಟ್ಟು ಮುಂದೆ ಹೋಗಲು ಸಹಾಯ ಮಾಡುತ್ತದೆ," ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.


ಮುಂಬರುವ ಏಷ್ಯಾಕಪ್‌ನಲ್ಲಿ ಆಗಸ್ಟ್ 28 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲು ಸಿದ್ಧವಾಗುತ್ತಿದ್ದಾರೆ. ಈ ಪಂದ್ಯದ ಮೂಲಕ ಮತ್ತೆ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.

English summary
Virat Kohli one of the fittest players in the Indian Cricket team. He has undergone an incredible transformation, from a young player who used to love 'butter chicken', Kohli opened up on how he maintained a strict plan, despite being a foodie, which has helped him remain at his peak for so many years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X