ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1983 World Cup : ಭಾರತೀಯ ಕ್ರಿಕೆಟ್ ತಂಡದ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 39 ವರ್ಷ

|
Google Oneindia Kannada News

39 ವರ್ಷಗಳ ಹಿಂದೆ ಭಾರತಕ್ಕೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಂದೆರಡು ಪಂದ್ಯ ಗೆಲ್ಲುವುದೇ ಹೆಚ್ಚು ಎನ್ನುವಂತಿರುವಾಗ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಮೊದಲೇ ವಿಶ್ವಕಪ್ ಎತ್ತಿಹಿಡಿಯಿತು. 1983 ಜೂನ್ 25ರಂದು ಭಾರತ ಮೊದಲ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆ ಸಂಭ್ರಮಕ್ಕೆ ಈಗ 39 ವರ್ಷ.

1983ರಲ್ಲಿ ಕಪಿಲ್ ದೇವ್ ನೇತೃತ್ವದ ತಂಡ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ಗೆ ಕಾಲಿಟ್ಟಾಗ ಭಾರತ ವಿಶ್ವಕಪ್ ಗೆಲ್ಲುತ್ತದೆ ಎನ್ನುವ ಕನಿಷ್ಠ ನಿರೀಕ್ಷೆ ಯಾರಿಗೂ ಇರಲಿಲ್ಲ. ಅದಕ್ಕೂ ಮೊದಲಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಆಟವೇ ಅದಕ್ಕೆ ಕಾರಣವಾಗಿತ್ತು, ಅದರಲ್ಲೂ ವೆಸ್ಟ್ ಇಂಡಿಸ್ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಿ ಮೆರೆಯುತ್ತಿದ್ದ ಕಾಲವದು. ಆ ತಂಡವನ್ನು ಸೋಲಿಸುವುದು ಭಾರತಕ್ಕೆ ಕನಸು ಎಂದೇ ನಂಬಲಾಗಿತ್ತು. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮ್ಯಾಜಿಕ್ ಮಾಡಿತ್ತು.

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ 11 ವರ್ಷದ ಸಂಭ್ರಮ: ವಿಡಿಯೋ ಹಂಚಿಕೊಂಡ 'ರನ್ ಮೆಷಿನ್'

ಕಪಿಲ್ ದೇವ್ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಗೆಲುವುಗಳನ್ನು ಸಾಧಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತು. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವು ಫೇವರಿಟ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಇತಿಹಾಸವನ್ನೇ ಸೃಷ್ಟಿಸಿತು. ಅಂದು ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಚಾಂಪಿಯನ್ ಆಗಿ ಉದಯಿಸಿದ್ದು ಭಾರತ.

1983 ಜೂನ್ 25 ಭಾರತ ಕ್ರಿಕೆಟ್‌ಗೆ ಮರೆಯಲಾಗದ ದಿನ

1983 ಜೂನ್ 25 ಭಾರತ ಕ್ರಿಕೆಟ್‌ಗೆ ಮರೆಯಲಾಗದ ದಿನ

ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಿದ್ದದ್ದು ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್, ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕ್ರಿಸ್ ಶ್ರೀಕಾಂತ್ ಗಳಿಸಿದ 38 ರನ್‌ ಸಹಾಯದೊಂದಿದೆ 183 ರನ್ ಗಳಿಸಿ ಆಲೌಟ್ ಆಗಿತ್ತು. ಸಂದೀಪ್ ಪಾಟೀಲ್ 27 ರನ್ ಗಳಿಸಿದರೆ, ಸುನಿಲ್ ಗವಾಸ್ಕರ್ (2), ಕಪಿಲ್ ದೇವ್(15) ಉತ್ತಮ ಮೊತ್ತ ಕಲೆಹಾಕಲು ವಿಫಲರಾದರು.

