ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: 'ನಾಗ'ಪ್ಪನ್ನು ಕೆಣಕಿ ಆಸ್ಪತ್ರೆ ಹಾಸಿಗೆ ಹಿಡಿದ ಸಾಯದ್!

|
Google Oneindia Kannada News

ಶಿರಸಿ, ಮಾರ್ಚ್ 17: ಹಾವುಗಳನ್ನು ಹಿಡಿಯುವುದು, ಅವುಗಳನ್ನು ಮುಟ್ಟುವುದು, ಜೊತೆಗೆ ಆಟವಾಡುವುದು ಅಂದ್ರೆ ದೊಡ್ಡ ಸಾಹಸದ ಕೆಲಸ. ಸಾಮಾನ್ಯವಾಗಿ ಇಂಥ ಸಾಹಸಕ್ಕೆ ಉರಗ ತಜ್ಞರು ಕೈ ಹಾಕುತ್ತಿರುತ್ತಾರೆ. ಆದರೆ ಕೊಂಚ ಯಾಮಾರಿದ್ರೆ ಪ್ರಾಣಕ್ಕೆ ಕುತ್ತು ಬರೋದು ಗ್ಯಾರೆಂಟಿ. ಹಾವುಗಳ ಬಗ್ಗೆ ಉತ್ಸಾಹ ಹೊಂದಿದ ಮಾಜ್ ಸಾಯದ್ ಎನ್ನುವವರು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿರ್ಸಿಯಲ್ಲಿ ಮಾಜ್ ಸಾಯದ್ ಅವರು ಮೂರು ನಾಗರ ಹಾವುಗಳನ್ನು ಆಡಿಸುತ್ತಿರುವಾಗ ಒಂದು ಹಾವು ಭಯಾನಕವಾಗಿ ಆಕ್ರಮಣ ಮಾಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮೂರು ನಾಗರ ಹಾವುಗಳನ್ನು ಹೆಡೆ ಎತ್ತಿ ಆಡುವಂತೆ ಪ್ರಚೋದನೆ ನೀಡುತ್ತಿದ್ದ ಸಾಯದ್‌ನಿಗೆ ಒಂದು ಹಾವು ಭಯಾನಕವಾಗಿ ದಾಳಿ ಮಾಡಿದೆ. ಆತನ ಮೊಣಕಾಲನ್ನು ಕಚ್ಚಿ ಗಾಯಗೊಳಿಸಿದೆ. ಇದರಿಂದಾಗಿ ಸಾಯದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು ಇದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.

ವಿಡಿಯೋದಲ್ಲಿ ಸಾಯದ್ ಹಾವುಗಳು ತಲೆ ಎತ್ತಿ ಆಡಲು ಬಾಲಗಳನ್ನು ಎಳೆಯುತ್ತಾರೆ. ಅವರು ಹಾವಿನ ಬಾಲಗಳನ್ನು ಎಳೆದಂತೆ, ಅವುಗಳನ್ನು ಮುಟ್ಟುತ್ತಿದ್ದಂತೆ ಹಾವುಗಳು ಕೋಪಗೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಸಾಯೀ ತನ್ನ ಕೈಗಳನ್ನು ಅತ್ತಿತ್ತ ಸನ್ನೆಗಳನ್ನು ಮಾಡುತ್ತಾನೆ. ನಾಗರಹಾವುಗಳು ಬೆದರಿಕೆಯಿಂದಲೋ ಕೋಪದಿಂದಲೋ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತವೆ. ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ ಹಾವು ಸಾಯದ್ ಮೇಲೆ ನುಗ್ಗಿ ಅವನ ಮೊಣಕಾಲು ಕಚ್ಚುವುದನ್ನು ತೋರಿಸುತ್ತದೆ. ಆಘಾತಕ್ಕೊಳಗಾದ ಸಾಯದ್ ಅದನ್ನು ಎಳೆಯಲು ಪ್ರಯತ್ನಿಸಿದರೂ ಹಾವು ಆತನ ಕಾಲು ಬಿಡುವುದಿಲ್ಲ.

