• search
 • Live TV
ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪೂರ್ವ ಘಟ್ಟದ ಅಪರೂಪದ 'ಕಳಿಂಗ ಕಪ್ಪೆ' ಪತ್ತೆ

|
Google Oneindia Kannada News

ಶಿರಸಿ, ಆಗಸ್ಟ್ 27: ಭಾರತದ ಪೂರ್ವ ಘಟ್ಟದಲ್ಲಿ ಮಾತ್ರ ಕಾಣಸಿಗುತ್ತದೆಂದು ನಂಬಲಾಗಿದ್ದ ಅಪರೂಪದ ಕಳಿಂಗ ಕಪ್ಪೆ ಪಶ್ಚಿಮ ಘಟ್ಟ ಪ್ರದೇಶದಲ್ಲೂ ಪತ್ತೆಯಾಗಿದೆ. ಜೀವವೈವಿಧ್ಯ ಸಂಶೋಧಕ, ತಾಲೂಕಿನ ವರ್ಗಾಸರದ ಅಮಿತ ಹೆಗಡೆ ಹಾಗೂ ತಂಡ ಈ ಪತ್ತೆ ಕಾರ್ಯ ನಡೆಸಿದ್ದಾರೆ.

   Virat Kohli ಅಭಿಮಾನಿಗಳ ಪ್ರಕಾರ ಮನೆಗೆ ಪಾಪು ಬರೋ ಹೊತ್ತಿಗೆ ಕಪ್ ನಮ್ಮದೆ | Oneindia Kannada

   ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ "ಸಂತಾನೋತ್ಪತ್ತಿ ನಡವಳಿಕೆ ಮತ್ತು ಜೀವ ಸಂವಹನ ಪ್ರಯೋಗಾಲಯದ ಪ್ರಾಣಿಶಾಸ್ತ್ರ ವಿಭಾಗ"ದಲ್ಲಿ ಪಿ.ಎಚ್ ಡಿ ಅಧ್ಯಯನ ನಡೆಸುತ್ತಿರುವ ಇವರು ಪ್ರೊ.ಗಿರೀಶ ಕಾಡದೇವರು ಅವರ ಮಾರ್ಗದರ್ಶನದಲ್ಲಿ ಹಾಗೂ ಪುಣೆಯ ಝೂವಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ZSI) ವಿಜ್ಞಾನಿ ಕೆ.ಪಿ.ದಿನೇಶ್ ಅವರ ಸಹಯೋಗದಲ್ಲಿ ಈ ಅಪರೂಪದ ಕಪ್ಪೆಯನ್ನು ಪತ್ತೆ ಹಚ್ಚಿದ್ದಾರೆ.

    ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಪತ್ತೆ

   ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಪತ್ತೆ

   ಶಿರಸಿಯ ಭಾಗದಲ್ಲಿ ಈ ವಿಶಿಷ್ಟ ತಳಿಯ ಕಪ್ಪೆ ಪತ್ತೆಯಾಗಿದೆ. ಈ ಕಪ್ಪೆಯನ್ನು ಪ್ರುಧ್ವಿ ನೇತೃತ್ವದ ಸಂಶೋಧಕರ ತಂಡದಿಂದ 2018ರಲ್ಲಿ ಪೂರ್ವ ಘಟ್ಟದ ಉತ್ತರ ಭಾಗವಾದ ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಲಾಗಿತ್ತು. ಇದು ಪೂರ್ವ ಘಟ್ಟದಲ್ಲಿ ಮಾತ್ರ ಕಂಡುಬರುವ ಪ್ರಭೇದ ಎಂಬ ನಂಬಿಕೆ ಈವರೆಗೆ ಇತ್ತು. ಅಚ್ಚರಿ ಎಂಬಂತೆ ಈ ಕಳಿಂಗ ಜಾತಿಯ ಕಪ್ಪೆ ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದಲ್ಲಿ ಕಂಡುಬಂದಿದೆ.

   ಉಡುಪಿಯಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಬೇಧ ಪತ್ತೆಉಡುಪಿಯಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಟ್ರೀ ಟೋಡ್ ಕಪ್ಪೆ ಪ್ರಬೇಧ ಪತ್ತೆ

    ಭಿನ್ನ ದೇಹ ವಿನ್ಯಾಸದ ಕಪ್ಪೆ

   ಭಿನ್ನ ದೇಹ ವಿನ್ಯಾಸದ ಕಪ್ಪೆ

   ಪಶ್ಚಿಮ ಘಟ್ಟದಲ್ಲಿ ಕಂಡುಬಂದ ಕಳಿಂಗ ಕಪ್ಪೆ ತನ್ನ ದೇಹ ವಿನ್ಯಾಸದಲ್ಲಿ ಭಿನ್ನವಾಗಿ ಕಂಡುಬರುತ್ತದೆ. ಈ ದೊಡ್ಡ ಗಾತ್ರದ ಕ್ರಿಕೆಟ್ ಕಪ್ಪೆ ಹೆಚ್ಚಿನ ಫಿನೋಟೈಪಿಕ್ ಪ್ಲಾಸ್ಟಿಟಿಯನ್ನು (Morphological Phenotypic Plasticity) ತೋರಿಸುತ್ತದೆ. ಅಂದರೆ ವ್ಯವಂಶಿಕವಾಗಿ ಒಂದೇ ಜಾತಿಯ ಕಪ್ಪೆಗಳು ನೋಡಲು ಬೇರೆ ಬೇರೆ ಪ್ರಕಾರವಾಗಿ ಕಂಡುಬರುತ್ತವೆ. ಈ ಸಂಶೋಧನೆಯಲ್ಲಿ ಪೂರ್ವ ಹಾಗೂ ಪಶ್ಚಿಮ ಘಟ್ಟಗಳ್ಳಲ್ಲಿ ಕಂಡು ಬರುವ ಕಳಿಂಗ ಕಪ್ಪೆಗಳು ಆನುವಂಶಿಕವಾಗಿ ಒಂದೇ ಆಗಿದ್ದು ನೋಡಲು ರೂಪವಿಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತೋರಿಸುತ್ತಿವೆ.

   Morphological Phenotypic Plasticity (MPP) ಎಂದರೆ ನೈಸರ್ಗಿಕ ಪರಿಸರದ ವ್ಯತ್ಯಾಸಗಳು ಅಥವಾ ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ತೀವ್ರವಾದ ರೂಪವಿಜ್ಞಾನದ ದೇಹ ವ್ಯತ್ಯಾಸಗಳನ್ನು ತೋರಿಸುವ ಸಾಮರ್ಥ್ಯ. "ಪಶ್ಚಿಮ ಘಟ್ಟದಲ್ಲಿ ನಾನು ಹಲವಾರು ಬಾರಿ ಈ ಕಪ್ಪೆಯನ್ನು ಕಂಡಿದ್ದೇನೆ. ಇದು ಪಶ್ಚಿಮ ಘಟ್ಟದಿಂದ ತಿಳಿದಿರುವ ಫೆಜೆವರಾಯ/ ಮಿನರ್ವರಿಯಾ ಪ್ರಭೇದಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ" ಎನ್ನುತ್ತಾರೆ ಸಂಶೋಧಕರಾದ ಅಮಿತ್.

