ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಆ ದಿನಗಳಿಗೆ" ಮೆನ್ಸ್ಟ್ರುಯಲ್ ಕಪ್ ತಯಾರಿಸಿ ಸೈ ಎನಿಸಿಕೊಂಡ ಮಲೆನಾಡ ಯುವತಿ

|
Google Oneindia Kannada News

ಕಾರವಾರ, ಆಗಸ್ಟ್ 18: ಹೆಣ್ಣು ಮಕ್ಕಳು ತಮ್ಮ ಮುಟ್ಟಿನ ಸಮಯದಲ್ಲಿ ಶುಭ್ರತೆ ಕಾಯ್ದುಕೊಳ್ಳಲು ಹಾಗೂ ಆರಾಮವಾಗಿರಲು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ. ಗ್ರಾಮೀಣ ಭಾಗಗಳಲ್ಲೂ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಹೆಚ್ಚೇ ಇದೆ. ಆದರೆ, ಬಳಸಿ ಎಸೆದ ಈ ಪ್ಲಾಸ್ಟಿಕ್‌ ನಿರ್ಮಿತ ಪ್ಯಾಡ್‌ಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ.

Recommended Video

ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

ಆದ್ದರಿಂದ ಇದೀಗ ಸ್ಯಾನಿಟರ್ ಪ್ಯಾಡ್ ಗಳಿಗೆ ಪರ್ಯಾಯವಾಗಿ 'ಮೆನ್ಸ್ಟ್ರುಯಲ್ ಕಪ್'ಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಈ ಕಪ್ ಗಳು ಸುಲಭವಾಗಿ ಎಲ್ಲಿ ಸಿಗುತ್ತವೆ? ಬಳಕೆ ಹೇಗೆ? ಎಂಬಿತ್ಯಾದಿ ಬಗ್ಗೆ ಇನ್ನೂ ಗೊಂದಲಗಳು ಇವೆ. ಹೀಗಾಗಿ ಈ ಕಪ್ ಗಳ ತಯಾರಿಕೆಯ ಘಟಕವನ್ನು ಬೆಂಗಳೂರಿನಲ್ಲಿ ತೆರೆದಿದ್ದಾರೆ ಶಿರಸಿ ಮೂಲದ ದಿವ್ಯಾ ಗೋಕರ್ಣ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ...

 ಸ್ಯಾನಿಟರಿ ಪ್ಯಾಡ್ ವಿಲೇವಾರಿಯ ಸಮಸ್ಯೆ

ಸ್ಯಾನಿಟರಿ ಪ್ಯಾಡ್ ವಿಲೇವಾರಿಯ ಸಮಸ್ಯೆ

ಸ್ಯಾನಿಟರಿ ಪ್ಯಾಡ್‌ಗಳು ಶೇ 90ರಷ್ಟು ಪ್ಲಾಸ್ಟಿಕ್‌ನಿಂದ ಮಾಡಲಾಗಿದ್ದು, ಭೂಮಿಯಲ್ಲಿ ಕರಗಲು ನೂರಾರು ವರ್ಷ ತೆಗೆದುಕೊಳ್ಳುತ್ತವೆ. ಭಾರತದಲ್ಲಿ ಸರಿಸುಮಾರು 33 ಕೋಟಿ ಮಹಿಳೆಯರಲ್ಲಿ 13 ಕೋಟಿಯಷ್ಟು ಮಂದಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾರೆ. ಈ ಪೈಕಿ ದಿವ್ಯಾ ಗೋಕರ್ಣ ಅವರು ಕೂಡ ಎಲ್ಲಾ ಯುವತಿಯರಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುತ್ತಿದ್ದವರು. ಆದರೆ, ಪರಿಸರದ ಬಗ್ಗೆ ಕಾಳಜಿ ಇರುವ ಇವರಿಗೆ ಸ್ಯಾನಿಟರಿ ಪ್ಯಾಡ್‌ಗಳ ವಿಲೇವಾರಿಯ ಸಮಸ್ಯೆಯ ಕುರಿತೂ ಬೇಸರವಿತ್ತು. ಈ ಬಗ್ಗೆ ಯೂಟ್ಯೂಬ್ ‌ಗಳಲ್ಲಿ ಹುಡುಕಾಡಿದ ಅವರಿಗೆ ಸಿಕ್ಕಿದ್ದು ‘ಮೆನ್ಸ್ಟ್ರುಯಲ್ ಕಪ್'.

