ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ: ಕನ್ನಡ ಜಾಗೃತಿಗಾಗಿ ಬೃಹತ್ ಕನ್ನಡ ಧ್ವಜ ಮೆರವಣಿಗೆ

By Mahesh
|
Google Oneindia Kannada News

ಶಿರಸಿ, ನವೆಂಬರ್ 01 : ಕನ್ನಡ ಭಾಷಾಭಿಮಾನ ಜನರ ಮನಸ್ಸಿನಲ್ಲಿ ಮತ್ತೆ ಜಾಗೃತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ರೆಡ್ ಆ್ಯಂಟ್ ಸಂಘಟನೆಯಿಂದ ಬೃಹತ್ ಗಾತ್ರದ ಕನ್ನಡ ಧ್ವಜ ಮೆರವಣಿಗೆ ಹಮ್ಮಿಕೊಂಡಿತ್ತು.

ಕನ್ನಡ ರಾಜ್ಯೋತ್ಸವ, ಶುಭಾಶಯ ತಿಳಿಸಿದ ನರೇಂದ್ರ ಮೋದಿಕನ್ನಡ ರಾಜ್ಯೋತ್ಸವ, ಶುಭಾಶಯ ತಿಳಿಸಿದ ನರೇಂದ್ರ ಮೋದಿ

ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನವೆಂಬರ್ 01(ಬುಧವಾರ) ರೆಡ್ ಆ್ಯಂಟ್ ಸಂಘಟನೆಯಿಂದ 160 ಮೀಟರ್ ಉದ್ದದ ಕನ್ನಡ ಧ್ವಜ ಮೆರವಣಿಗೆ, ಮಾರಿಕಾಂಬಾ ಪ್ರೌಢಶಾಲೆ ಸುಮಾರು 400 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಭಾಷೆ, ಕನ್ನಡಾ‌ಭಿಮಾನ, ಕನ್ನಡದ ಕುರಿತು ಜಾಗೃತಿ ಮೂಡಿಸಲು ಶಿರಸಿಯ ರೆಡ್ ಆ್ಯಂಟ್ ಫ್ರೆಂಡ್ಸ್ ಸಂಸ್ಥೆ ಈ ಮಹತ್ ಕಾರ್ಯಕ್ಕೆ ಮುಂದಾಗಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಧ್ವಜ ನಿರ್ಮಾಣವಾಗಿದೆ. ಕನ್ನಡ ರಾಜ್ಯೋತ್ಸವದಂದು‌ ಇದು ನಗರದ ಪ್ರಮುಖ ಬೀದಿಗಳಲ್ಲಿ ರಾರಾಜಿಸಿದೆ.

ಶಿರಸಿ ಮಾರಿಕಾಂಬಾ ಪ್ರೌಢಶಾಲೆಯಿಂದ ಆರಂಭ

ಶಿರಸಿ ಮಾರಿಕಾಂಬಾ ಪ್ರೌಢಶಾಲೆಯಿಂದ ಆರಂಭ

ನಗರದ ಮಾರಿಕಾಂಬಾ ಪ್ರೌಢಶಾಲೆಯ ಪ್ರಾಂಗಣದಿಂದ ನವೆಂಬರ್ 01ರ ಬೆಳಿಗ್ಗೆ 8.30 ಕ್ಕೆ ಕನ್ನಡ ಧ್ವಜದ ಮೆರವಣಿಗೆ ಹೊರಟ್ಟಿದ್ದು, ಸಿಪಿ ಬಝಾರ, ನಟರಾಜ ರಸ್ತೆ, ಬಸ್ ಸ್ಟಾಂಡ್ ವೃತ್ತ ಹೀಗೆ ಎಲ್ಲಾ ಕಡೆಗಳಲ್ಲಿ ಕನ್ನಡಾಭಿಮಾನ ಬೆಳಗಿದೆ.

ಶಿಕ್ಷಕರು ಹಾಗೂ ಸಂಘಟಕರು ಪಾಲ್ಗೊಂಡಿದ್ದರು

ಶಿಕ್ಷಕರು ಹಾಗೂ ಸಂಘಟಕರು ಪಾಲ್ಗೊಂಡಿದ್ದರು

ಮಾರಿಕಾಂಬಾ ಪ್ರೌಢಶಾಲೆ ಸುಮಾರು 400 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರೊಂದಿಗೆ ಶಿಕ್ಷಕರು ಹಾಗೂ ಸಂಘಟಕರು ಇರಲಿದ್ದು, ಯಾವುದೇ ಅಡಚಣೆ ಉಂಟಾಗದೇ ಯಶಸ್ವಿಯಾಗುವಂತೆ ಮಾಡಲು ಬೇಕಾದ ಸಕಲ ತಯಾರಿಯನ್ನು ಮಾಡಲಾಗಿತ್ತು.

