ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL 2022: ಆರ್‌ಸಿಬಿ ಬಗ್ಗೆ ಕೊನೆಗೂ ಮೌನ ಮುರಿದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್

|
Google Oneindia Kannada News

ಬೆಂಗಳೂರು, ಮಾರ್ಚ್ 29: ಕಳೆದ 14 ವರ್ಷದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಐಪಿಎಲ್ ಕಪ್ ಗೆಲ್ಲದಿದ್ದರೂ, ಕರ್ನಾಟಕ ಅಭಿಮಾನಿಗಳು ಮಾತ್ರ ತಂಡವನ್ನು ಬಿಟ್ಟುಕೊಟ್ಟಿಲ್ಲ.

ಈ ವರ್ಷ ಇಲ್ಲ ಮುಂದಿನ ವರ್ಷ ಕಪ್ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಆರ್​ಸಿಬಿ ಅನ್ನುವುದು ಕೇವಲ ತಂಡವಲ್ಲ, ಅದೊಂದು ಎಮೋಷನ್ ಎನ್ನುವುದು ಬೆಂಗಳೂರಿಗರ ನಂಬಿಕೆ. ಈ ಬಾರಿ ಹೊಸ ಹುರುಪು, ಹೊಸ ನಾಯಕನೊಂದಿಗೆ ಆರ್​ಸಿಬಿ ಕಣಕ್ಕಿಳಿದಿದೆ.

IPL 2022: ಮೈದಾನದಲ್ಲಿ 25% ಪ್ರೇಕ್ಷಕರಿಗೆ ಪ್ರವೇಶ, ಟಿಕೆಟ್ ಬುಕ್ ಹೇಗೆ?IPL 2022: ಮೈದಾನದಲ್ಲಿ 25% ಪ್ರೇಕ್ಷಕರಿಗೆ ಪ್ರವೇಶ, ಟಿಕೆಟ್ ಬುಕ್ ಹೇಗೆ?

ಪ್ರತಿ ಐಪಿಎಲ್ ಸೀಸನ್‌ಗಳಂತೆ ಮೊದಲ ಪಂದ್ಯವನ್ನು ಆರ್​ಸಿಬಿ ಪ್ರತಿ ಬಾರಿಯಂತೆ ದೇವರಿಗೆ ಅರ್ಪಿಸಿದೆ. ಘಟಾನುಘಟಿ ಆಟಗಾರರು ಈಗ ಆರ್​ಸಿಬಿ ಪರ ಆಡುತ್ತಿಲ್ಲ. ಅವರಲ್ಲಿ ಬೆಂಗಳೂರನ್ನು ಎರಡನೇ ತವರು ಎಂದುಕೊಂಡಿದ್ದ ಯಜುವೇಂದ್ರ ಚಹಲ್ ಕೂಡ ಒಬ್ಬರು.

A Leg-spinner Yuzvendra Chahal Finally Broke His Silence On The RCB

ಯಜುವೇಂದ್ರ ಚಹಲ್ ಅವರು ಕಳೆದ ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದರು. ಇದೀಗ ಚಹಲ್ ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿದಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಆರ್​ಸಿಬಿ ತಂಡ ಯಜುವೇಂದ್ರ ಚಹಲ್‌ರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಯಜುವೇಂದ್ರ ಚಹಲ್​ ಕೊನೆಗೂ ಮೌನ ಮುರಿದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕುರಿತು ಮಾತನಾಡಿದ್ದಾರೆ.

ಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿ: ಅದಕ್ಕೆ ಕಾರಣ ಹತ್ತು ಹಲವುಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿ: ಅದಕ್ಕೆ ಕಾರಣ ಹತ್ತು ಹಲವು

ಆರ್​ಸಿಬಿ ಬಗ್ಗೆ ಚಹಲ್ ಹೇಳಿದ್ದೇನು?
'ಈ ಬಾರಿ ಆರ್​ಸಿಬಿ ನನ್ನನ್ನು ಕೈಬಿಡುವ ಮುನ್ನ ಒಮ್ಮೆ ಕೇಳಬೇಕಿತ್ತು. ಆರ್​ಸಿಬಿಯಲ್ಲಿ ಇರಲು ನೀವು ಇಷ್ಟ ಪಡುತ್ತೀರಾ? ಎಂದು ಕೇಳಬೇಕಿತ್ತು. ನಾವು ನಿಮ್ಮನ್ನು ಹರಾಜಿನಲ್ಲಿ ಮತ್ತೆ ಖರೀದಿ ಮಾಡುತ್ತೇವೆ ಎಂದಿದ್ದರು. ಆದರೆ, ಮಾಡಲಿಲ್ಲ. ನನಗೆ ಹಣದ ಮೇಲೆ ಆಸೆ ಇರಲಿಲ್ಲ. ನನಗೆ ಆರ್​ಸಿಬಿ ತಾಯಿ ಇದ್ದಂತೆ. ಇಷ್ಟು ವರ್ಷ ಆ ತಂಡದಲ್ಲಿ ಆಡಿದ್ದೆ. ನನ್ನ ಬೆಂಗಳೂರು ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೇನೆ. ಏನೇ ಆದರೂ, ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ..'ಎಂದು ಯಜುವೇಂದ್ರ ಚಹಲ್​ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಆರ್​ಸಿಬಿ ಅಭಿಮಾನಿಗಳು ಚಹಲ್‌ರನ್ನು ನೀವು ರಿಟೈನ್​ ಮಾಡಬೇಕಿತ್ತು ಎಂದು ಹೇಳಿದ್ದಾರೆ.

A Leg-spinner Yuzvendra Chahal Finally Broke His Silence On The RCB

ಮೊದಲ ಪಂದ್ಯದಲ್ಲೇ ಆರ್​ಸಿಬಿ ಕೆಟ್ಟ ದಾಖಲೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ವರ್ಷವನ್ನು ಕೆಟ್ಟ ದಾಖಲೆಯೊಂದಿಗೆ ಪ್ರಾರಂಭಿಸಿದೆ. ಹೌದು, ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಪ್ರೇರೇಪಿಸಿದರೂ ಉತ್ತಮ ಬೌಲಿಂಗ್ ಮಾಡದ ಹಿನ್ನಲೆ ಆರ್​ಸಿಬಿ ಸೋಲನ್ನಪ್ಪಿತು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ತಂಡದಲ್ಲಿಲ್ಲದಿರುವುದು ದೊಡ್ಡ ಹೊಡೆತ ನೀಡಿದೆ.

English summary
A Leg-spinner Yuzvendra Chahal has finally broken the silence and has spoken about the Royal Challengers Bangalore team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X