ಲಾಕ್ ಡೌನ್ ಪರಿಣಾಮ: ಮಹಿಳೆಯರಿಗೆ ಕಾಡುತ್ತಿದೆ ಋತುಚಕ್ರ ಸಮಸ್ಯೆಲಾಕ್ ಡೌನ್ ಪರಿಣಾಮ: ಮಹಿಳೆಯರಿಗೆ ಕಾಡುತ್ತಿದೆ ಋತುಚಕ್ರ ಸಮಸ್ಯೆ

 ಬೆಂಗಳೂರಿನಲ್ಲಿ ಕಾಂಫಿ ಕಪ್ ಸ್ಥಾಪನೆ

ಬೆಂಗಳೂರಿನಲ್ಲಿ ಕಾಂಫಿ ಕಪ್ ಸ್ಥಾಪನೆ

ಕಳೆದ ಮೂರು ವರ್ಷಗಳಿಂದಲೂ ಅವರು ಸ್ಯಾನಿಟರಿ ಪ್ಯಾಡ್‌ ಬಳಕೆಯನ್ನು ತಿರಸ್ಕರಿಸಿದರು. ತಮ್ಮ ಸ್ನೇಹಿತೆಯರಿಗೆ, ಸುತ್ತಮುತ್ತಲಿನ ಯುವತಿಯರಿಗೂ ಈ ಕಪ್‌ಗಳನ್ನು ಬಳಸುವಂತೆ ಸಲಹೆ ನೀಡುತ್ತಾ, ಸ್ಯಾನಿಟರಿ ಪ್ಯಾಡ್‌ನಿಂದ ಪರಿಸರದ ಮೇಲಾಗುತ್ತಿರುವ ಮಾಲಿನ್ಯದ ಬಗೆಯೂ ಜಾಗೃತಿ ಮೂಡಿಸುತ್ತಿದ್ದರು. ಆದರೆ, ಈ ಪೈಕಿ ಕೆಲವರು ಮಾತ್ರ ದಿವ್ಯಾ ಅವರ ಮಾತಿಗೆ ಸ್ಪಂದಿಸಿದರು. ಇಷ್ಟೆಲ್ಲ ಆದ ಬಳಿಕ ಈ ಕಪ್‌ಗಳನ್ನು ನಾವೇ ತಯಾರಿಸಿ ಮಾರುಕಟ್ಟೆ ಮಾಡಿದರೆ ಹೇಗಿರುತ್ತದೆ ಎಂಬ ಆಲೋಚನೆಯೂ ಹೊಳೆಯಿತು. ಬ್ಯಾಂಕುಗಳಲ್ಲಿ ಸಾಲ ಮಾಡಿ, ಹೇಗೋ ಉತ್ಪಾದಕರ ಮಾಹಿತಿಗಳನ್ನು ಕಲೆಹಾಕಿ ಬೆಂಗಳೂರಿನಲ್ಲಿ ‘ಕಾಂಫಿ ಕಪ್' ಉತ್ಪಾದನಾ ಘಟಕವನ್ನೇ ಸ್ಥಾಪಿಸಿದರು.

"10 ವರ್ಷಗಳವರೆಗೂ ಬಳಸಬಹುದು"

ರಾಜ್ಯದಲ್ಲಿ ಅತಿ ವಿರಳವಾಗಿರುವ ಈ ಉತ್ಪಾದನಾ ಘಟಕದಲ್ಲಿ ಕಪ್‌ಗಳನ್ನು ತಯಾರಿಸಿ, ದೇಶದಾದ್ಯಂತ ಮಾರುಕಟ್ಟೆ ಮಾಡುವ ಗುರಿ ದಿವ್ಯಾ ಗೋಕರ್ಣ ಅವರದ್ದು.

ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಸ್ಯಾನಿಟರಿ ಪ್ಯಾಡ್‌ಗಳು 800 ವರ್ಷಗಳಾದರೂ ಮಣ್ಣಿನಲ್ಲಿ ಕರಗದೇ ಉಳಿಯುತ್ತವೆ. ಆದರೆ, ಈ ಕಪ್‌ಗಳನ್ನು ಸಿಲಿಕಾನ್ ಧಾತುವಿನಿಂದ ತಯಾರಿಸುವುದರಿಂದ ಬಳಕೆ ಮಾಡಿ ಎಸೆದ ಕೆಲವೇ ಸಮಯದಲ್ಲಿ ಕರಗುತ್ತವೆ' ಎನ್ನುತ್ತಾರೆ ಅವರು.

ಹಬ್ಬದೂಟ ಹಾಕಿ, ಆಕ್ರೋಶ ಹೊರ ಹಾಕಿದ ಋತುಮತಿಯರು!ಹಬ್ಬದೂಟ ಹಾಕಿ, ಆಕ್ರೋಶ ಹೊರ ಹಾಕಿದ ಋತುಮತಿಯರು!