ಕನ್ನಡ ಪ್ರೇಮದ ಕುರಿತು ರೆಡ್ ಆ್ಯಂಟ್ ಸಂಸ್ಥೆ

ಕನ್ನಡ ಪ್ರೇಮದ ಕುರಿತು ರೆಡ್ ಆ್ಯಂಟ್ ಸಂಸ್ಥೆ

ಕನ್ನಡ ಪ್ರೇಮದ ಕುರಿತು ರೆಡ್ ಆ್ಯಂಟ್ ಸಂಸ್ಥೆ ಮುಖ್ಯಸ್ಥ ಮಹೇಶ ನಾಯ್ಕ ಅವರನ್ನು ಸಂಪರ್ಕಿಸಿದಾಗ " ಕನ್ನಡ ಭಾಷಾಭಿಮಾನ ಎಲ್ಲರಲ್ಲಿ ಬೆಳೆಯಬೇಕು. ಅದು ಉಳಿಯಬೇಕು ಎನ್ನುವುದು ನಮ್ಮ ಬಯಕೆಯಾಗಿದೆ.ರೆಡ್ ಆ್ಯಂಟ್ ಸಂಸ್ಥೆಯು 5 ಜನರ ತಂಡವಾಗಿದೆ.

ಒಟ್ಟಾರೆಯಾಗಿ ಕೇವಲ ಪ್ರಚಾರಕ್ಕಾಗಿ ಅಲ್ಲ

ಒಟ್ಟಾರೆಯಾಗಿ ಕೇವಲ ಪ್ರಚಾರಕ್ಕಾಗಿ ಅಲ್ಲ

ಒಟ್ಟಾರೆಯಾಗಿ ಕೇವಲ ಪ್ರಚಾರಕ್ಕಾಗಿ ಕನ್ನಡ ಭಾಷೆ, ನೆಲ-ಜಲ ವಿಚಾರಗಳನ್ನು‌ ಬಳಸಿಕೊಳ್ಳುವ ರಾಜಕಾರಣಿಗಳ ಮಧ್ಯದಲ್ಲಿ ಇಂತಹ ಒಂದು ಹೊಸ ಕಾರ್ಯ, ಜಾಗೃತಿ‌ ಮೆರವಣಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ‌. ಕನ್ನಡ ಪ್ರೇಮಿಗಳೆಲ್ಲರೂ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ವ್ಯಕ್ತಪಡಿಸಿದ್ದರು. ಅದರಂತೆ, ಅಪಾರ ಸಂಖ್ಯೆಯಲ್ಲಿ ಕನ್ನಡ ಪ್ರೇಮಿಗಳು ಕಂಡು ಬಂದರು.

15 ಸಾವಿರ ರೂ.ಗಳಷ್ಟು ಖರ್ಚು

15 ಸಾವಿರ ರೂ.ಗಳಷ್ಟು ಖರ್ಚು

ಸ್ವತಃ ತಾವೇ ಕೈಯಿಂದ ಹಣವನ್ನು ಹಾಕಿಕೊಂಡು ಧ್ವಜವನ್ನು ನಿರ್ಮಿಸಿದ್ದಾರೆ. ಈ ಹಿಂದೆಯೂ ಸಹ ಕನ್ನಡ ರಾಜ್ಯೋತ್ಸವದಂದು ಬ್ಲಡ್ ಕ್ಯಾಂಪ್, ಸ್ಮಶಾನ ಸ್ವಚ್ಚತೆ ಸೇರಿದಂತೆ ವಿವಿಧ ಸಾಮಾಜಿಕ ಕೆಲಸವನ್ನು ಮಾಡಲಾಗಿದೆ.

ನಾವು ಗೆಳೆಯರು ಸೇರಿ 15 ಸಾವಿರ ರೂ.ಗಳಷ್ಟು ಖರ್ಚು ಮಾಡಿ ಕನ್ನಡವನ್ನು ಬೆಳೆಸಲು ಮೆರವಣಿಗೆ ಮಾಡಲಾಗುತ್ತಿದೆ. ಇದು ಸಿಲ್ಕ್ ಬಟ್ಟೆಯಾಗಿದ್ದು ಸೂರತ್ ನಿಂದ ತರಲಾಗಿದೆ ಎಂದು ಮಹೇಶ ನಾಯ್ಕ, ರೆಡ್ ಆ್ಯಂಟ್ ಸಂಸ್ಥೆ ಮುಖ್ಯಸ್ಥ ಒನ್ ಇಂಡಿಯಾಕ್ಕೆ ಹೇಳಿದರು.

English summary
Red Ant association in Sirsi celebrated Kannada Rajyotsava with Big Flag(160 meters). Hundereds of students from Sri Marikamba School participated in the march on November 01, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X