Viral Video: Karnataka Mans Stunt With 3 Cobras Ends Badly

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಹಾವು ಹಿಡಿಯುವವರನ್ನು ಟೀಕಿಸಿದ್ದಾರೆ. "ಇದು ನಾಗರಹಾವುಗಳನ್ನು ನಿಭಾಯಿಸುವ ಭಯಾನಕ ವಿಧಾನವಾಗಿದೆ. ಹಾವು ಚಲನೆಯನ್ನು ಬೆದರಿಕೆ ಎಂದು ಪರಿಗಣಿಸುತ್ತದೆ ಮತ್ತು ಚಲನೆಯನ್ನು ಅನುಸರಿಸುತ್ತದೆ. ಕೆಲವೊಮ್ಮೆ ಪ್ರತಿಕ್ರಿಯೆಯು ಮಾರಕವಾಗಬಹುದು" ಎಂದು ಅವರು ಬರೆದಿದ್ದಾರೆ.

ವಿಡಿಯೋ: ಬೃಹತ್ ಹೆಬ್ಬಾವಿನ ಜೊತೆ ಆಡುವ ಪುಟ್ಟ ಬಾಲಕಿವಿಡಿಯೋ: ಬೃಹತ್ ಹೆಬ್ಬಾವಿನ ಜೊತೆ ಆಡುವ ಪುಟ್ಟ ಬಾಲಕಿ

ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್, 'ಸಾಯದ್‌ಗೆ ಹಾವು ಕಚ್ಚಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ತಿಳಿಸುತ್ತದೆ. ನಾಗರಹಾವು ವಿವಿಧ ಎಲಾಪಿಡ್ ಹಾವುಗಳ ಸಾಮಾನ್ಯ ಹೆಸರು ಮತ್ತು ಎಲ್ಲಾ ನಾಗರಹಾವುಗಳು ವಿಷಪೂರಿತವಾಗಿವೆ. ಸಾಯದ್ ಅವರಿಗೆ ಹಾವು ಕಚ್ಚಿದ ನಂತರ ವಿಷ-ವಿರೋಧಿ 46 ಬಾಟಲುಗಳನ್ನು ಪಡೆದರು ಎಂದು ವರದಿಯಾಗಿದೆ.

ಎಂಎಸ್ ಕದಮ್ ಆಸ್ಪತ್ರೆಯಿಂದ 20 ವರ್ಷದ ಸಾಯದ್ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. "ಅವರು ಕರ್ನಾಟಕದ ಸಿರ್ಸಿಯ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಅವರು ಬರೆದಿದ್ದಾರೆ.

ಮಂಗಳೂರಿನ ಹಾವು ಮತ್ತು ಪ್ರಾಣಿ ರಕ್ಷಕ ಅತುಲ್ ಪೈ ಕೂಡ ಈ ರೀತಿಯ ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. "ಕರ್ನಾಟಕದ ಸಿರ್ಸಿಯ ಯುವ ಉತ್ಸಾಹಿ ಮಾಜ್ ಸಾಯದ್ ಅವರು 3 ನಾಗರ ಹಾವುಗಳನ್ನು ಇಟ್ಟುಕೊಂಡು ಅದರೊಂದಿಗೆ ಆಟವಾಡುತ್ತಿದ್ದಾಗ ಹಾವು ಕಚ್ಚಿದೆ" ಎಂದು ಪೈ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. "ಇದು ಬಹಳ ಜನಪ್ರಿಯವಾದ ಸಾಹಸವಾಗಿದ್ದು, ಅನೇಕ ಜನರು ಅನುಸರಿಸುತ್ತಾರೆ ಮತ್ತು ಇದರ ಗಂಭೀರತೆಯನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅನಗತ್ಯವಾಗಿ ನಿಭಾಯಿಸುವುದು ಮತ್ತು ಆಟವಾಡುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು" ಎಂದು ಬರೆದಿದ್ದಾರೆ.

Recommended Video

ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಇಸ್ಲಾಂ ಬಗ್ಗೆ ಭೀತಿ ಶುರು :ಪಾಕ್ PM | Oneindia Kannada

English summary
Viral Video: Karnataka Man's Stunt With 3 Cobras Ends Badly. Generally, such a venture will be handled by a reptile specialist. But a little bit of life is not guaranteed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X