ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತಿ ಭುವನೇಶ್ವರಿ ಹೆಗಡೆ ಕಾರಂತ ಪೀಠದ ನಿರ್ದೇಶಕಿ

By Madhusoodhan
|
Google Oneindia Kannada News

ಶಿರಸಿ, ಆಗಸ್ಟ್, 22: ಸಾಹಿತಿ, ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ಮತ್ತೊಂದು ಗೌರವ ಸಂದಿದೆ. ಕಡಲ ತೀರದ ಭಾರ್ಗವ ಡಾ. ಕೆ. ಶಿವರಾಮ ಕಾರಂತ ಕುರಿತ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ 1993ರಲ್ಲಿ ಸ್ಥಾಪನೆಗೊಂಡ ಕಾರಂತ ಪೀಠದ ನೂತನ ನಿರ್ದೇಶಕಿಯಾಗಿ ಭುವನೇಶ್ವರಿ ಹೆಗಡೆ ನೇಮಕಗೊಂಡಿದ್ದಾರೆ.

ಡಾ. ಬಿ.ಎ. ವಿವೇಕ ರೈ, ಸಬೀಹಾ ಭೂಮಿಗೌಡ ಈ ಹಿಂದೆ ಪೀಠದ ನಿರ್ದೇಶಕರಾಗಿದ್ದರು. ಹಿರಿಯರಿಗೆ ಕಾರಂತರನ್ನು ಮತ್ತೊಮ್ಮೆ ನೆನಪಿಸುವುದು ಹಾಗೂ ಹೊಸಬರಿಗೆ ಕಾರಂತರನ್ನು ಪರಿಚಯಿಸಿ ಅವವರಲ್ಲಿದ್ದ ಅಪಾರ ಜ್ಞಾನದ ಅರಿವನ್ನು ಮೂಡಿಸುವುದು ಪೀಠದ ಮುಂದಿರುವ ಗುರಿ.['ಕಡಲ ತಡಿಯ ಭಾರ್ಗವ'ನ ಕಡಲನು ಮೀರಿಸಿದ ಬದುಕು]

sirsi

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕತ್ರಗಾಲದಲ್ಲಿ ಜನಿಸಿದ ಭುವನೇಶ್ವರಿ ಹೆಗಡೆ ಹಾಸ್ಯ ಸಾಹಿತಿಯಾಗಿ ಹೆಸರು ಮಾಡಿದವರು. ಕಳೆದ ಮೂರು ವರ್ಷಗಳಿಂದ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[ಅಂಕೋಲಾದ ಗದ್ದೆಗೆ ಇಳಿದು ನಾಟಿ ಮಾಡಿದ ಯಡಿಯೂರಪ್ಪ]

ಹೆಗಡೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿ ಎಚ್ ಶ್ರೀಧರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಹೆಗಡೆ ಅನೇಕ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದಾರೆ.

English summary
Sirsi: Writer and Mangalore University Economics professor Bhuvaneshwari Hegde named as a new director of K. Shivaram Karanth Pitha which was formod on 1993.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X