ವೆಸ್ಟ್ ಇಂಡೀಸ್ ಬ್ಯಾಟಿಂಗ್‌ ಮುಂದೆ ಈ ಮೊತ್ತ ತೀರಾ ಕಡಿಮೆ ಎಂದೇ ನಂಬಲಾಗಿತ್ತು. ಆದರೆ ವೆಸ್ಟ್‌ ಇಂಡೀಸ್‌ಗೆ ಭಾರತದ ಬೌಲರ್ ಸಂಧು ಆರಂಭಿಕ ಆಘಾತ ನೀಡಿದರು. ಗ್ರೀನಿಡ್ಗೆ ಕೇವಲ 1 ರನ್‌ಗಳಿಸಿ ಸಂಧು ಬೌಲಿಂಗ್‌ನಲ್ಲಿ ಬೋಲ್ಡ್ ಆದರು. ನಂತರ ಬಂದ ವಿವಿಯನ್ ರಿಚರ್ಡ್ಸ್ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು, ಈ ಸಂದರ್ಭದಲ್ಲಿ ಭಾರತಕ್ಕೆ ಸೋಲು ಖಚಿತ ಎಂದೇ ನಂಬಲಾಗಿತ್ತು, ಆದರೆ ಮದನ್‌ ಲಾಲ್ ಬೌಲಿಂಗ್‌ನಲ್ಲಿ ಭಾರತ ತಂಡದ ನಾಯಕ ಕಪಿಲ್‌ ದೇವ್ ಹಿಡಿದ ಅದ್ಭುತ್‌ ಕ್ಯಾಚ್‌ಗೆ ರಿಚರ್ಡ್ಸ್‌ ಬಲಿಯಾದರು, ನಂತರ ಭಾರತ ಬೌಲಿಂಗ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ತಂಡ 52 ಓವರ್ ಗಳಲ್ಲಿ 140 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಚಾಂಪಿಯನ್ ಎನಿಸಿಕೊಂಡಿತು.

ಲಾರ್ಡ್ಸ್ ಬಾಲ್ಕನಿಯಲ್ಲಿ ಕಪಿಲ್ ದೇವ್ ಮತ್ತು ಅವರ ತಂಡವು ಕೈಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ನಿಂತಿರುವ ಚಿತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

30 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಗೆದ್ದ ಶ್ರೀಲಂಕಾ30 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಗೆದ್ದ ಶ್ರೀಲಂಕಾ

ಭಾರತದಲ್ಲಿ ಕ್ರಿಕೆಟ್‌ಗೆ ಸ್ವಾತಂತ್ಯ್ರದ ದಿನ

ಭಾರತದಲ್ಲಿ ಕ್ರಿಕೆಟ್‌ಗೆ ಸ್ವಾತಂತ್ಯ್ರದ ದಿನ

1983 ರಲ್ಲಿ ವಿಶ್ವಕಪ್ ಗೆದ್ದಿದ್ದು "ಭಾರತದಲ್ಲಿ ಕ್ರಿಕೆಟ್‌ಗೆ ಸ್ವಾತಂತ್ರ್ಯ ದಿನ" ಎಂದು ಭಾವಿಸಿದೆ ಎಂದು ಭಾರತದ ಲೆಜೆಂಡರಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ, ಈ ಸಾಧನೆಯು ಭಾರತೀಯ ಕ್ರಿಕೆಟ್‌ ಭವಿಷ್ಯವನ್ನು ಶಾಶ್ವತವಾಗಿ ಬದಲಾಯಿಸಿತು. "ಕೆಲವೊಮ್ಮೆ ನಾನು ನನ್ನನ್ನು ಕೇಳಿಕೊಳ್ಳುತ್ತೇನೆ, 'ನಾವು ಇನ್ನೂ 1983 ರ ವಿಶ್ವಕಪ್ ಬಗ್ಗೆ ಮಾತನಾಡುತ್ತಿದ್ದೇವೆ. ಇದು 39 ಆಗಿದೆ ವರ್ಷಗಳು'. ಅದೊಂದು ದೊಡ್ಡ ಸಾಧನೆ. ಇದು ನಮ್ಮ ಎರಡನೇ ಸ್ವಾತಂತ್ರ್ಯ. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು; ಇದು ಭಾರತದಲ್ಲಿ ಕ್ರಿಕೆಟ್‌ಗೆ ಸ್ವಾತಂತ್ರ್ಯ ದಿನವಾಗಿತ್ತು. ಅದು ನನ್ನ ಅಭಿಪ್ರಾಯದಲ್ಲಿ ಭಾರತೀಯ ಕ್ರಿಕೆಟ್‌ನ್ನು ಬದಲಿಸಿತು. ಎಂದು ಹೇಳಿದ್ದಾರೆ.

