ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಶಿರಸಿ ಭವನ'ದ ತೇಜಸ್ವಿನಿ ಹೆಗಡೆ- ಸ್ವಸ್ತಿ ಕಾದಂಬರಿ ಸ್ಪರ್ಧೆ ವಿಜೇತೆ

By Mahesh
|
Google Oneindia Kannada News

ಕುಮಟಾ, ನವೆಂಬರ್ 27: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸ್ವಸ್ತಿ ಪ್ರಕಾಶನ ಆಯೋಜಿಸಿದ್ದ ರಾಜ್ಯ ಮಟ್ಟದ ಕಾದಂಬರಿ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ದಟ್ಸ್ ಕನ್ನಡ(ಈಗಿನ ಒನ್ಇಂಡಿಯಾ)ದ 'ಶಿರಸಿ ಭವನ' ಅಂಕಣ ಖ್ಯಾತಿಯ ಶ್ರೀಮತಿ ತೇಜಸ್ವಿನಿ ಹೆಗಡೆ ಅವರು ಈ ಸಾಲಿನ ಪ್ರಶಸ್ತಿ ವಿಜೇತರಾಗಿದ್ದಾರೆ.

2014: ಕುಮುಟಾದ ಸ್ವಸ್ತಿ ಪ್ರಕಾಶನದ ಪ್ರಶಸ್ತಿ ಘೋಷಣೆ 2014: ಕುಮುಟಾದ ಸ್ವಸ್ತಿ ಪ್ರಕಾಶನದ ಪ್ರಶಸ್ತಿ ಘೋಷಣೆ

ಹೊಸ ಕತೆಗಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಪ್ರತಿ ವರ್ಷ ಈ ರೀತಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುತ್ತದೆ ಮತ್ತು ಕಾದಂಬರಿ/ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆ 25 ಪುಸ್ತಕಗಳನ್ನು ಅವರು ಪಡೆಯಲಿದ್ದಾರೆ. ಈ ಬಗ್ಗೆ ಪ್ರಿಯಾ ಭಟ್, ಕಲ್ಲಬ್ಬೆ ಅವರು ನಮ್ಮೊಂದಿಗೆ ಹಂಚಿಕೊಂಡಿರುವ ಮಾಹಿತಿ ಇಂತಿದೆ:

Swasti Publishers, Kumta award goes to Tejeswini Hegde

ಕಾದಂಬರಿ ಬರಹಗಾರರು ಬಹಳ ಕಡಿಮೆಯಾಗಿರುವ ಈ ಕಾಲಘಟ್ಟದಲ್ಲಿ ಕಾದಂಬರಿ ಸ್ಪರ್ಧೆ ಯನ್ನು ಸ್ವಸ್ತಿ ಪ್ರಕಾಶನ ಕೈಗೆತ್ತಿಕೊಳ್ಳಲು ಕಾರಣ, ನಮ್ಮನ್ನು ಪ್ರೋತ್ಸಾಹಿಸುತ್ತ ಸದಾಕಾಲ ಮಾರ್ಗದರ್ಶಿಯಾಗಿರುವ ಜಯಂತ್ ಕಾಯ್ಕಿಣಿ ಸರ್ ಹಾಗೂ ಆತ್ಮೀಯರು ಖ್ಯಾತ ಕಾದಂಬರಿಕಾರರೂ ಆಗಿರುವ ಕರಣಂ ಪವನ್ ಪ್ರಸಾದ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತ ಸ್ವಸ್ತಿ ಪ್ರಕಾಶನ ಕುಮಟಾ ಏರ್ಪಡಿಸಿದ್ದ ಕಾದಂಬರಿ ಸ್ಪರ್ಧೆ -2017 ರ ಫಲಿತಾಂಶ ಪ್ರಕಟಿಸುವ ಸಮಯ.

ಜೀವನ್ಮುಖಿ ಇದು ಜೀವಂತ ಕವಿತೆಗಳ ಸಂಗ್ರಹ ಜೀವನ್ಮುಖಿ ಇದು ಜೀವಂತ ಕವಿತೆಗಳ ಸಂಗ್ರಹ

ಈ ಸ್ಪರ್ಧೆಯಲ್ಲಿ ನಾವು ಕೊಟ್ಟಿರುವ ಅತಿ ಚಿಕ್ಕ ಸಮಯದಲ್ಲಿ 7 ಕಾದಂಬರಿಗಳು ಬಂದಿದ್ದು ಮೂರು ಕಾದಂಬರಿಗಳು ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದವು. ಕೊನೆಯ ಸುತ್ತಿನಲ್ಲಿ ನಿರ್ಣಾಯಕರಿಂದ ಆರಿಸಲ್ಪಟ್ಟಿದ್ದು ಶ್ರೀಮತಿ ತೇಜಸ್ವಿನಿ ಹೆಗಡೆ ಯವರ ಮೊದಲ ಕಾದಂಬರಿ "ಹೊರಳುದಾರಿ"

ಈ ಪೂರ್ಣ ಪ್ರಕ್ರಿಯೆಯಲ್ಲಿ ನಮ್ಮ ಜೊತೆಗಿದ್ದು ನಿರ್ಣಾಯಕತ್ವದ ಜವಾಬ್ಧಾರಿ ವಹಿಸಿದ ಸ್ವಸ್ತಿ ಪ್ರಕಾಶನದ ಸದಸ್ಯರು ಹಾಗೂ ಸಾಹಿತಿ ಡಾ.ಶ್ರೀಧರ್ ಬಳಗಾರ್ ಅವರಿಗೆ ಸ್ವಸ್ತಿ ಪ್ರಕಾಶನ ವು ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಹಾಗೂ ವಿಜೇತರಿಗೆ ಹಾರ್ದಿಕ ಅಭಿನಂದನೆಗಳು.

ಕಾದಂಬರಿ ಸ್ಪರ್ಧೆಯಲ್ಲಿ ಆಯ್ಕೆಯಾದ ಕಾದಂಬರಿಯನ್ನು ಸ್ವಸ್ತಿ ಪ್ರಕಾಶನ ಪ್ರಕಟಿಸಲಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿಯಲ್ಲಿ ಶಿರಸಿಯ ಬಕ್ಕಳದ " ಶ್ರೀ ಶಂಕರ " ಬೆಣ್ಣೆಗದ್ದೆಯಲ್ಲಿ ನಡೆಯಲಿದೆ.

English summary
Swasti Publishers, Kumta announced 2017 State level Kannada Novel Competition award. Smt. Tejeswini Hegde bagged 2017 award. Winner story will be published by Swasti Publishers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X