• search
 • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿರಸಿ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿ, ಕುಟುಂಬಸ್ಥರಿಗೂ ಸೋಂಕು

|

ಕಾರವಾರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ 24 ಜನರಲ್ಲಿ ಇಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತನ ಸಂಪರ್ಕದಿಂದ ನಗರದ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ 13 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

   Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಈ ದೇವಸ್ಥಾನ ಸಿಬ್ಬಂದಿಗಳ ಸಂಪರ್ಕದಿಂದ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೆ‌.ಡಿ.ಸಿ.ಸಿ ಬ್ಯಾಂಕಿನ 3 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇವರಿಗೂ ಸೋಂಕಿತ ಸಿಬ್ಬಂದಿ ಸಂಪರ್ಕದಿಂದ ಸೋಂಕು ಹರಡಿದೆ ಎನ್ನಲಾಗಿದೆ.

   ಒಂದು ವಾರದ ಕಾಲ ಶಿರಸಿ ಮಾರಿಕಾಂಬಾ ದೇವಾಲಯ ಬಂದ್

   ನಗರದ ವಿಶಾಲ ನಗರದಲ್ಲಿ ಇಬ್ಬರಿಗೆ ಹಾಗೂ ಮಹಾರಾಷ್ಟ್ರದಿಂದ ಹಿಂದಿರುಗಿದ್ದು, ಕ್ವಾರಂಟೈನ್ ನಲ್ಲಿದ್ದ ಇಬ್ಬರಿಗೆ ಸೋಂಕು ತಗುಲಿದೆ. ಒಂದೇ ದಿನ 24 ಪ್ರಕರಣ ದೃಢಪಡುವ ಮೂಲಕ ಇಡೀ ಶಿರಸಿ ಬೆಚ್ಚಿಬಿದ್ದಿದೆ. ಈ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರ ಪತ್ತೆ ಕಾರ್ಯವನ್ನು ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ‌. ಇದೀಗ ಸಂಪರ್ಕಿತರನ್ನು ಪತ್ತೆ ಹಚ್ಚುವುದೂ ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.

   English summary
   Coronavirus confirmed in 24 people of Sirsi in Uttara Kannada district. 13 staff of the city's famous Marikamba Temple also tested corona positive,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X