ಕಪಿಲ್‌ ದೇವ್‌ರನ್ನು ಶ್ಲಾಘಿಸಿದ ಸೆಹ್ವಾಗ್

ಭಾರತ ತಂಡ ವಿಶ್ವಕಪ್ ಗೆದ್ದು 39 ವರ್ಷಗಳಾದ ಬಗ್ಗೆ ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ," ದಿನಾಂಕದಲ್ಲಿ ಏನಿದೆ, ಜೂನ್ 25ರಂದು ಆರಂಭವಾಗಿದೆ, 1932ರ ಜೂನ್ 25ರಂದು ಭಾರತ ಮೊದಲ ಟೆಸ್ಟ್ ಪಂದ್ಯವನ್ನಾಡಿತು ಅದಾದ 51 ವರ್ಷಗಳ ನಂತರ 25ಜೂನ್ 1983ರಲ್ಲಿ ಕಪಿಲ್ ದೇವ್ ಮತ್ತು ಅವರ ತಂಡ ಮೊದಲ ವಿಶ್ವಕಪ್ ಗೆದ್ದಿತು" ಎಂದು ಹೇಳಿದ್ದಾರೆ.

ವಿಶ್ವಕಪ್ ಗೆಲುವಿನ ದಿನ ನೆನೆದ ಸಚಿನ್ ತೆಂಡುಲ್ಕರ್

ಕೆಲವು ಸಂದರ್ಭಗಳು ನಿಮ್ಮ ಬದುಕಿಗೆ ನಿಮ್ಮ ಕನಸನ್ನು ಸಾಕಾರಗೊಳಿಸಲು ಸ್ಪೂರ್ತಿಯಾಗುತ್ತವೆ. 1983ರ ಈ ದಿನ ನಾವು ಮೊದಲ ವಿಶ್ವಕಪ್ ಗೆದ್ದಿದ್ದೆವು. ಎಂದು ಟ್ವೀಟ್ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ ಕ್ರಿಕೆಟಿಗರಾಗಲು ಇದು ಕೂಡ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ.

ಈ ಐತಿಹಾಸಕ ಸಂದರ್ಭದ ಕುರಿತು ಬಿಸಿಸಿಐ ಕೂಡ ಟ್ವೀಟ್ ಮಾಡಿದೆ. ಭಾರತ ತಂಡದ ಸಾಧನೆಯನ್ನು ಶ್ಲಾಘಿಸಿದೆ. "ಭಾರತ ಕ್ರಿಕೆಟ್‌ನಲ್ಲಿ ಇದು ಐತಿಹಾಸಿಕ ದಿನ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ಇದು ಮಹತ್ವದ ಮೈಲಿಗಲ್ಲು. ಕಪಿಲ್ ದೇವ್ ನೇತೃತ್ವದ ಭಾರತ ತಂಡ ವಿಶ್ವಕಪ್ ಗೆದ್ದ ದಿನ" ಎಂದು ಟ್ವೀಟ್ ಮಾಡಿದೆ.

English summary
39 years ago on this day, India won their first cricket World Cup against beating the West Indies in the final at Lord's. The Kapil Dev-led side became world champions for the very first time in the history of Cricket World cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X