    ಅವನತಿಯ ಅಂಚಿನಲ್ಲಿ ಜೀವವೈವಿಧ್ಯಗಳು

   ಅವನತಿಯ ಅಂಚಿನಲ್ಲಿ ಜೀವವೈವಿಧ್ಯಗಳು

   21ನೇ ಶತಮಾನದಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯದಲ್ಲಿ ಅನೇಕ ಜೀವವೈವಿಧ್ಯಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಆದಾಗ್ಯೂ ಪ್ರಸ್ತುತ ನಮ್ಮ ದೇಶದಲ್ಲಿ ಹೊಸ ಪ್ರಭೇದಗಳು ಇತ್ತೀಚೆಗಷ್ಟೇ ಬೆಳಕಿಗೆ ಬರುತ್ತಿವೆ. ಈ ಹೊಸ ಅನ್ವೇಷಣೆ ಸಕಾರಾತ್ಮಕವಾಗಿದೆ. ಆದರೆ ಹೊಸ ಜಾತಿಗಳು, ಪ್ರಭೇದಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವಗಳೇನು ಅಥವಾ ವಿಭಿನ್ನ ಜೈವಿಕ ಭೌಗೋಳಿಕ ಶ್ರೇಣಿಗಳಿಗೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ನಮಗೆ ಇನ್ನೂ ಹೆಚ್ಚು ತಿಳಿದಿಲ್ಲ. ಈ ಅಸ್ಪಷ್ಟತೆ ಹಾಗೂ ಸಂಕೀರ್ಣತೆಯ ಬಗ್ಗೆ ನಾವು ಪ್ರಕಟಿಸಿದ ಸಂಶೋಧನಾ ಪ್ರಬಂಧ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಸಮಸ್ಯೆಯನ್ನು ಅಥವಾ ಅನಿಶ್ಚಿತತೆಯನ್ನು ಪರಿಹರಿಸಲು ಅಥವಾ ಇವುಗಳ ಬಗ್ಗೆ ಹೆಚ್ಚು ಗಮನಹರಿಸುವ ತುರ್ತು ಅವಶ್ಯಕತೆಯಿದೆ ಎಂದು ಹೇಳುತ್ತಾರೆ ಅವರು.

   ಕಪ್ಪೆ ಮಾಂಸದಾಸದಿಂದ ಅಪಾಯಕ್ಕೆ ಸಿಲುಕಿದೆ ಮಂಡೂಕ ಸಂತತಿ!ಕಪ್ಪೆ ಮಾಂಸದಾಸದಿಂದ ಅಪಾಯಕ್ಕೆ ಸಿಲುಕಿದೆ ಮಂಡೂಕ ಸಂತತಿ!

    ಝೂಟ್ಯಾಕ್ಸಾ ನಿಯತಕಾಲಿಕೆಯಲ್ಲಿ ಪ್ರಕಟ

   ಝೂಟ್ಯಾಕ್ಸಾ ನಿಯತಕಾಲಿಕೆಯಲ್ಲಿ ಪ್ರಕಟ

   ಮೂವರು ಸಂಶೋಧಕರು ಸೇರಿ ಈ ಅಧ್ಯಯನವನ್ನು ಕೈಗೊಂಡಿದ್ದರು. "ಹಳೆಯ ತಲೆಮಾರು ಹಾಗೂ ಹೊಸ ತಲೆಮಾರಿನ ಸಂಶೋಧಕರು, ವಿಜ್ಞಾನಿಗಳು ಕಪ್ಪೆಗಳ ಮೇಲೆ ನಡೆಸಿರುವ ಹಲವಾರು ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಕಪ್ಪೆಗಳನ್ನು ಅರಿಯುವ ಜೊತೆಗೆ ಅವುಗಳ ಸಂರಕ್ಷಣೆಯಲ್ಲಿ ಇನ್ನೂ ನಮ್ಮದು ಮೊದಲ ಹೆಜ್ಜೆ. ಈ ಸಂಶೋಧನೆಯು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ 'ಝೂಟ್ಯಾಕ್ಸಾ' ಎಂಬ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ" ಎಂದು ಮಾಹಿತಿ ನೀಡುತ್ತಾರೆ ಸಂಶೋಧಕರು.

   English summary
   Rare kalinga frog found in sirsi of uttara kannada district. Usually this frogs can be seen only in eastern ghats
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X