ಇನ್ನು, ಈ ಕಪ್‌ಗಳು ಪ್ಯಾಡ್‌ಗಳಿಗಿಂತ ಹೆಚ್ಚು ಆರೋಗ್ಯಕರ ಹಾಗೂ ಆರಾಮದಾಯಕ. ಚರ್ಮರೋಗ, ಬ್ಯಾಕ್ಟೀರಿಯಾ ಪ್ರವೇಶಕ್ಕೆ ಆಸ್ಪದ ನೀಡದ ಕಪ್‌ಗಳ ಬಳಕೆಯೂ ಸುಲಭವಾಗಿದ್ದು, ಉಳಿದ ಪರಿಕರಗಳಿಗಿಂತ ಎರಡು ಪಟ್ಟು ಲಿಕ್ವಿಡ್ ಹಿಡಿದಿಟ್ಟುಕೊಳ್ಳುತ್ತದೆ. ಹೆಚ್ಚು ಸ್ರಾವದ ದಿನಗಳಲ್ಲೂ ಮಹಿಳೆಯರ ಸಹಾಯಕ್ಕೆ ಬರುತ್ತದೆ. ಸಾಮಾನ್ಯವಾಗಿ ಒಮ್ಮೆ ಬಳಸಿದ ಪ್ಯಾಡ್‌ಗಳನ್ನು ಮತ್ತೆ ಬಳಸಲಾಗದು. ಆದರೆ, ಈ ಕಪ್‌ಗಳನ್ನು ಹತ್ತು ವರ್ಷಗಳವರೆಗೆ ಬಳಸಬಹುದು ಎಂದು ವಿವರಿಸಿದರು.

 ಭಾರತದಲ್ಲಿ ಸಿಗುವುದು ಚೀನಾ ಕಪ್‌ಗಳು!

ಭಾರತದಲ್ಲಿ ಸಿಗುವುದು ಚೀನಾ ಕಪ್‌ಗಳು!

ಮೆನ್ಸ್ಟ್ರುಯಲ್ ಕಪ್ ಗಳ ಉದ್ಯಮದ ಆಳಕ್ಕೆ ಇಳಿಯಲು ಮುಂದಾದಾಗ ಅವರ ಅರಿವಿಗೆ ಬಂದಿದ್ದು, ಭಾರತದಲ್ಲಿ ಸಿಗುವ ಕಪ್‌ಗಳು ಶೇ 75ರಷ್ಟು ಚೀನಾ ಉತ್ಪನ್ನಗಳು ಎನ್ನುವುದು. ಹೀಗಾಗಿ ಅವರು ಭಾರತದಲ್ಲಿ ರಬ್ಬರ್ ಮತ್ತು ಮೆಡಿಕಲ್ ಗ್ರೇಡ್ ಸಿಲಿಕಾನ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳನ್ನು ತಿಂಗಳುಗಳ ಕಾಲ ಹುಡುಕಿ, ಅವರ ಜೊತೆ ತಯಾರಿಕಾ ಒಪ್ಪಂದ ಮಾಡಿಕೊಂಡು, ತಯಾರಿಕೆಯ ಹಂತದಲ್ಲಿ ಬಹಳಷ್ಟು ಸುಧಾರಿತ ಡಿಸೈನ್ ಅನ್ನೂ ತಯಾರಿಸಿ ಆಯ್ಕೆ ಮಾಡಿದ್ದಾರೆ.

"ಪರಿಸರ ಕಾಳಜಿಯೂ ಮುಖ್ಯ"

ಶಾಲಾ- ಕಾಲೇಜುಗಳು ಆರಂಭವಾದ ಬಳಿಕ ವಿದ್ಯಾರ್ಥಿಗಳನ್ನು ಭೇಟಿಯಾಗಿ ಕಪ್‌ಗಳನ್ನು ಬಳಸುವಂತೆ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸುವ ಹಾಗೂ ನಮ್ಮ ಸಂಸ್ಥೆಯ ಕಪ್‌ಗಳನ್ನು ಉಚಿತವಾಗಿ ಬಡ ಯುವತಿಯರಿಗೆ ವಿತರಣೆ ಮಾಡುವ ಯೋಜನೆ ಇದೆ. ಉದ್ಯಮ ಅಭಿವೃದ್ಧಿಗೊಳಿಸಿ ಹಣ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಯುವತಿಯರಲ್ಲಿ ಆರೋಗ್ಯ, ಶುಚಿತ್ವ ಹಾಗೂ ಪರಿಸರದ ಬಗೆಗಿನ ಜಾಗೃತಿ ಮೂಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳುತ್ತಾರೆ ದಿವ್ಯಾ. ಹೆಚ್ಚಿನ ಮಾಹಿತಿಗೆ www.comfycup.in, ಮೊಬೈಲ್ ಸಂಖ್ಯೆ: 7349618782ಗೆ ಸಂಪರ್ಕಿಸಬಹುದಾಗಿದೆ.

English summary
Siris based young woman Divya Gokarna has started menstrual cup production unit in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X